ನಮ್ಮನೆ ಯುವರಾಣಿ ಸೀರಿಯಲ್ ನೋಡೋರು.. ಅಂಕಿತಾ ಅಮರ್ ಫ್ಯಾನ್ಸ್‌ ಯಾವುದೇ ಕಾರಣಕ್ಕೂ ಮೇ 29 ಮರೆಯೋದಿಲ್ಲ. ಯಾಕಂದ್ರೆ, ಅದು ಅಂಕಿತಾ ಅಮರ್‌ ಹುಟ್ಟುಹಬ್ಬದ ದಿನ. ಈ ಬಾರಿ ಅಂಕಿತಾ ಅಮರ್‌ ತಮ್ಮ ಹುಟ್ಟುಹಬ್ಬವನ್ನ ಹೈದರಾಬಾದ್‌ನಲ್ಲಿ ಆಚರಿಸಿಕೊಂಡರು. ಶೂಟಿಂಗ್‌ಗಾಗಿ ಹೈದರಾಬಾದ್‌ಗೆ ಹೋಗಿದ್ದ ಕಾರಣ ಅಲ್ಲಿಯೇ ಸೆಲೆಬ್ರೇಟ್‌ ಮಾಡಿಕೊಂಡಿದ್ದರು.

ಹೀಗಾಗಿ ಕುಟುಂಬ ಸದಸ್ಯರ ಜೊತೆಗೆ ಸಂಭ್ರಮ ಆಚರಿಸಿಕೊಳ್ಳೋದು ಫಸ್ಟ್‌ ಟೈಮ್ ಮಿಸ್ ಆಗಿತ್ತು. ಆದ್ರೆ, ಬರ್ತ್‌ಡೇ ದಿನ ಆಗದಿದ್ರೂ ಹೈದರಾಬಾದ್‌ನಿಂದ ಮರಳಿದ ನಂತರ ಮನೆಯಲ್ಲಿಯೇ ಸರಳವಾಗಿ ಬರ್ತ್‌ ಡೇ ಆಚರಿಸಿಕೊಂಡಿದ್ದಾರೆ ನಟಿ ಅಂಕಿತಾ ಅಮರ್‌. ಅಂಕಿತಾ ಅಮರ್‌ಗೋಸ್ಕರ ಸಹೋದರಿ ಅನನ್ಯಾ ಸರ್‌ಪ್ರೈಸ್‌ ಪಾರ್ಟಿ ಕೊಟ್ಟ್ದಿದ್ದಾರೆ.

ಮನೆಯಲ್ಲಿಯೇ ಅಂಕಿತಾ ಅವ್ರಿಗೆ ಇಷ್ಟವಾಗೋ ತಿಂಡಿ ತಿನಿಸು ಹಾಗೂ ಗಿಫ್ಟ್ ಕೊಟ್ಟಿದ್ದಾರೆ. ಮನೆಯಲ್ಲಿ ಅಪ್ಪ-ಅಮ್ಮನ ಸಮ್ಮುಖದಲ್ಲಿ ಸರಳ ಸಂಭ್ರಮ ಖುಷಿ ನೀಡಿತು. ಈಗ ನನಗೆ ತೃಪ್ತಿಯಾಯಿತು ಎಂದು ತಂಗಿಗೆ ಥ್ಯಾಕ್ಸ್​ ಹೇಳಿದ್ದಾರೆ. ಸಹೋದರಿ ಅನನ್ಯಾ ಈ ಹುಟ್ಟುಹಬ್ಬದ ವಿಡಿಯೋವನ್ನ ತಮ್ಮ ಅನನ್ಯಾ ಅಮರ್‌ ಯೂಟ್ಯೂಬ್​ ಚಾನಲ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದಕ್ಕೆ ಫ್ಯಾನ್ಸ್‌ ರಿಯಾಕ್ಷನ್‌ ಕೂಡ ಜಸ್ಟ್ ಸೂಪರ್ಬ್‌.

The post ನಮ್ಮನೆ ಯುವರಾಣಿ: ಅಂಕಿತಾ ಅಮರ್‌ಗೆ ಸರ್‌ಪ್ರೈಸ್‌ ಕೊಟ್ಟ ತಂಗಿ appeared first on News First Kannada.

Source: newsfirstlive.com

Source link