ನಟಿ ಪ್ರೇಮಾ ಅವರು ನ್ಯೂಸ್ ಫಸ್ಟ್ ಜೊತೆ ಮಾತನಾಡಿ.. ತಮ್ಮ ಮುಂದಿನ ಸಿನಿಮಾ ಕನಸುಗಳ ಬಗ್ಗೆ ಮನದಾಳವನ್ನ ಹಂಚಿಕೊಂಡಿದ್ದಾರೆ.. ‘ನಾನು ಎಲ್ಲೂ ರಿಟೈರ್ಡ್ ಆಗಿಲ್ಲ. ಸ್ವಲ್ಪ ರೆಸ್ಟ್ ತೆಗೆದುಕೊಂಡಿದ್ದೇನೆ’ ಅನ್ನೋ ಮೂಲಕ ಅಭಿಮಾನಿಗಳ ನಿರೀಕ್ಷೆಯನ್ನ ಮತ್ತಷ್ಟು ದುಪ್ಪಟ್ಟು ಮಾಡಿದ್ದಾರೆ.
ತಮ್ಮ ಮುಂದಿನ ಸಿನಿ ಜರ್ನಿ ಬಗ್ಗೆ ಮಾತನಾಡಿ.. ನನಗೆ ಒಳ್ಳೆಯ ಕಥೆ ಸಿಕ್ಕಿರಲಿಲ್ಲ, ಆದರೆ ಒಂದು ವಿಭಿನ್ನವಾದ ಕಥೆ ಇರಬೇಕು. ಅದಕ್ಕೂ ಮೊದಲು ಆ ಕಥೆ ನನಗೆ ಇಷ್ಟವಾಗಬೇಕು. ಪ್ರೇಕ್ಷಕರಿಗೂ ಇಷ್ಟವಾಗುವ ರೀತಿಯಲ್ಲಿ ಆ ಕಥೆ ಇರಬೇಕು. ಹಾಗಾಗಿ ವಿಕ್ರಂ ಅವರು ನನ್ನನ್ನ ಅಪ್ರೋಚ್ ಮಾಡಿದರು.
ನನ್ನ ಬಗ್ಗೆ ಎಲ್ಲರೂ ಹಬ್ಬಿಸಿಕೊಂಡು ಬರುತ್ತಿದ್ದಾರೆ. ಪ್ರೇಮಾ ಅವರು ಮತ್ತೆ ಸಿನಿಮಾ ಮಾಡಲ್ಲ ಎಂದು. ಅದು ಹಾಗಲ್ಲ. ನನಗೆ ಖುಷಿ ಕೊಡಬೇಕು, ಮಾಡಿದ ಕೇಲಸಕ್ಕೆ ತೃಪ್ತಿ ಇರಬೇಕು. ಜನ ಇವಳು ಏನೋ ಮಾಡಿದ್ಲು ಅಂತಾ ಹೇಳಬಾರದು.
ನಾನು ಯಾವುದೇ ತಯಾರಿ ಮಾಡಿಕೊಂಡು ಶೂಟಿಂಗ್ ಸೆಟ್ಗೆ ಹೋಗಲ್ಲ. ಐ ಲವ್ ಮೈ ಕ್ಯಾಮರಾ. ನನ್ನ ಲವರ್ ಯಾರು ಅಂದ್ರೆ.. ನಾನು ಹೇಳ್ತೀನಿ..ಕ್ಯಾಮೆರಾನೇ ನನ್ನ ಲವರ್ ಅಂತ.. ನನಗೆ ಕ್ಯಾಮೆರಾ ಮುಂದೆ ನಿಂತ್ರೆ ನನ್ನನ್ನ ಪ್ರೇಕ್ಷರು ನನ್ನನ್ನ ನೋಡ್ತಾ ಇದ್ದಾರೆ ಅನ್ನೋ ಫೀಲ್ ಬರುತ್ತದೆ. ಆ ಸ್ಪಾಟ್ನಲ್ಲಿಯೇ ನಾನು ರೆಡಿಯಾಗುತ್ತೇನೆ ಎಂದರು.
The post ‘ನನ್ ಲವರ್ ಯಾರು ಅಂದ್ರೆ..’ ನ್ಯೂಸ್ಫಸ್ಟ್ಗೆ ಎಕ್ಸ್ಕ್ಲೂಸಿವ್ ಮಾಹಿತಿ ಕೊಟ್ಟ ಪ್ರೇಮಾ appeared first on News First Kannada.