ನಮಗೂ ಪರೀಕ್ಷೆ ಇಲ್ಲದೇ ಪಾಸ್ ಮಾಡಿ ಅಂತಿದ್ದಾರೆ ಪದವಿ ವಿದ್ಯಾರ್ಥಿಗಳು.. ಯಾಕೆ ಗೊತ್ತಾ..?

ನಮಗೂ ಪರೀಕ್ಷೆ ಇಲ್ಲದೇ ಪಾಸ್ ಮಾಡಿ ಅಂತಿದ್ದಾರೆ ಪದವಿ ವಿದ್ಯಾರ್ಥಿಗಳು.. ಯಾಕೆ ಗೊತ್ತಾ..?

ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆ ರದ್ದಾದ ಬೆನ್ನಲ್ಲೇ ಇದೀಗ ಪದವಿ, ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳೂ ಪರೀಕ್ಷೆಯನ್ನ ರದ್ದು ಮಾಡುವಂತೆ ಉನ್ನತ ಶಿಕ್ಷಣ ಇಲಾಖೆಗೆ ಡಿಮ್ಯಾಂಡ್ ಇಟ್ಟಿದ್ದಾರೆ ಎನ್ನಲಾಗಿದೆ.

ಕೋವಿಡ್ ಹಿನ್ನೆಲೆ ಪದವಿ, ಸ್ನಾತಕೋತ್ತರ ಪದವಿ ಮತ್ತು ಇಂಜಿನಿಯರಿಂಗ್ ಪರೀಕ್ಷೆಗಳನ್ನು ಮುಂದಿನ ಆದೇಶದವರೆಗೂ ಮುಂದೂಡಿಕೆ ಮಾಡಲಾಗಿತ್ತು. ಪದವಿಯ 1,3 ಮತ್ತು 5ನೇ ಬೆಸ್​ ಸ್ಥಾನಿಕ ಸೆಮಿಸ್ಟರ್​ನ ಪರಿಕ್ಷೆಗಳು ನಡೆದಿಲ್ಲ. ಪರೀಕ್ಷೆ ನಡೆಸದೆಯೇ 2,4 ಮತ್ತು 6ನೇ ಸಮ ಸ್ಥಾನಿಕ ಸೆಮಿಸ್ಟರ್ ತರಗತಿ ಪ್ರಾರಂಭಕ್ಕೆ ಅವಕಾಶ ಕೊಟ್ಟಾಗಿದೆ. ಮಾರ್ಚ್ ಕೊನೆ ವಾರದಿಂದ ಮೇ ತಿಂಗಳ ಮೊದಲ ವಾರದವರೆಗೆ ಪರೀಕ್ಷೆ ನಿಗದಿಯಾಗಿತ್ತು. ಆದ್ರೆ, ಕೊರೊನಾ ಕಂಟ್ರೋಲ್​ಗೆ ಬಂದ್ಮೇಲೆ 1,3, ಮತ್ತು 5ನೇ ಸೆಮಿಸ್ಟರ್ ಪರೀಕ್ಷೆ ನಡೆಸಲು ಅಶ್ವಥ್ ನಾರಾಯಣ್ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಅದ್ರಲ್ಲೂ, ಎರಡೆರಡು ಸೆಮಿಸ್ಟರ್​ಗಳ ಪರೀಕ್ಷೆಗಳು ಏಕ ಕಾಲಕ್ಕೆ ನಡೆಯಲಿದೆ ಅಂತ ಹೇಳಿದ್ದಾರೆ. ಹೀಗಾಗಿ ವಿದ್ಯಾರ್ಥಿಗಳು 12 ವಿಷಯಗಳನ್ನ ಬರೆಯೋಕೆ ಆಗೊಲ್ಲ ಅಂತಿದ್ದಾರಂತೆ.

ಪದವಿ, ಸ್ನಾತಕೋತ್ತರ ಪದವಿ & ಇಂಜಿನಿಯರಿಂಗ್ ಪರೀಕ್ಷೆಗಳ ರದ್ದಿಗೆ ಕಾರಣ ನೀಡ್ತಿರೋದೇನು..?

  1. ಕಳೆದ ವರ್ಷದ ಇಡೀ ಸೆಮಿಸ್ಟರ್ ಆನ್ ಲೈನ್ ಮೂಲಕ ಶಿಕ್ಷಣ
  2. ಒಂದೇ ಬಾರಿಗೆ ಎರಡೆರಡು ಸೆಮಿಸ್ಟರ್ ಪರೀಕ್ಷೆ ಬರೆಯೋದು ಕಷ್ಟ
  3. ಆನ್​ಲೈನ್​ ಕ್ಲಾಸ್ ಮಾಡಿ, ಆಫ್ ಲೈನ್ ಪರೀಕ್ಷೆ ಕಷ್ಟ ಸಾಧ್ಯ
  4. ಪ್ರಸ್ತುತ ಸಮ ಸ್ಥಾನಿಕ ಸೆಮಿಸ್ಟರ್ ಹಾಗೂ ಬಾಕಿ ಉಳಿದ ಬೆಸ ಸ್ಥಾನಿಕ ಸೆಮಿಸ್ಟರ್ನ ಪರೀಕ್ಷೆ ಎರಡೂ ಒಟ್ಟೊಟ್ಟಿಗೆ ಬರೆಯೋದು ಕಷ್ಟ
  5. ಇದರ ಬದಲು ತರಗತಿಯಲ್ಲಿ ನಡೆದ ಟೆಸ್ಟ್ ಆಧಾರಿಸಿ ಪ್ರೊಮೋಟ್​ಗೆ ಮನವಿ
  6. ಒಂದು ಸೆಮಿಸ್ಟರ್​ಗೆ ಎರಡು ಟೆಸ್ಟ್ ಮಾಡಲಾಗುತ್ತೆ
  7. ಈ ಟೆಸ್ಟ್ ಆಧಾರವಾಗಿ ಪರೀಕ್ಷೆಯಿಲ್ಲದೆಯೇ ಪಾಸ್ ಮಾಡುವಂತೆ ಒತ್ತಡ
  8. ಆ ಸಂದರ್ಭದಲ್ಲಿ ಕೊರೊನಾ ಮೂರನೇ ಅಲೆ ಅಬ್ಬರಿಸುವ ಸಾಧ್ಯತೆ

ಹೀಗಾಗಿ ಕಳೆದ ಸೆಮಿಸ್ಟರ್ ಪರೀಕ್ಷೆ ಬದಲಿಗೆ, ಈವನ್ ಸೆಮಿಸ್ಟರ್ ಪರೀಕ್ಷೆ ಮಾತ್ರ ಮಾಡಲು ವಿದ್ಯಾರ್ಥಿಗಳು ಮನವಿ ಮಾಡಿದ್ದಾರೆ.  ಇಲ್ಲದಿದ್ರೆ, ದ್ವಿತೀಯ ಪಿಯುಸಿ ಪರೀಕ್ಷೆ ರದ್ದಿನ ರೀತಿಯೇ ಪದವಿ ಪರೀಕ್ಷೆಗಳನ್ನ ಕ್ಯಾನ್ಸಲ್ ಮಾಡಲು ವಿದ್ಯಾರ್ಥಿಗಳು, ವಿದ್ಯಾರ್ಥಿ ಸಂಘಟನೆಗಳಿಂದ ಒತ್ತಾಯ ಕೇಳಿ ಬಂದಿದೆಯಂತೆ.

ಸದ್ಯ, ಆಗಸ್ಟ್ ಕೊನೆ ವಾರ, ಅಥವಾ ಸೆಪ್ಟೆಂಬರ್ ಮೊದಲ ತಿಂಗಳಲ್ಲಿ ಪರೀಕ್ಷೆ ನಡೆಸಲು ಉನ್ನತ ಶಿಕ್ಷಣ ಇಲಾಖೆ ಚಿಂತನೆ ನಡೆಸಲಾಗಿದೆ. ಹೀಗಾಗಿ, ವಿಶ್ವ ವಿದ್ಯಾಲಯಗಳ ಕುಲಪತಿಗಳಿಗೆ, ಬೆಂಗಳೂರು ವಿವಿ ಜ್ಞಾನ ಭಾರತಿ ಕ್ಯಾಂಪಸ್, ಬೆಂಗಳೂರು ಕೇಂದ್ರ ವಿವಿ, ಬೆಂಗಳೂರು ನಾರ್ಥ್ ವಿವಿ ಹಾಗೂ ಪದವಿ ಕಾಲೇಜು ಶಿಕ್ಷಣ ಇಲಾಖೆ ಆಯುಕ್ತನ್ನ ಭೇಟಿ ಮಾಡಿ ದ್ಯಾರ್ಥಿಗಳು ಮನವಿ ಸಲ್ಲಿಸಿದ್ದಾರೆ.

The post ನಮಗೂ ಪರೀಕ್ಷೆ ಇಲ್ಲದೇ ಪಾಸ್ ಮಾಡಿ ಅಂತಿದ್ದಾರೆ ಪದವಿ ವಿದ್ಯಾರ್ಥಿಗಳು.. ಯಾಕೆ ಗೊತ್ತಾ..? appeared first on News First Kannada.

Source: newsfirstlive.com

Source link