‘ನಮ್ಮದು ಡಬ್ಬಾ ಫೋನ್​​, ಟ್ಯಾಪ್​​ ಮಾಡಿ ಏನ್ಮಾಡ್ತಾರೆ’ -ಪೆಗಸಸ್ ಬಗ್ಗೆ ಹೀಗಂದ್ರು ಹೆಚ್​​​ಡಿ ರೇವಣ್ಣ

‘ನಮ್ಮದು ಡಬ್ಬಾ ಫೋನ್​​, ಟ್ಯಾಪ್​​ ಮಾಡಿ ಏನ್ಮಾಡ್ತಾರೆ’ -ಪೆಗಸಸ್ ಬಗ್ಗೆ ಹೀಗಂದ್ರು ಹೆಚ್​​​ಡಿ ರೇವಣ್ಣ

ನವದೆಹಲಿ: ಪೆಗಾಸಸ್ ಗೂಢಚಾರ್ಯೆ ಕುರಿತು ಇಡೀ ದೇಶಾದ್ಯಂತ ಭಾರೀ ಚರ್ಚೆ ನಡೆಯುತ್ತಿದೆ. ಕರ್ನಾಟಕದ ಪ್ರಮುಖ ರಾಜಕಾರಣಿಗಳು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಹಿಂದಿನ ಮೈತ್ರಿ ಸರ್ಕಾರದ ಪತನಕ್ಕೆ ಇದೇ ಪೆಗಾಸಸ್ ಗೂಢಚರ್ಯ ಕಾರಣ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಕೇಂದ್ರ ಸರ್ಕಾರದ ವಿರುದ್ಧ ಕೆಂಡಕಾರಿದ್ದರು. ಈ ಬೆನ್ನಲ್ಲೀಗ ಮಾಜಿ ಸಚಿವ ಎಚ್​​.ಡಿ ರೇವಣ್ಣ ಪ್ರತಿಕ್ರಿಯೆ ನೀಡಿದ್ದಾರೆ.

ಈ ಸಂಬಂಧ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಎಚ್​.ಡಿ ರೇವಣ್ಣ, ಈ ವಿಚಾರದ ಬಗ್ಗೆ ನಾನು ಪ್ರತಿಕ್ರಿಯೆ ನೀಡಲ್ಲ. ಅದು ದೊಡ್ಡವರ ವಿಚಾರವಾದ್ದರಿಂದ ನಾನು ಪ್ರತಿಕ್ರಿಯೆ ನೀಡುವಷ್ಟು ಮಟ್ಟಕ್ಕೆ ಬೆಳೆದಿಲ್ಲ. ಹಾಗಾಗಿ ನನ್ನ ಬಳಿಯಲ್ಲದೇ ಎಚ್​​.ಡಿ ದೇವೇಗೌಡ, ಕುಮಾರಸ್ವಾಮಿ ಹತ್ತಿರ ಫೋನ್​​ ಟ್ಯಾಪಿಂಗ್​​​ ಬಗ್ಗೆ ಕೇಳಿ ಉತ್ತರ ಪಡೆದುಕೊಳ್ಳಿ ಎಂದರು.

ಇದನ್ನೂ ಓದಿ: HDD ಕುಟುಂಬದಿಂದ ಮತ್ತೊಂದು ಕುಡಿ ರಾಜಕೀಯಕ್ಕೆ ಎಂಟ್ರಿ -ಪ್ರೀತಂ ಗೌಡ ಎದುರು ಅಖಾಡಕ್ಕೆ?

ನನ್ನ ಹತ್ರ ಇರೊದು ಡಬ್ಬಾ ಫೊನು, ನಂಗೇನು ಗೊತ್ತಿಲ್ಲ. ಟ್ಯಾಪ್ ಆದ್ರು ಏನಾದ್ರು ಮಾಡ್ಲಿ. ನಾಯಕತ್ವ ಬದಲಾವಣೆ ಬಿಜೆಪಿ ಆಂತರಿಕ ವಿಚಾರ. ಅದಕ್ಕೂ ನಮಗೂ ಸಂಬಂಧ ಇಲ್ಲ. ಶ್ರೀರಂಗಪಟ್ಟಣ ಮತ್ತು ಪಾಂಡವಪುರ ರಸ್ತೆಯಲ್ಲಿ ಅಂಡರ್ ಪಾಸ್ ನಿರ್ಮಾಣದ ಚರ್ಚೆಗಾಗಿ ದೆಹಲಿಗೆ ಬಂದಿದ್ದೇವೆ ಎಂದು ಹೇಳಿದರು.

The post ‘ನಮ್ಮದು ಡಬ್ಬಾ ಫೋನ್​​, ಟ್ಯಾಪ್​​ ಮಾಡಿ ಏನ್ಮಾಡ್ತಾರೆ’ -ಪೆಗಸಸ್ ಬಗ್ಗೆ ಹೀಗಂದ್ರು ಹೆಚ್​​​ಡಿ ರೇವಣ್ಣ appeared first on News First Kannada.

Source: newsfirstlive.com

Source link