ನಮ್ಮದು ಸ್ಪಂದನಾಶೀಲ ಸರ್ಕಾರ, ರೈತರ ಬೇಡಿಕೆಗಳಿಗೆ ಕೇಂದ್ರ ಸ್ಪಂದಿಸಿದೆ -ಸಿಎಂ ಬೊಮ್ಮಾಯಿ


ಬೆಂಗಳೂರು: ರೈತರಿಂದ ಭಾರೀ ವಿರೋಧಕ್ಕೆ ಕಾರಣವಾಗಿದ್ದ ಮೂರು ಕೃಷಿ ಕಾಯ್ದೆಗಳನ್ನ ಕೇಂದ್ರ ಸರ್ಕಾರ ವಾಪಸ್ ಪಡೆದುಕೊಳ್ಳುವುದಾಗಿ ಹೇಳಿದೆ. ಈ ಕುರಿತು ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿದ್ದು ನಮ್ಮದು ಸ್ಪಂದನಾಶೀಲ ಸರ್ಕಾರವಾಗಿದ್ದು ರೈತರ ಬೇಡಿಕೆಗಳಿಗೆ ಸ್ಪಂದಿಸಿದೆ ಎಂದಿದ್ದಾರೆ.

ಈ ಕುರಿತು ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು.. ಕೇಂದ್ರ ಸರ್ಕಾರದ ಈ ನಿರ್ಧಾರವನ್ನು ಸ್ವಾಗತಿಸುತ್ತೇವೆ. ಪಂಚರಾಜ್ಯಗಳ ಚುನಾವಣೆ ಹಿನ್ನೆಲೆ ಈ ನಿರ್ಧಾರ ಎಂಬುದು ಸತ್ಯಕ್ಕೆ ದೂರವಾಗಿದೆ. ಏಕೆಂದರೆ ಈ ಹೋರಾಟದ ಸಮಯದಲ್ಲೂ ಮೋದಿ ನೇತೃತ್ವದ ಸರ್ಕಾರ ಅಲ್ಲಲ್ಲಿ ಜಯ ಗಳಿಸಿದೆ ಎಂದರು.

ಎಲ್ಲ ರಾಜ್ಯಗಳ ತೀರ್ಮಾನ ಪಡೆದುಕೊಂಡು ಈ ಕಾಯ್ದೆಗಳನ್ನು ಜಾರಿಗೆ ತಂದಿದ್ದರೂ ಕೂಡ ಉತ್ತರ ಪ್ರದೇಶ ಮತ್ತು ಪಂಜಾಬ್​ ರೈತರು ವಿರೋಧಿಸಿದ್ದರು. ಈ ಮೊದಲಿದ್ದ ವ್ಯವಸ್ಥೆಯಡಿಯಲ್ಲಿಯೇ ರೈತರು ಮುಂದುವರೆಯಲು ನಿರ್ಧರಿಸಿದ್ದಾರೆ. ಈ ತೀರ್ಮಾನದಿಂದ ಸರ್ಕಾರ ಮಣಿದಿಲ್ಲ. ಅನ್ನದಾತನ ಕೂಗಿಗೆ ಸ್ಪಂದಿಸಿದೆ ಎಂದು ಕೇಂದ್ರ ಸರ್ಕಾರದ ನಿರ್ಧಾರವನ್ನು ಸಿಎಂ ಬೊಮ್ಮಾಯಿ ಸಮರ್ಥಿಸಿಕೊಂಡರು.

ಇದನ್ನೂ ಓದಿ:BIG BREAKING ನೂತನ 3 ಕೃಷಿ ಕಾನೂನು ವಾಪಸ್​ ಪಡೆಯುತ್ತೇವೆ -ಪ್ರಧಾನಿ ಮೋದಿ ಘೋಷಣೆ

ಇದನ್ನೂ ಓದಿ:ಅನ್ನದಾತರ ಹೋರಾಟಕ್ಕೆ ಮಣಿದ ಮೋದಿ ಸರ್ಕಾರ; ವಾಪಸ್ ಪಡೆದ 3 ಕೃಷಿ ಕಾಯ್ದೆಗಳು ಯಾವುದು..?

News First Live Kannada


Leave a Reply

Your email address will not be published. Required fields are marked *