ನಮ್ಮನೆ ಯುವರಾಣಿ ಕಲರ್ಸ್ನ ಜನಪ್ರಿಯ ಧಾರಾವಾಹಿಗಳಲ್ಲೊಂದು. 2019 ಜನವರಿಯಿಂದ ಪ್ರಾರಂಭವಾದ ಯುವರಾಣಿಯ ಪ್ರಯಾಣ ಬರೋಬ್ಬರಿ ಮೂರು ವರ್ಷಗಳ ಕಾಲ ಯಶಸ್ವಿಯಾಗಿ ಕಿರುತೆರೆಯಲ್ಲಿ ನೆಲೆಯುರಿದ್ದಾಳೆ. ಸದ್ಯ ಯುವರಾಣಿ ಮೂರನೇ ವಸಂತದ ಸಂಭ್ರಮದಲ್ಲಿದ್ದಾಳೆ. ಈ ಶುಭ ಸಂದರ್ಭದಲ್ಲಿ ನಮ್ಮನೆ ಯುವರಾಣಿಯ ಪ್ರಯಾಣದ ಬಗ್ಗೆ ಒಂದ್ ಸಾರಿ ನೋಡ್ಕಂಡು ಬರೋಣ ಬನ್ನಿ.
ಶುರುವಿನಿಂದಲೂ ನಮ್ಮನೆ ಯುವರಾಣಿಗೆ ವೀಕ್ಷಕರಿಂದ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ. ಒಂದು ತುಂಬು ಕುಟುಂಬದ ಅನಿಕೇತ್-ಮೀರಾ ಹಾಗೂ ಸಾಕೇತ್-ಅಹಲ್ಯಾ ಜೋಡಿಗಳ ಸುತ್ತ ಹೆಣೆಯಲಾಗಿದ್ದ ಕತೆಯಲ್ಲಿ ಸಾಕಷ್ಟು ರೋಚಕ ತಿರುವುಗಳು ಮೂಡಿಬಂದಿವೆ. ಅನಿಕೇತ್-ಮೀರಾ ಜಗಳ ಪ್ರೀತಿ, ಮುನಿಸು ಎಲ್ಲರಿಗೂ ಇಷ್ಟವಾಗುತ್ತಿತ್ತು. ಈ ಜೋಡಿಯನ್ನು ಸಂಭಾಳಿಸುವ ಸಾಕೇತ್ ಕೂಡ ಜನಮನದ ಅಚ್ಚುಮೆಚ್ಚಿನ ಮನೆ ಮಗ. ಅದ್ರಲ್ಲೂ ಮೀರಾ ಕುಟುಂಬಕ್ಕಾಗಿ ಏನು ಬೇಕಾದರೂ ಮಾಡಲು ಸದಾ ಸಿದ್ಧವಿರುತ್ತಿದ್ದಳು.
ಇನ್ನೂ ಧಾರಾವಾಹಿಯಲ್ಲಿ ಸಾಕಷ್ಟು ಬದಲಾವಣೆಗಳಾಗಿದ್ದು, ಯುವರಾಣಿಯ ಕತೆ 7 ವರ್ಷ ಮುಂದೆ ಸಾಗಿದೆ. ಅನಿ-ಮೀರಾ ಕತೆಯಿಂದ ಮಿಸ್ ಆಗಿದ್ದಾರೆ. ಇತ್ತ ಪುಟ್ಟ ಪ್ರಣಮ್ ದೊಡ್ಡವನಾಗಿದ್ದಾನೆ. ಪ್ರಣಮ್ಗೆ ಜೋಡಿಯಾಗಲು ಗಂಗಾ ಬಂದಿದ್ದಾಳೆ. ಸದ್ಯ ಅನಿಕೇತ್-ಮೀರಾ ಪಾತ್ರಗಳ ಆಧಾರದ ಮೇಲೆ ಕತೆ ಸಾಗುತ್ತಿದೆ.
ಈ ನಡುವೆ ನಮ್ರತಾ ಪಾತ್ರಧಾರಿ ಪ್ರಕೃತಿ ಪ್ರಸಾದ್ ಕೂಡ ಕಾರಣಾಂತರಗಳಿಂದ ಧಾರಾವಾಹಿಯಿಂದ ಹೊರ ನಡೆದ್ರು. ಈಗ ಆ ಪಾತ್ರವನ್ನ ನಟಿ ಕ್ಷಮಾ ನಿರ್ವಹಿಸುತ್ತಿದ್ದಾರೆ. ಇನ್ನೂ 6.30ಕ್ಕೆ ಬರುತ್ತಿದ್ದ ಯುವರಾಣಿ 5.30 ಕ್ಕೆ ಬರುತ್ತಿದ್ದಾಳೆ. ಧಾರಾವಾಹಿಯ ಸಮಯ ಬದಲಾವಣೆಯ ಜೊತೆ ಜೊತೆಗೆ ಸಾಕಷ್ಟು ಬದಲಾವಣೆಗಳಾದವು.
ನಟಿ ಅಂಕಿತಾ ಅಮರ್, ನಟ ರಾಘವೇಂದ್ರ, ದೀಪಕ್ ಗೌಡ, ಕಾವ್ಯ ಮಹದೇವ, ಜ್ಯೋತಿ ಕಿರಣ್, ಪ್ರಕೃತಿ ಪ್ರಸಾದ್ ಹೀಗೆ ಸಾಕಷ್ಟು ಕಲಾವಿದರಿಗೆ ಬ್ರೇಕ್ ಕೊಟ್ಟ ಧಾರಾವಾಹಿ ನಮ್ಮನೆ ಯುವರಾಣಿ. ಎಲ್ಲಾ ಕಲಾವಿದರ ಪಾತ್ರಗಳು ಕಲಾವಿದರು ಜನಮಾನಸದಲ್ಲಿ ಉಳಿಯುವಂತೆ ಮಾಡಿದೆ ಈ ಸೀರಿಯಲ್.
ಇನ್ನೂ ನಮ್ಮನೆ ಯುವರಾಣಿಯ 3ರ ಸಂಭ್ರಮದ ಬಗ್ಗೆ ಅಂಕಿತಾ ಅಮರ್ ಅವರು ಹರ್ಷ ವ್ಯಕ್ತಪಡಿಸಿದ್ದು, ಈ ಬಗ್ಗೆ ತಮ್ಮ ಇನ್ಸ್ಟಾ ಪೇಜ್ನಲ್ಲಿ ನಮ್ಮನೆ ಯುವರಾಣಿ ಮೊದಲ ಸಂಚಿಕೆ ಪ್ರಸಾರವಾಗಿ 3 ವರ್ಷಗಳಾಗಿವೆ. ಮೀರಾ ನನಗೆ ಒಂದು ಭಾವನೆ. ನಾನು ಅವಳಿಗಾಗಿ ಅತ್ತಿದ್ದೇನೆ, ನಕ್ಕಿದ್ದೇನೆ. ಯಾರೆಲ್ಲಾ ಈ ಜರ್ನಿಗೆ ಸಪೋರ್ಟ್ ಮಾಡಿದ್ದಿರೋ ಅವರಿಗೆ ಧನ್ಯವಾದ ಅಂತಾ ಹೇಳಿದ್ದಾರೆ ಅಂಕಿತಾ.
ಇನ್ನೂ ಧಾರಾವಾಹಿ 3 ವರ್ಷ ಕಂಪ್ಲೀಟ್ ಮಾಡಿರುವ ಖುಷಿಯಲ್ಲಿರುವ ನಟ ರಾಘು, ತಮ್ಮ ಇನ್ಸ್ಟಾ ಪೇಜ್ನಲ್ಲಿ ಎಲ್ಲಾ ತಂತ್ರಜ್ಞರಿಗೆ ಹಾಗೂ ಅಭಿಮಾನಿಗಳಿಗೆ ಕೃತಜ್ಞತೆ ತಿಳಿಸಿದ್ದಾರೆ. ಎಲ್ಲರ ಜೊತೆ ಇರುವ ಫೋಟೋ ಹಂಚಿಕೊಂಡು, ತೆರೆ ಹಿಂದಿನ ಹೀರೋಗಳು ಹಗಲು ರಾತ್ರಿ ಅನ್ನದೆ ಶ್ರಮಿಸುತ್ತಿರುವ ನಿಮ್ಮೆಲರಿಗೂ ಧನ್ಯವಾದಗಳು ಯಾವಾಗ್ಲೂ ನಗ್ ನಗ್ತಾ ಇರಿ ಆ ದೇವರು ನಿಮ್ಗೆ ಸದಾ ಕೈ ತುಂಬಾ ಕೆಲ್ಸ ಕೊಟ್ಟು ಕಾಪಾಡಲಿ ಎಂದು ಬರೆದುಕೊಂಡಿದ್ದಾರೆ.
ಬದಲಾವಣೆಯೇ ಜಗದ ನಿಯಮ ಎಂಬ ಮಾತಂತೆ ಹೊಸ ರೂಪದಲ್ಲಿ ಬಂದಿರುವ ನಮ್ಮನೆ ಯುವರಾಣಿಯನ್ನ ಅಷ್ಟೇ ಪ್ರೀತಿಯಿಂದ ವೀಕ್ಷಕರು ಸ್ವಾಗತಿಸಿದ್ದಾರೆ. ಒಟ್ನಲ್ಲಿ ಮೂರ ವಸಂತದಲ್ಲಿರುವ ಇಡೀ ಧಾರಾವಾಹಿ ತಂಡಕ್ಕೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದ್ದು, ನಮ್ಮ ಕಡೆಯಿಂದಲೂ ಬೆಸ್ಟ್ ವಿಶ್ಶಸ್.
The post ‘ನಮ್ಮನೆ ಯುವರಾಣಿ’ ಸಂಭ್ರಮವೋ ಸಂಭ್ರಮ.. ಈಗೇನು ವಿಶೇಷ?! appeared first on News First Kannada.