ನನ್ನ ಹೋರಾಟ ಜಾತಿ, ಜನಾಂಗದ ವಿರುದ್ಧ ಅಲ್ಲ.. ಭೇದ-ಭಾವದ ವಿರುದ್ಧ ಎಂದ ಚೇತನ್

ನನ್ನ ಹೋರಾಟ ಜಾತಿ, ಜನಾಂಗದ ವಿರುದ್ಧ ಅಲ್ಲ.. ಭೇದ-ಭಾವದ ವಿರುದ್ಧ ಎಂದ ಚೇತನ್

ಬೆಂಗಳೂರು: ಬ್ರಾಹ್ಮಣರ ವಿರುದ್ಧ ಅವಹೇಳನಕಾರಿ ಪೋಸ್ಟ್​ಗೆ ಸಂಬಂಧಿಸಿದಂತೆ ನಟ ಚೇತನ್ ವಿರುದ್ಧ ದೂರು ನೀಡಲಾಗಿತ್ತು. ಈ ಹಿನ್ನೆಲೆ ಇಂದು ಬಸವನಗುಡಿ ಪೊಲೀಸ್ ಠಾಣೆಯಲ್ಲಿ ಚೇತನ್ ವಿಚಾರಣೆಗೆ ಹಾಜರಾಗಿದ್ದರು. ಎರಡು ಗಂಟೆಗೂ ಹೆಚ್ಚು ಕಾಲ ನಡೆದ ವಿಚಾರಣೆಯಲ್ಲಿ ಜಯನಗರ ಎಸಿಪಿ ಶ್ರೀನಿವಾಸ್ ಅವರು ಕೇಳಿದ ಎಲ್ಲ ಪ್ರಶ್ನೆಗಳಿಗೂ ಚೇತನ್ ಉತ್ತರಿಸಿದ್ದಾರೆ ಎನ್ನಲಾಗಿದೆ.

ಇನ್ನು ವಿಚಾರಣೆ ಮುಗಿಸಿ ಹೊರಬಂದ ನಟ ಚೇತನ್.. ನನಗೆ ಕಾನೂನಿನ ಮೇಲೆ ಅಪಾರ ನಂಬಿಕೆ ಇದೆ. ನಾನು ಜಾತಿ, ಜನಾಂಗದ ವಿರುದ್ಧ ಹೋರಾಟ ಮಾಡ್ತಿಲ್ಲ.. ಕೆಲವರು ಹುಟ್ಟಿದ ತಕ್ಷಣ ಶ್ರೇಷ್ಢ.. ಕೆಲವರು ಕೀಳು ಅಂತ ಮಾಡಬಾರದು. ನಾವು ಭೇದ ಭಾವದ ವಿರುದ್ಧ ಹೋರಾಟ ಮಾಡ್ತೀವಿ. ಈ ಹೋರಾಟವನ್ನು ಮುಂದುವರೆಸುತ್ತೇವೆ.. ನಮಗೆ ನ್ಯಾಯ ಸಿಗುತ್ತೆ ಎಂದಿದ್ದಾರೆ.

ಅಲ್ಲದೇ ವಿಚಾರಣೆಗೆ ಅಗತ್ಯವಿದ್ದಲ್ಲಿ ಮತ್ತೆ ಬರ್ತೇನೆ.. 18 ನೇ ತಾರೀಕು ಮತ್ತೆ ಬರೋಕೆ ಹೇಳಿದ್ದಾರೆ. ಎಲ್ಲಾ ಪ್ರಶ್ನೆಗಳಿಗೂ ಸಂಪೂರ್ಣ ಉತ್ತರ ಕೊಡ್ತೇನೆ. ತನಿಖೆಗೆ ಎಲ್ಲಾ ರೀತಿಯ ಸಹಕಾರ ನೀಡ್ತೇನೆ ಎಂದಿದ್ದಾರೆ.

The post ನನ್ನ ಹೋರಾಟ ಜಾತಿ, ಜನಾಂಗದ ವಿರುದ್ಧ ಅಲ್ಲ.. ಭೇದ-ಭಾವದ ವಿರುದ್ಧ ಎಂದ ಚೇತನ್ appeared first on News First Kannada.

Source: newsfirstlive.com

Source link