ಬೆಳಗ್ಗೆ ಎದ್ದ ತಕ್ಷಣ ನಾನು ವೇಕ್‍ಅಪ್ ಸಾಂಗ್ ಮಿಸ್ ಮಾಡಿಕೊಳ್ಳುತ್ತೇನೆ. ಸಖತ್ ಮಜಾ ಮಾಡಿದ್ದೇನೆ. ನನಗೆ ಮರೆಯಲಾರದ ನೆನಪು ಬಿಗ್‍ಬಾಸ್ ಎಂದು ಶಮಂತ್ ಆಟೋಗ್ರಾಫ್ ಎಪಿಸೋಡ್‍ನಲ್ಲಿ ಹೇಳಿದ್ದಾರೆ.

ಬಿಗ್‍ಬಾಸ್ ಮನೆಗೆ ಎಂಟ್ರಿಕೊಟ್ಟಿರುವ ಶಾಕಿಂಗ್ ನ್ಯೂಸ್‍ಅಲ್ಲಿ ಇರುವಾಗಲೇ ನನಗೆ ಕ್ಯಾಪ್ಟನ್ ಪಟ್ಟ ಕೊಟ್ಟು ಹೆಚ್ಚು ಜವಾಬ್ದಾರಿಯನ್ನು ಕೊಟ್ಟು ಬಿಟ್ಟರು. ನನಗೆ ತುಂಬಾ ಭಯಾ ಆಗಿತ್ತು. ಹಿಗೆ 2 ವಾರ ಕ್ಯಾಪ್ಟನ್ ಆಗಿದ್ದೇನು. ಕ್ಯಾಪ್ಟನ್ ಮಾಡಿದವರೆ ನನಗೆ ಕಳಪೆ, ಆಟ ಆಡಿಲ್ಲ ಹಿಗೆ ಕೆಲವು ಕಾರಣಗಳನ್ನು ಕೊಟ್ಟು ನನ್ನ ಕಳಪೆಗೆ ಕಳುಹಿಸಿಬಿಟ್ಟರು. ಆಗ ಸಖತ್ ಬೇಜಾರು ಆಯಿತ್ತು. ಜೀವನದಲ್ಲಿ ಏರು ಪೇರು ಅಂತಾ ಇರುತ್ತೆ ಅಲ್ಲವಾ ಹಾಗೆ ಆಯಿತ್ತು. ಬಿಗ್‍ಬಾಸ್ ಮನೆಯಲ್ಲಿ ನಾವು ಅಂದುಕೊಂಡತೆ ಆಗುವುದಿಲ್ಲ.

ನಾನು ನಾಮಿನೇಟ್ ಆದಾಗ ಸೇವ್ ಮಾಡಿದವರೆ ನಿಗೋಸ್ಕರ ನಮಗೆ ಬೇಡ್ ರೂಮ್ ಇಲ್ಲದೆ ಆಯಿತ್ತು ಎಂದು ನನಗೆ ಆಗಾಗ ಹೇಳಿ ಹೇಳಿ ಬೇಸರವನ್ನುಂಟು ಮಾಡುತ್ತಿದ್ದರು. ಶಮಂತ್ ಲವ್ ಮಾಡೋಕೆ ಬಂದಿದ್ದಾರಾ? ಅಥವಾ ಪ್ರೀತಿ ಮಾಡೋಕೆ ಬಂದಿದ್ದಾರ..? ಎನ್ನುವುದು ಗೊತ್ತಿಲ್ಲ ಎಂದು ದಿವ್ಯಾ ಸುರೇಶ್ ಹೇಳಿದ್ರು. ಆದರೆ ದಿವ್ಯಾ ಮಂಜು ಜೊತೆ ನಾ ಓಡಾಡಿಕೊಂಡು ಇದ್ದದ್ದು, ಆದರೆ ಹೇಳಿದ್ದು ಮಾತ್ರ ನನಗೆ ಎಂದು ಅನ್ನಿಸಿತ್ತು.

ನಾನು ಹಲವು ಬಾರಿ ನಾಮಿನೇಟ್ ಆಗಿದ್ದೇನೆ. ಆದರೆ ಸೇವ್ ಮಾಡಿ ವೈಜಯಂತಿ ಮನೆಯಿಂದ ಆಚೆ ಹೋದಾಗ ನನಗೆ ಆಶ್ಚರ್ಯ ಆಯಿತ್ತು. ಅಂದಿನಿಂದ ನನ್ನ ಆಟವೇ ಬದಲಾಯಿತ್ತು. ಆಮೇಲೆ ಕಣ್ಮಣಿಗಾಗಿ ಹಾಡು ಮಾಡಿದೆ. ಬಿಗ್‍ಬಾಸ್ ಮನೆ, ಸ್ಪರ್ಧಿಗಳು ಹೀಗೆ ಹಲವು ವಿಚಾರಗಳನ್ನು ಇಟ್ಟಕೊಂಡು ನಾನು ಸಾಂಗ್ ಮಾಡಿದೆ. ಗೇಮ್ ಆಡುವಾಗ ಕೆಲವೊಮ್ಮೆ ಬೇಜಾರ್ ಆಗಿದೆ. ನಾವು ಹೊರಗೆ ಇದ್ದು ಕಲಿಯಲಾಗದೆ ಇರುವ ಪಾಟವನ್ನು ಬಿಗ್‍ಬಾಸ್ ಮನೆಯಲ್ಲಿ ಕಲಿತ್ತಿದ್ದೇನೆ. ಮುಗಿಯದ ಪಯಣವಾಗಿದೆ ಎಂದಿದ್ದಾರೆ.

The post ನನ್ನ ಸೇವ್ ಮಾಡಿದವ್ರೇ ಕಳಪೆ ಅಂದ್ರು: ಶಮಂತ್ appeared first on Public TV.

Source: publictv.in

Source link