ಬೆಂಗಳೂರು: ಸಂಸದೆ ಸುಮಲತಾ ಅವರ ಟೀಕೆ ಮಾಡಲು ಬಳಸಿದ ಪದ ಪ್ರಯೋಗದ ಕುರಿತು ಕೇಳಿ ಬಂದಿರುವ ಟೀಕೆಗಳ ಕುರಿತು ಮಾಜಿ ಸಿಎಂ ಹೆಚ್​.ಡಿ.ಕುಮಾರಸ್ವಾಮಿ ಅವರು ನ್ಯೂಸ್​​ಫಸ್ಟ್​ನೊಂದಿಗೆ ಮಾತನಾಡಿ ಸ್ಪಷ್ಟನೆ ನೀಡಿದ್ದು, ನಾನು ಅವರನ್ನು ಅಡ್ಡಡ್ಡ ಮಲಗಿಸಿ ಎಂದು ನಾನು ಹೇಳಿಲ್ಲ. ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸುವ ಸಂದರ್ಭದಲ್ಲಿ ಮೈಶುಗರ್ ಕಾರ್ಖಾನೆ ಆರಂಭಿಸಲು ಯಾರು ಅಡ್ಡಪಡಿಸುತ್ತಿದ್ದಾರೆ ಎಂದು ಕೇಳಿದ ಸಂದರ್ಭದಲ್ಲಿ ನಾನು ಅವರನ್ನು ರೇಫರ್ ಮಾಡಿದ್ದೇನೆ ಅಷ್ಟೇ.

ಕೆಆರ್​ಎಸ್​ ಡ್ಯಾಂ ಬಗ್ಗೆ ಪದೇ ಪದೇ ಬಿರುಕು ಬಿಟ್ಟಿದೆ ಎಂದು ಸಂಸದರು ಹೇಳಿಕೆ ನೀಡಿದ್ದಾರೆ. ಆದ್ದರಿಂದ ಡ್ಯಾಂ ರಕ್ಷಣೆ ಕೊಡಲು ಬೇರೆ ಯಾರಿಂದಲೂ ಸಾಧ್ಯವಿಲ್ಲ, ಹೀಗಾಗಿ ಸಂಸದರನ್ನೇ ಕರೆದುಕೊಂಡು ಹೋಗಿ ಅಲ್ಲಿ ಕಾವಲು ಕಾಯಲು ಮಲಗಿಸಿ ಬಿಡಿ ಎಂದಷ್ಟೇ ನಾನು ಹೇಳಿದ್ದೇನೆ. ನಾನು ಯಾವುದೇ ಅಶ್ಲೀಲ ಪದ ಪ್ರಯೋಗ ಮಾಡಿಲ್ಲ. ನಾನೇನು ಅವರನ್ನು ಅಲ್ಲಿ ಡ್ಯಾನ್ಸ್ ಮಾಡಲಿ ಅಂತಾ ಹೇಳಿಲ್ಲ. ಕಾವಲು ಕಾಯಲು ಕೂರಿಸಿ ಎಂದಿದ್ದೇನೆ. ನಾರಾಯಣ ಗೌಡರು ಬಾಂಬೇ ಹೋಗಿ ಬಂದ ಕಾರಣ ಕನ್ನಡ ಮರೆತು ಹೋಗಿರಬಹುದು ಅಷ್ಟೇ ಎಂದರು.

ಇದನ್ನೂ ಓದಿ: ‘KRS ಜಲಾಶಯದ ಬಾಗಿಲಿನಲ್ಲಿ ಸಂಸದರನ್ನೇ ಮಲಗಿಸಿಬಿಟ್ರೆ ಆಯ್ತು’ -ಸುಮಲತಾ ವಿರುದ್ಧ ಹೆಚ್​​ಡಿಕೆ ಕಿಡಿ

ಅವರು ಪದೇ ಪದೇ ಮಹಿಳೆ ಎಂದು ಹೇಳಿ ಎಷ್ಟು ದಿನ ಅನುಕಂಪ ತೆಗೆದುಕೊಳ್ಳಲು ಸಾಧ್ಯ? ಮಂಡ್ಯ ಜಿಲ್ಲೆಯ ಜನರಿಗೆ ಕೆಆರ್​ಎಸ್ ಡ್ಯಾಂ ಬಿರುಕು ಬಿಟ್ಟಿದೆ ಎಂದು ಹೇಳಿ ಆತಂಕದ ವಾತಾವರಣ ನಿರ್ಮಾಣ ಮಾಡುತ್ತಿದ್ದಾರೆ. ಈಗಾಗಲೇ ತಜ್ಞರ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಯಾವುದೇ ಅಪಾಯವಿಲ್ಲ ಎಂದು ಹೇಳಿದೆ. ಆದರೆ ಅವರು ಡ್ಯಾಂ ಇತಿಹಾಸ ಬಗ್ಗೆ ಗೊತ್ತಿಲ್ಲದೇ ಮಾತನಾಡಿದ್ದಾರೆ. ಅವರ ಬಳಿ ಅಕ್ರಮ ಗಣಿಗಾರಿಕೆ ಬಗ್ಗೆ ಮಾಹಿತಿ ಇದ್ದರೇ ದಾಖಲೆ ಸಮೇತ ನೀಡಲಿ ಎಂದು ಸವಾಲು ಎಸೆದರು.

ಇದನ್ನೂ ಓದಿ: ಮಹಿಳೆ ಬಗ್ಗೆ ಇಂಥಾ ಹೇಳಿಕೆ.. ಮಾಜಿ ಸಿಎಂಗೆ ಜ್ಞಾನ ಇಲ್ವಾ.? HDK ವಿರುದ್ಧ ಮಂಡ್ಯ ಸೊಸೆ ಕೆಂಡ

The post ನನ್ನ ಸ್ನೇಹಿತನ ಸಾವಿನ ಅನುಕಂಪದಿಂದ ಸುಮಲತಾ ಗೆದ್ದಿದ್ದಾರೆ ಅಷ್ಟೇ- ಹೆಚ್​ಡಿಕೆ appeared first on News First Kannada.

Source: newsfirstlive.com

Source link