ಮೈಸೂರು: ರೋಗಿಯೊಬ್ಬರಿಗೆ ಬೆಡ್ ಕೊಡಿಸುವಂತೆ ರೋಗಿಯ ಸಂಬಂಧಕರು ಮನವಿ ಮಾಡಿಕೊಂಡ ವೇಳೆ ನನ್ನ ಹೆಂಡತಿಗೂ ಬೆಡ್ ಕೊಡಿಸುವ ಯೋಗ್ಯತೆ ನನಗೆ ಇಲ್ಲ ಎಂದು ಮೈಸೂರು ಜಿಲ್ಲಾ ಆರೋಗ್ಯಾಧಿಕಾರಿ ಅಸಹಾಯಕತೆ ತೋಡಿಕೊಂಡ ಅಡಿಯೋ ನ್ಯೂಸ್​ಫಸ್ಟ್​ಗೆ ಲಭ್ಯವಾಗಿದೆ.

ರೋಗಿಯೊಬ್ಬರ ಸಂಬಂಧಿಕರು ಮೈಸೂರು ಡಿಹೆಚ್ಓ ಅಮರನಾಥ್ ಅವರಿಗೆ ಬೆಡ್ ಕೊಡಿಸುವಂತೆ ಮನವಿ ಮಾಡಿಕೊಂಡಿದ್ದಾರೆ. ಈ ವೇಳೆ ಅಸಹಾಯಕತೆ ತೋಡಿಕೊಂಡ ಡಿಹೆಚ್​ಓ.. ವಾರ್ ರೂಂ ಗೆ ಕರೆ‌ ಮಾಡಿ ಅಲ್ಲಿ ಅರೆಂಜ್ ಮಾಡಿಕೊಡುತ್ತಾರೆ ಎಂದಿದ್ದಾರೆ. ಅವರು ರೆಸ್ಪಾಂಡ್ ಮಾಡುತ್ತಿಲ್ಲ ಎಂದು ರೋಗಿಯ ಸಂಬಂಧಿ ಹೇಳಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಡಿಹೆಚ್ಓ.. ಬೆಡ್ ಗೂ, ನನಗೂ ಸಂಬಂಧ ಇಲ್ಲ. ನನಗೆ ಬೆಡ್ ಕೊಡಿಸಲು ಆಗಲ್ಲ,ನನ್ನ ಹೆಂಡತಿಗೂ ಬೆಡ್ ಕೊಡಿಸುವ ಯೋಗ್ಯತೆ ನನಗೆ ಇಲ್ಲ. ನನ್ನ ಕೈ ಸೋತೋಗಿದೆ‌ ಎಂದು ಬೇಸರ ಹೇಳಿದ್ದಾರೆ.

ಹಾಗಿದ್ದರೆ ನಿಮಗೆ ಜವಾಬ್ದಾರಿ ಏಕೆ ಕೆಲಸ  ಬಿಟ್ಟೋಗಿ ಎಂದು ರೋಗಿಯ ಸಂಬಂಧಿಕರು ಹೇಳಿದಾಗ.. ಕೆಲಸದಿಂದ ಕಳುಹಿಸಿಕೊಡಿ.. ಬಿಟ್ಟೋಗಲು ರೆಡಿ ಇದ್ದೇನೆ.. ನನ್ನ ಮೇಲೆ ಯಾವುದೇ ಆ್ಯಕ್ಷನ್ ತೆಗೆದುಕೊಳ್ಳಲಿ. ನಾನು‌ ಮನೆಗೆ ಹೋಗಲು ರೆಡಿ ಇದ್ದೇನೆ. ನನ್ನ ಕೈಯಲ್ಲಿ ಬೆಡ್ ಕೊಡಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

The post ನನ್ನ ಹೆಂಡತಿಗೂ ಬೆಡ್​ ಕೊಡಿಸುವ ಯೋಗ್ಯತೆ ನನಗಿಲ್ಲ- ಅಸಹಾಯಕತೆ ತೋಡಿಕೊಂಡ ಡಿಹೆಚ್​​ಓ appeared first on News First Kannada.

Source: newsfirstlive.com

Source link