ಬೆಂಗಳೂರು: ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಇಂದು ಎರಡನೇ ಡೋಸ್​ ಕೊರೊನಾ ಲಸಿಕೆ ಪಡೆದುಕೊಂಡಿದ್ದಾರೆ. ಇದೇ ವೇಳೆ ವೈದ್ಯರ ಬಳಿ ತಮ್ಮ ಪತ್ನಿ ಹಾಗೂ ಮನೆಯ ಲಸಿಕೆ ಹಾಕಿಸಬೇಕಿದೆ. ಏನು ಮಾಡಬೇಕು ಎಂದು ಪ್ರಶ್ನೆ ಮಾಡಿ ಮಾಹಿತಿ ಪಡೆದುಕೊಂಡಿದ್ದಾರೆ.

ಲಸಿಕೆ ಪಡೆಯಲು ವಿಕ್ಟೋರಿಯಾ ಆಸ್ಪತ್ರೆಗೆ ಆಗಮಿಸಿದ ಸಿದ್ದರಾಮಯ್ಯ ಅವರಿಗೆ ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್, ಮಾಜಿ ಸಚಿವ ರಾಜಶೇಖರ ಪಾಟೀಲ್ ಹುಮ್ನಾಬಾದ್, ಶಾಸಕ ನಂಜೇಗೌಡ ಹಾಗೂ ಮಾಜಿ ಸಂಸದ ಉಗ್ರಪ್ಪ ಸಾಥ್ ನೀಡಿದ್ದರು.

ವ್ಯಾಕ್ಸಿನ್​ ಪಡೆದ ಬಳಿಕ ಮಾತನಾಡಿದ ಸಿದ್ದರಾಮಯ್ಯ ಅವರು, ಈ ರೋಗದಿಂದ ಸಂಪೂರ್ಣವಾಗಿ ನಾವು ಹೊರಬರಬೇಕು ಎಂದರೆ ಲಸಿಕೆ ಹಾಕಿಸಿಕೊಳ್ಳುವುದು ಕಡ್ಡಾಯ. ಅರ್ಹರದವರಿಗೆ ಎಲ್ಲರಿಗೂ ಕೊರೊನಾ ಲಸಿಕೆ ಪಡೆಯುವುದು ಕಡ್ಡಾಯ ಎಂದು ಮಾಡಬೇಕು. ನಮ್ಮ ದೇಶದಲ್ಲಿ ವ್ಯಾಕ್ಸಿನ್ ಕೊರತೆ ಇದ್ದರೇ, ವಿದೇಶದಿಂದ ಅಮದು ಮಾಡಿಕೊಳ್ಳಬೇಕು. ನಾನು ಸಾರ್ವಜನಿಕರಲ್ಲಿ ಮನವಿ ಮಾಡುತ್ತಿದ್ದು, ಎಲ್ಲರೂ ಲಸಿಕೆ ಪಡೆಯಿತಿ ಎಂದು ಮನವಿ ಮಾಡಿದರು.

The post ನನ್ ಹೆಂಡ್ತಿಗೆ ಮನೆ ಕೆಲ್ಸದವ್ರಿಗೆ ವ್ಯಾಕ್ಸಿನ್​ ಹಾಕಿಸಬೇಕು- ಸಿದ್ದರಾಮಯ್ಯ appeared first on News First Kannada.

Source: newsfirstlive.com

Source link