ನವದೆಹಲಿ:  ಬಾಲಿವುಡ್ ನಟ ಸೋನು ಸೂದ್ ಕೋವಿಡ್‌–19 ಬಿಕ್ಕಟ್ಟಿನ ಮಧ್ಯೆ ಜನರಿಗೆ ನಿರಂತರವಾಗಿ ಸಹಾಯ ಮಾಡುತ್ತಿದ್ದಾರೆ. ಆದ್ರೆ ಈ ಮಧ್ಯೆ ಕೆಲ ಕಿಡಿಗೇಡಿಗಳು ಸೋನು ಹೆಸರನ್ನ ಬಳಸಿಕೊಂಡು ಸಹಾಯ ಮಾಡುವ ನೆಪದಲ್ಲಿ ನಕಲಿ ಫೌಂಡೇಷನ್ ಮೂಲಕ ದೇಣಿಗೆ ಪಡೆಯುತ್ತಿರುವುದು ಬೆಳಕಿಗೆ ಬಂದಿದೆ.

ಸೋನು ಸೂದ್ ಫೌಂಡೇಷನ್ ಎನ್ನುವ ಹೆಸರಿನಲ್ಲಿ ಕೆಲವರು ದೇಣಿಗೆ ಪಡೆಯುತ್ತಿದ್ದಾರೆ. ಇದಕ್ಕೂ ನನಗೂ ಸಂಬಂಧವಿಲ್ಲ ಎಂದು ಸೂನ್ ಸೂದ್ ಹಾಗೂ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಎಚ್ಚರಿಸಿದ್ದಾರೆ.

ನನ್ನ ಹೆಸರು ಹೇಳಿಕೊಂಡು ಹಣ ಸಂಗ್ರಹಿಸಿದ್ರೆ, ನಿಮ್ಮ ಸಮೀಪದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಅಂತ ಮನವಿ ಮಾಡಿಕೊಂಡಿದ್ದಾರೆ.

 

The post ನನ್ನ ಹೆಸರು ಹೇಳ್ಕೊಂಡು ಹಣ ಸಂಗ್ರಹಿಸಿದ್ರೆ, ಪೊಲೀಸರಿಗೆ ದೂರು ಕೊಡಿ -ಸೋನು ಸೂದ್ appeared first on News First Kannada.

Source: newsfirstlive.com

Source link