ನಮಸ್ಕಾರ ನಮಸ್ಕಾರ ನಮಸ್ಕಾರ.. ಅಂತಾ ಹೇಳುತ್ತಲೇ ಕನ್ನಡಿಗರ ಮನೆ ಮನೆಯ ಮಕ್ಕಳು, ಮಹಿಳೆಯರು, ವೃದ್ಧರು, ಯುವತಿಯರು, ಯುವಕರು ಹೀಗೆ ಮನೆ ಮಂದಿಯ ಮನವನ್ನೆಲ್ಲ ಗೆದ್ದಿದ್ದ ಕಾಮಿಡಿ ಟೈಂ ಗಣೇಶ್ ನಂತರ.. ಗೋಲ್ಡನ್ ಸ್ಟಾರ್ ಆದ ಸ್ಟೋರಿ ಎಲ್ಲರಿಗೂ ಗೊತ್ತಿರುವಂಥದ್ದೆ. ಆದ್ರೆ ವಿಷಯ ಏನಪ್ಪ ಅಂದ್ರೆ, ಗಣೇಶ್ ಈಗ ಮತ್ತೆ ಕಿರುತೆರೆಗೆ ಮರಳ್ತಿರೋದು.. ಸದ್ಯ ಡ್ಯಾಡಿ ನಂಬರ್ 1 ಶೋ ಹೋಸ್ಟ್​ ಆಗಿ ಅವರು ಬರ್ತಿರೋದು ಬಹುತೇಕ ಕನ್ಫರ್ಮ್ ಎನ್ನಲಾಗ್ತಿದೆ.

ಹಾಗೆ ನೊಡಿದ್ರೆ ಲಾಕ್​ಡೌನ್​ ಮುಗಿದಿದ್ದೇ ತಡ ನಾ ಮುಂದು.. ತಾ ಮುಂದು.. ಎಂದು ರಿಯಾಲಿಟಿ ಶೋಗಳ ಸದ್ದು ಜೋರಾಗಿದೆ. ಈಗ ಆ ಪಟ್ಟಿಗೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲು ಸಿದ್ಧವಾಗಿರುವ Daddy No.1 ಶೋ ಸೇರುತ್ತಿದೆ.

ಹೌದು, ಈ ಹಿಂದೆ  2008ರಲ್ಲಿ Daddy No.1 ಶೋ ನಡೆಸಲಾಗಿತ್ತು. ಇದು ಸಕ್ಕತ್ತಾಗಿ ಕ್ಲಿಕ್​ ಆಗಿ ಜನರ ಮನಸ್ಸನ್ನು ಗೆದ್ದಿತ್ತು. ಈಗ ದಶಕದ ನಂತ್ರ ಮತ್ತೆ ಶೋ ಪುನರ್​ ಆರಂಭಿಸಲಾಗುತ್ತಿರುವ ಕುರಿತು ಫೆಬ್ರವರಿಯಲ್ಲಿಯೇ ವಾಹಿನಿ ಮಾಹಿತಿ ನೀಡಿತ್ತು, ಕೊರೊನಾ ಲಾಕ್‌ಡೌನ್‌ನಿಂದಾಗಿ ಸ್ವಲ್ಪ ದಿನ ಶೋ ಮೂಂದುಡಿದ್ದು ಗೊತ್ತಿರುವ ವಿಚಾರ. ಈಗ ಶೋಗೆ ಪ್ರಿಪರೇಷನ್ ಶುರುವಾಗಿದೆ.

ಈಗ ಕೇಳಿ ಬರ್ತಿರೋ ಸುದ್ದಿ ಕೇಳಿದ್ರೇ ಗೋಲ್ಡನ್​ ಸ್ಟಾರ್‌ ಫಾನ್ಸ್​ಗೆ ಸಕ್ಕತ್​ ಖುಷಿಯಾಗುತ್ತೆ. ಅದೇನಂದ್ರೆ ಗೋಲ್ಡನ್​ ಸ್ಟಾರ್​ ಗಣೇಶ್​ ಕಾರ್ಯಕ್ರಮವನ್ನು ಮುನ್ನಡೆಸಲಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.

ಹೌದು, ಈಗಾಲೇ ಕಾರ್ಯಕ್ರಮಕ್ಕೆ ಆಡಿಷನ್​ ಕೂಡ ನಡೆದಿದೆ. ಗಣೇಶ್ ಅವರು ಶೋ ಹೋಸ್ಟ್​ ಮಾಡುವ ಕುರಿತು ಅಧಿಕೃತ ಮಾಹಿತಿ ಬರಬೇಕಿದೆ. ಈಗಾಗಲೇ ಮಾತುಕತೆ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ. ಆದ್ರೆ, ಇನ್ನೂ ಅಂತಿಮವಾಗಿಲ್ಲ ಎಂದು ಮೂಲಗಳು ತಿಳಿಸಿವೆ.

ಗಣೇಶ ಅವರು ರಿಯಾಲಿಟಿ ಶೋವನ್ನು ಹೋಸ್ಟ್​ ಮಾಡುತ್ತಿರುವುದು ಇದೇ ಮೊದಲೇನಲ್ಲ. ಅವರು ಈ ಹಿಂದೆ ಸೂಪರ್​ ಮಿನಿಟ್ ರಿಯಾಲಿಟಿ ಶೋ ಕೂಡ  ನಡೆಸಿಕೊಟ್ಟಿದ್ದರು. ಆ ಕಾರ್ಯಕ್ರಮ ಕೂಡಾ ಕ್ಲಿಕ್​ ಆಗಿತ್ತು. ಒಂದು ವೇಳೆ Daddy No.1 ಶೋಗೆ ಗಣಿ ಎಂಟ್ರಿ ಕೊಟ್ಟರೆ ಫ್ಯಾನ್ಸ್​ಗಳಿಗೆ ಮತ್ತೆ ಅವರನ್ನು ಕಿರುತೆರೆಯಲ್ಲಿ ನೋಡುವ ಅವಕಾಶ ದೊರಕಲಿದೆ.

The post ನಮಸ್ಕಾರ ನಮಸ್ಕಾರ ನಮಸ್ಕಾರ.. ಕಿರುತೆರೆಗೆ ಗೋಲ್ಡನ್​ಸ್ಟಾರ್? Daddy No.1 ಆಗ್ತಾರಾ ಗಣೇಶ್? appeared first on News First Kannada.

Source: newsfirstlive.com

Source link