ಬೆಂಗಳೂರು: ಇಂದು ವಿಧಿವಶರಾದ ಸಿಎಂ ಉದಾಸಿ ಪಾರ್ಥಿವ ಶರೀರದ ಅಂತಿಮ ದರ್ಶನವನ್ನ ಮುಖ್ಯಮಂತ್ರಿ ಯಡಿಯೂರಪ್ಪ ಪಡೆದ್ರು. ನಾರಾಯಣ ಹೆಲ್ತ್ ಸಿಟಿ ಆಸ್ಪತ್ರೆಗೆ ಆಗಮಿಸಿ, ಸಿಎಂ ಉದಾಸಿ ಅವರಿಗೆ ಅಂತಿಮ ನಮನ ಸಲ್ಲಿಸಿದ್ರು.

ಬಳಿಕ ಮಾತನಾಡಿದ ಬಿಎಸ್​ವೈ.. ಸಿಎಂ ಉದಾಸಿ ನಿಧನದಿಂದ ಅವರ ಕುಟುಂಬ ಮತ್ತು ನಾಡಿಗೆ ಆಘಾತ ಆಗಿದೆ. ರಾಮಕೃಷ್ಣ ಹೆಗಡೆ, ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿ ಕೆಲಸ ಮಾಡಿದ್ದ ಧೀಮಂತ ವ್ಯಕ್ತಿ. ಪ್ರಮಾಣಿಕತೆ ಪರಿಶ್ರಮದ ಮೂಲಕ ಜನರ ಮನಸ್ಸು ಗೆದ್ದಿದ್ದ ನಾಯಕ ಉದಾಸಿ. ಕಳೆದ ನಾಲ್ಕು ತಿಂಗಳಿನಿಂದ ಆರೋಗ್ಯ ಕೆಟ್ಟಿತ್ತು. ನಾವು ನಾಲ್ಕು ದಿನದ ಹಿಂದೆ ನಾವು ನೋಡಿ ಹೋಗಿದ್ವಿ.

ನಾಳೆ ಅಂತ್ಯಕ್ರಿಯೆ
ಸಂಸದ ಶಿವಕುಮಾರ್ ಉದಾಸಿ ಮಾತನಾಡಿ.. ಉದಾಸಿಯವರ ನಿಧನ ಹಾನಗಲ್ ಮತಕ್ಷೇತ್ರದ ಜನತೆಕ್ಕೆ ಆಘಾತ ಆಗಿದೆ. ನಾನು ಅವರ ಮಗನಾಗಿ ಮಾತನಾಡುತ್ತಿಲ್ಲ, ಅವರ ಪೊಲಿಟಿಕಲ್ ವಿದ್ಯಾರ್ಥಿ ಆಗಿ ಮಾತನಾಡುತ್ತಿದ್ದೇನೆ. ನಾವು ಮಾತನಾಡಬಾರದು ನಮ್ಮ ಕೆಲಸ ಮಾತನಾಡಬೇಕು ಅಂತ ಅವರು ಯಾವಗಲೂ ಹೇಳುತ್ತಿದ್ದರು. ನನ್ನಂತ ಕೆಲವರಿಗೆ ಮಾತ್ರ ಇಂತಹ ಅವಕಾಶ ಸಿಗಲಿದೆ. ಅವರು ಮಾಡಿದಂತ ಅಭಿವೃದ್ಧಿ ಪರ ಯೋಚನೆ ಕೆಲಸಗಳು ನನ್ನಂತಹ ಯುವಕರಿಗೆ ಸ್ಫೂರ್ತಿದಾಯಕ ಎಂದರು.

ನಾಳೆ ಬೆಳಗ್ಗೆ 6 ಗಂಟೆಗೆ ಇಲ್ಲಿಂದ ಮೃತದೇಹ ತೆಗೆದುಕೊಂಡ ಹೋಗಲಿದ್ದಾರೆ. ನಾಳೆ 4 ಗಂಟೆ ಒಳಗೆ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನೇರವೇರಲಿದೆ.

The post ‘ನನ್ನ ಸಹೋದರನನ್ನು ನಾನು ಕಳೆದುಕೊಂಡಂತಾಗಿದೆ’ ಉದಾಸಿ ನಿಧನಕ್ಕೆ BSY ಕಂಬನಿ appeared first on News First Kannada.

Source: newsfirstlive.com

Source link