ನವದೆಹಲಿ: ದೇಶದ ‘ನ್ಯೂ ಡಿಜಿಟಲ್ ಕಾನೂನು’ ಒಪ್ಪಿಕೊಳ್ಳಲು ಮೀನಾಮೇಶ ಮಾಡ್ತಿರುವ ಟ್ವಿಟರ್​​​ ಸಂಸ್ಥೆಯ ನಡೆಯನ್ನ ಪ್ರಶ್ನಿಸಿ ಕೇಂದ್ರ ಸರ್ಕಾರ ಪತ್ರಿಕಾ ಪ್ರಕಟಣೆ ಹೊರಡಿಸಿ ಎಚ್ಚರಿಕೆಯನ್ನ ನೀಡಿದೆ.

ಅತೀ ದೊಡ್ಡ ಪ್ರಜಾಪ್ರಭುತ್ವಕ್ಕೆ ಪಾಠ ಹೇಳೋದನ್ನ ನಿಲ್ಲಿಸಿ
ಕಾಂಗ್ರೆಸ್​ ವಿರುದ್ಧದ ಟೂಲ್​ ಕಿಟ್​ ಆರೋಪ ಪ್ರಕರಣ ಹಾಗೂ ದೇಶದ ನೂತನ ಡಿಜಿಟಲ್ ಕಾನೂನು ಒಪ್ಪಿಕೊಳ್ಳುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ್ದ ಟ್ವಿಟರ್​, ಈ ರೀತೀಯ ಬೆದರಿಕೆ ತಂತ್ರಗಳು ಆತಂಕಕಾರಿಯಾಗಿವೆ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅಪಾಯಕಾರಿ ಎಂದು ಟ್ವಿಟರ್ ಆರೋಪಿಸಿತ್ತು. ಈ ಆರೋಪದ ಬೆನ್ನಲ್ಲೇ ಪತ್ರಿಕಾ ಪ್ರಕಟಣೆ ಹೊರಡಿಸಿ ಖಾರವಾಗಿ ಪ್ರತಿಕ್ರಿಯಿಸಿರುವ ಕೇಂದ್ರ ಸರ್ಕಾರ, ಯಾವುದೋ ಒಂದು ವಿಚಾರವನ್ನ ಅನಾವಶ್ಯಕವಾಗಿ ಜಗ್ಗುವುದರ ಬದಲಾಗಿ, ಈ ನೆಲದ ಕಾನೂನುಗಳನ್ನ ಒಪ್ಪಿಕೊಳ್ಳಿ ಅಂತಾ ಖಡಕ್​​ ಆಗಿ ಸೂಚನೆ ನೀಡಿದೆ.

ನಮ್ಮ ದೇಶಕ್ಕೆ ನಿರ್ದೇಶನ ನೀಡುವ ಯಾವುದೇ ಹಕ್ಕಿಲ್ಲ
ಭಾರತ ದೇಶವು ಶತ, ಶತಮಾನಗಳಿಂದ ವಾಕ್​​ ಚಾತುರ್ಯ ಮತ್ತು ಪ್ರಜಾಪ್ರಭುತ್ವ ಆಚರಣೆಯ ಅದ್ಭುತ ಸಂಪ್ರದಾಯವನ್ನ ಹೊಂದಿದೆ. ನಮ್ಮ ದೇಶದ ವಾಕ್ ಸ್ವಾತಂತ್ರ್ಯವನ್ನ ರಕ್ಷಿಸೋದು ಟ್ವಿಟರ್​​ನಂತಹ ಸಂಸ್ಥೆಗಳಲ್ಲ. ವಿದೇಶಿ ಸಂಸ್ಥೆಗಳಿಗೆ ಯಾವುದೇ ಅಧಿಕಾರ ಇಲ್ಲ. ನಮ್ಮದು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ಹೊಂದಿರುವ ದೇಶ.

ಟ್ವಿಟರ್ ಸಂಸ್ಥೆಯ ಇಂದಿನ ಹೇಳಿಕೆಯು ಟ್ವಿಟರ್​​ ವಿಶ್ವದ ಅತಿದೊಡ್ಡ ಪ್ರಜಾಭುತ್ವನ್ನ ಹೊಂದಿರುವ ಭಾರತಕ್ಕೆ ಪಾಠ ಹೇಳಲು ಪ್ರಯತ್ನಿಸಿದಂತಿದೆ. ಇದು ದೇಶದ ಕಾನು ವ್ಯವಸ್ಥೆಯನ್ನ ದುರ್ಬಲಗೊಳಿಸಲು ಪ್ರಯತ್ನಿಸುತ್ತಿದೆ. ಟ್ವಿಟರ್​​ನ ಉದ್ದೇಶ ಪೂರ್ವಕ ಹೇಳಿಕೆಗೆ ನಮ್ಮ ಧಿಕ್ಕಾರ ಇದೆ.

ಕಾನೂನು ರಚನೆ ಸಾರ್ವಭೌಮತ್ವದ ಏಕೈಕ ಹಕ್ಕು
ಕಾನೂನು ರಚನೆ ಮತ್ತು ಪಾಲಿಸಿ ಫಾರ್ಮುಲೇಷನ್ ಸಾರ್ವಭೌಮತ್ವದ ಏಕೈಕ ಹಕ್ಕು. ಟ್ವಿಟರ್ ಕೇವಲ ಒಂದು ಸೋಶಿಯಲ್ ಮೀಡಿಯಾ ಅಷ್ಟೇ. ಇದಕ್ಕೆ ನಮ್ಮ ದೇಶದ ಕಾನೂನುಗಳು ಹೇಗಿರಬೇಕು ಎಂದು ನಿರ್ದೇಶಿಸಲು ಯಾವುದೇ ಹಕ್ಕಿಲ್ಲ ಎಂದು ಕಟು ಪದಗಳಿಂದ ಎಚ್ಚರಿಕೆಯನ್ನ ನೀಡಿದೆ.

ಟ್ವಿಟರ್​​ ಭಾರತದ ಜನರಿಗೆ ಬದ್ಧವಾಗಿದೆ ಅಂತಾ ಹೇಳಿದೆ. ವಿಪರ್ಯಾಸ ಏನೆಂದರೆ ಟ್ವಿಟರ್‌ನ ಈ ಬದ್ಧತೆ ಇತ್ತೀಚಿನ ದಿನಗಳಲ್ಲಿ ಕಂಡುಬಂದಿಲ್ಲ ಎಂದು ಕೆಲವು ಉದಾಹರಣೆಗಳನ್ನೂ ಕೇಂದ್ರ ಸರ್ಕಾರ ನೀಡಿದೆ. ಟ್ವಿಟರ್ ಸೇರಿದಂತೆ ಸೋಶಿಯಲ್ ಮೀಡಿಯಾಗಳು ಭಾರತದಲ್ಲಿ ಯಾವಾಗಲೂ ಸುರಕ್ಷಿತವಾಗಿರುತ್ತವೆ. ಅವರ ವೈಯಕ್ತಿಕ ಸುರಕ್ಷತೆ ಮತ್ತು ಭದ್ರತೆಗೆ ಯಾವುದೇ ಬೆದರಿಕೆ ಇಲ್ಲ ಅಂತಾ ಕೇಂದ್ರ ಸರ್ಕಾರ ಇದೇ ವೇಳೆ ಸ್ಪಷ್ಟಪಡಿಸಿದೆ.

ಇಂದು ಟ್ವಿಟರ್ ಬಿಡುಗಡೆ ಮಾಡಿದ ದುರಾದೃಷ್ಟಕರ ಹೇಳಿಕೆ ಸಂಪೂರ್ಣವಾಗಿ ಆಧಾರರಹಿತ ಮತ್ತು ಸುಳ್ಳು. ಟ್ವಿಟರ್ ನಮ್ಮ ದೇಶವನ್ನ ಅಪಖ್ಯಾತಿಗೊಳಿಸಲು ಪ್ರಯತ್ನಿಸುತ್ತಿದೆ. ಇದನ್ನ ಭಾರತ ಖಂಡಿಸುತ್ತದೆ. ಟೂಲ್​ಕಿಟ್ ಪ್ರಕರಣದಲ್ಲಿ ನಮ್ಮ ಪೊಲೀಸರ ಕ್ರಮವನ್ನ ಬೆದರಿಕೆ ಅಂತಾ ಟ್ವೀಟರ್ ಹೇಳಿದೆ. ಟ್ವಿಟರ್​ ಮೊದಲು ಈ ದೇಶದ ಕಾನೂನನ್ನ ಅನುಸರಿಸಲೇಬೇಕು ಎಂದು ಸ್ಪಷ್ಟಪಡಿಸಿದೆ.

ಟ್ವಿಟರ್​ಗೆ ಕೇಂದ್ರದ ತರಾಟೆ

ಭಾರತ- ಚೀನಾ ನಡುವೆ ಶಾಂತಿ ಮಾತುಕತೆ ನಡೆಯುವ ಸಮಯದಲ್ಲಿ ಟ್ವಿಟರ್​​ ಭಾರತದ ಕೇಂದ್ರಾಡಳಿತ ಪ್ರದೇಶ ಲಡಾಖ್​ನ್ನು ಪೀಪಲ್ಸ್ ರಿಪಬ್ಲಿಕ್ ಆಫ್ ಚೈನಾದ ಭಾಗವೆಂದು ತೋರಿಸಿತು. ಮತ್ತು ಅದನ್ನು ಒಪ್ಪಿಕೊಳ್ಳಲು ಸಾಕಷ್ಟು ಸಮಯ ತೆಗೆದುಕೊಳ್ತು.

ಯುಎಸ್​ಎ ಕ್ಯಾಪಿಟೊಲ್ ಹಿಲ್​ನಲ್ಲಿ ಹಿಂಸಾತ್ಮಕ ಘಟನೆ ನಡೆದಾಗ ಟ್ವಿಟರ್ ಸ್ವತಂ ಆಗಿ ದಾಳಿಗೆ ಕಾರಣರಾದವರು ಎನ್ನಲಾದವರ ಮೇಲೆ ಆ್ಯಕ್ಷನ್ ತೆಗೆದುಕೊಳ್ತು. ಆದ್ರೆ ಅದಾದ ಕೆಲವೇ ದಿನಗಳಲ್ಲಿ ಕೆಂಪುಕೋಟೆಯ ಬಳಿ ಕಾನೂನು ವಿರೋಧಿ ಘಟನೆ ನಡೆದಾಗ ಸರ್ಕಾರ ಮಾಡಿದ ಮನವಿಯನ್ನ ನಿರಾಕರಿಸಿತು. ಕೆಲವು ದಿನಗಳಾದ ಮೇಲೆ ಅನುಸರಿಸಿದರೂ ಅರ್ಧ ಮಾತ್ರ ಅನುಸರಿಸಿತ್ತು. ಅದೂ ತೊಂದರೆಯಾದಾಗ.

ಟ್ವಿಟರ್​ನಲ್ಲಿ ವ್ಯಾಪಕವಾಗಿ ಕೊರೊನಾ ವ್ಯಾಕ್ಸಿನ್​ ಬಗ್ಗೆ ಸುಳ್ಳುಸುದ್ದಿಗಳನ್ನ ಹಬ್ಬಿಸಿದಾಗ ಟ್ವಿಟರ್ ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ. ಇದೇನಾ ಭಾರತೀಯರೊಂದಿಗೆ ನಿಮ್ಮ ಕಮಿಟ್​ಮೆಂಟ್..?

ಒಂದೆಡೆ ವಿಶ್ವಸಂಸ್ಥೆಯೇ ನಿರಾಕರಿಸಿದರೂ B.1.617 ಸೆವೆನ್ ಮ್ಯೂಟಂಟ್ ವೈರಸ್​ನ್ನು ಭಾರತೀಯ ವೇರಿಯಂಟ್ ಎಂದು ಬಿಂಬಿಸಿದಾಗಲೂ ಟ್ವಿಟರ್ ಯಾವುದೇ ಆ್ಯಕ್ಷನ್ ತೆಗೆದುಕೊಳ್ಳಲಿಲ್ಲ,

The post ನಮಗೆ ನಿಮ್ಮ ಪಾಠ ಬೇಕಿಲ್ಲ, ಮೊದಲು ಈ ನೆಲದ ಕಾನೂನು ಒಪ್ಪಿಕೊಳ್ಳಿ -ಟ್ವಿಟರ್​ಗೆ ಕೇಂದ್ರ ವಾರ್ನಿಂಗ್ appeared first on News First Kannada.

Source: newsfirstlive.com

Source link