‘ನನ್ನ ಹಾಳು ಮಾಡೋಕೆ ಈ ಕೆಲಸ ಮಾಡ್ತಿದ್ದೀರಾ’ -ಕಾರ್ಯಕರ್ತರ ವಿರುದ್ಧ ಡಿಕೆಎಸ್​​ ಗರಂ

‘ನನ್ನ ಹಾಳು ಮಾಡೋಕೆ ಈ ಕೆಲಸ ಮಾಡ್ತಿದ್ದೀರಾ’ -ಕಾರ್ಯಕರ್ತರ ವಿರುದ್ಧ ಡಿಕೆಎಸ್​​ ಗರಂ

ಬಾಗಲಕೋಟೆ : ಡಿಕೆ, ಡಿಕೆ, ಎಂದು ಕೂಗಿದ ಅಭಿಮಾನಿಗಳ ವಿರುದ್ಧ ಕೆಪಿಸಿಸಿ ಅಧ್ಯಕ್ಷ  ಡಿ.ಕೆ.ಶಿವಕುಮಾರ್​ ಗರಂ ಆದ ಪ್ರಸಂಗ ನಡೆದಿದೆ.

ಜಿಲ್ಲೆಯ ಬನಹಟ್ಟಿಯಲ್ಲಿ ನೇಕಾರ ಸಮುದಾಯದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದ ಡಿ.ಕೆ.ಶಿವಕುಮಾರ ಭಾಷಣ ಮಾಡಲು ವೇದಿಕೆ ಹೇರಿದ್ದರು. ಈ ಸಮಯದಲ್ಲಿ ಅಭಿಮಾನಿಗಳು ಡಿಕೆ, ಡಿಕೆ ಎಂದು ಜೋರು ದನಿಯಲ್ಲಿ ಜೈಕಾರ ಕೂಗಿದರು.

ಇದರಿಂದ ಗರಂ ಆದ ಡಿ.ಕೆ.ಶಿವಕುಮಾರ್​ ಯಾವನೋ ಅವನು ಡಿಕೆ, ಪಾಕೆ. ನನ್ನ ಹಾಳು ಮಾಡೋಕೆ ಈ ಕೆಲಸಾ ಮಾಡ್ತಿದ್ದೀರಾ ನೀವು, ನಿಮ್ಮ ಯಾವುದೇ ಜೈಕಾರ ಹಾರ ತುರಾಯಿ ಬೇಡ. ನಿಮಗೆ ಕೈ ಮುಗಿದು ಕೇಳಿ ಕೇಳುತ್ತೇನೆ.. ಇಲ್ಲ ಕೆಲಗಡೆ ಬಗ್ಗು ಅಂದರೂ ಓಕೆ.. ಆದರೆ ದಯವಿಟ್ಟು ಜೈಕಾರ ಕೂಗ ಬೇಡಿ. ನಿಮ್ಮ ಅಭಿಮಾನಿವದ್ದರೇ ಮುಂದಕ್ಕೆ ತೋರಿಸಿಕೊಳ್ಳುವುದರಂತೆ. ಆ ಸಮಯ ಮುಂದೇ ಬರುತ್ತದೆ ಎಂದು ಅಭಿಮಾನಿಗಳ ವಿರುದ್ಧ ಗರಂ ಆಗಿದ್ದರು.

ಇದನ್ನೂ ಓದಿ: ನೇರವಾಗಿ ನಾನು ಯಾರನ್ನೂ ಸಭೆಗೆ ಕರೆದಿಲ್ಲ -ಜಮೀರ್ ಹೇಳಿಕೆಗೆ DKS ಕೆಂಡ

The post ‘ನನ್ನ ಹಾಳು ಮಾಡೋಕೆ ಈ ಕೆಲಸ ಮಾಡ್ತಿದ್ದೀರಾ’ -ಕಾರ್ಯಕರ್ತರ ವಿರುದ್ಧ ಡಿಕೆಎಸ್​​ ಗರಂ appeared first on News First Kannada.

Source: newsfirstlive.com

Source link