ನಮ್ಮನೆ ಯುವರಾಣಿಗೆ ಕಿನ್ನರಿ ಖ್ಯಾತಿಯ ವಿಲನ್​​ ರೋಶನಿ ಎಂಟ್ರಿ..!


ರೋಶನಿ ತೆಳ್ಕಾರ…ಕಿನ್ನರಿ ಧಾರಾವಾಹಿ ಮೂಲಕ ಕಿರುತೆರೆ ವೀಕ್ಷಕರನ್ನ ರಂಜಿಸಿದ ಚಲುವೆ. ಕಿನ್ನರಿಯಲ್ಲಿ ವಿಲನ್​​ ಆಗಿ ಮಿಂಚಿ ಮರೆಯಾಗಿದ್ದ ರೋಶನಿ ಈಗ ಮತ್ತೇ ಕಿರುತೆರೆಗೆ ಮರಳಿದ್ದಾರೆ. ಯಸ್​, ನಮ್ಮನೆ ಯುವರಾಣಿ ತಂಡಕ್ಕೆ ಕಾಲಿಟ್ಟಿದ್ದಾರೆ ರೋಶನಿ.

ಈಗಾಗಲೇ ನಮ್ಮನೆ ಯುವಾರಾಣಿ ತಂಡದಲ್ಲಿ ದೊಡ್ಡ ಬದಲಾವಣೆಗಳಾಗಿದ್ದು, ಕತೆಯ ಜೊತೆ ಜೊತೆಗೆ ತಾರಾಗಣ ಕೂಡ ಬದಲಾಗುತ್ತಿದೆ. ಪ್ರಣಮ್​ ಪಾತ್ರದಲ್ಲಿ ಸ್ನೇಹಿತ್​ ಗೌಡ, ಗಂಗಾ ಪಾತ್ರದಲ್ಲಿ ಖುಷಿ ಶಿವು, ನಮ್ರತಾ ಪಾತ್ರದಲ್ಲಿ ನಟಿ ಲತಾ ಮಿಂಚುತ್ತಿದ್ದಾರೆ. ಈ ಸಾಲಿಗೆ ಈಗ ರೋಶನಿ ಕೂಡ ಸೇರ್ಪಡೆಯಾಗಿದ್ದು, ನವ್ಯಾ ಪಾತ್ರವನ್ನ ನಿರ್ವಹಿಸುತ್ತಿದ್ದಾರೆ.

ನಮ್ರತಾ ಪ್ರೀತಿಸಿ ಮದುವೆಯಾಗಿರ್ತಾಳೆ. ನಮ್ರತಾ ನಾದಿನಿ ಈ ನವ್ಯಾ, ಪ್ರಣಮ್​ನ ಫ್ರೇಂಡ್​ ಕೂಡ ಹೌದು. ನವ್ಯಾ ಕುಂತಂತ್ರದ ಹುಡುಗಿಯಾಗಿದ್ದು, ನಮ್ರತಾ ಬಾಳಿಗೆ ಮುಳ್ಳಾಗಿರ್ತಾಳೆ. ಪ್ರಣಮ್​ ಮೇಲೆ ನವ್ಯಾ ಕಣ್ಣಿಟ್ಟಿರುತ್ತಾಳೆ. ಸದ್ಯ ಪ್ರಣಮ್​ ಹಾಗೂ ಗಂಗಾ ನಡುವೆ ಕ್ಯೂಟ್​ ಕ್ಯೂಟ್​ ಮೂಮೆಂಟ್​ಗಳು ನಡೆಯುತ್ತಿದ್ದು, ಇವರಿಬ್ಬರ ನಡುವೆ ನವ್ಯಾ ಎಂಟ್ರಿಯಾಗಲಿದೆ.

ಈಗಾಗಲೇ ರಾಜ್​ಗುರು ಮನೆತನವನ್ನ ಹಾಳು ಮಾಡಲು ದ್ವೇಶ ಅಸೂಯೆ ತುಂಬಿಕೊಂಡು ಮತ್ತೇ ಕಲ್ಪನಾ ಬಂದಿದ್ದಾಳೆ. ನವ್ಯಾ ಎಂಟ್ರಿ ಕೂಡ ಆಗಿದೆ. ಹೀಗಾಗಿ ಯುವರಾಣಿಯ ಕತೆಗೆ ಸಾಕಷ್ಟು ತಿರುವುಗಳು ಸಿಗಲಿವೆ.

ಒಟ್ನಲ್ಲಿ ನಮ್ಮನೆ ಯುವರಾಣಿ ಮೂಲಕ ಒನ್ಸ್​ ಅಗೇನ್​ ಖಳನಾಯಕಿಯಾಗಿ ಜನರನ್ನ ರಂಜಿಸಲು ಬಂದಿರುವ ರೋಶನಿಯವರಿಗೆ ನಮ್ಮ ಕಡೆಯಿಂದ ಆಲ್​ ದಿ ಬೆಸ್ಟ್​.

News First Live Kannada


Leave a Reply

Your email address will not be published. Required fields are marked *