ಬೆಂಗಳೂರು: ಇದೇ ತಿಂಗಳ 18ರಂದು ಮಾಜಿ ಪ್ರಧಾನಿ ಹೆಚ್.​ಡಿ ದೇವೇಗೌಡ ಅವರ ಹುಟ್ಟುಹಬ್ಬವ. ತಮ್ಮ ಜನ್ಮದಿನದಂದು ಸಡಗರ, ಸಂಭ್ರಮದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳದಂತೆ ಹೆಚ್​ಡಿಡಿ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಈಗ ನಾವು ನಮ್ಮ ಸಾಮಾಜಿಕ ಜವಾಬ್ದಾರಿ ಮತ್ತು ಮಾನವೀಯತೆಯನ್ನು ತೋರಿಸುವ ಸಮಯದಲ್ಲಿದ್ದೇವೆ. ಆದ್ದರಿಂದ ನನ್ನ ಹುಟ್ಟುಹಬ್ಬದ ನಿಮಿತ್ತ ನೀವು ಹಾರ, ತುರಾಯಿ, ಕೇಕ್, ಸಿಹಿ ಎಂದು ಅನಗತ್ಯವಾಗಿ ದುಂದುವೆಚ್ಚ ಮಾಡುವ ಬದಲಿಗೆ ಅದನ್ನೇ ನಿಮ್ಮ ನಿಮ್ಮ ಭಾಗದ ಕೊರೊನಾ ಸಂತ್ರಸ್ತರಿಗೆ ನೆರವಿನ ರೂಪದಲ್ಲಿ ಅವರ ಅಗತ್ಯ ಪೂರೈಕೆಗೆ ಬಳಸಿದಲ್ಲಿ ಅದು ನಿಜಕ್ಕೂ ಸದುಪಯೋಗವಾಗುತ್ತದೆ. ದೇವರು ಮೆಚ್ಚುತ್ತಾನೆ. ನನ್ನ ಅಭಿಮಾನಿಗಳ ಸೇವಾ ಕಾರ್ಯ ನನಗೂ ಸಂತೋಷ ನೀಡುತ್ತದೆ ಎಂದು ದೇವೇಗೌಡರು ಪತ್ರದ ಮೂಲಕ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.

The post ನನ್ನ ಹುಟ್ಟುಹಬ್ಬಕ್ಕೆ ದುಂದುವೆಚ್ಚ ಬೇಡ, ಸಂತ್ರಸ್ತರಿಗೆ ನೆರವಾಗಿ- ಹೆಚ್​ಡಿಡಿ ಮನವಿ appeared first on News First Kannada.

Source: newsfirstlive.com

Source link