ನವದೆಹಲಿ: ಭಾರತದ ಫೋಟೋ ಜರ್ನಲಿಸ್ಟ್​​ ದಾನಿಶ್ ಸಿದ್ದಿಕಿ ಹತ್ಯೆ ಬಗ್ಗೆ ಮಾಹಿತಿ ಇಲ್ಲ ಎಂದು ತಾಲಿಬಾನ್​​ ಪ್ರತಿಕ್ರಿಯೆ ನೀಡಿದೆ.

ಪುಲಿಟ್ಜೆರ್ ಪ್ರಶಸ್ತಿ ಪುರಸ್ಕೃತರಾಗಿದ್ದ ಪ್ರತಿಭಾವಂತ ಫೋಟೋ ಜರ್ನಲಿಸ್ಟ್​ ದಾನಿಶ್​​ ಸಿದ್ದಿಕಿ ಅವರ ಸಾವಿಗೆ ವಿಷಾದ ವ್ಯಕ್ತಪಡಿಸಿರುವ ತಾಲಿಬಾನ್​​ ಉಗ್ರ ಸಂಘಟನೆಯ ವಕ್ತಾರ ಜಬಿಯುಲ್ಲಾ ಮುಜಾಹಿದ್, ಫೈರ್​ ಮಾಡುವ ಸಂದರ್ಭದಲ್ಲಿ ಪತ್ರಕರ್ತ ಸಾವನ್ನಪ್ಪಿರುವ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ. ಅವರು ಹೇಗೆ ಸಾವನ್ನಪ್ಪಿದ್ದಾರೆ ಎಂಬುದು ತಿಳಿದಿಲ್ಲ. ಯಾವುದೇ ಪತ್ರಕರ್ತ ವಾರ್​ ಝೋನ್​​ಗೆ ಪ್ರವೇಶ್​ ಆಗುವ ಮುನ್ನ ನಮಗೆ ಮಾಹಿತಿ ನೀಡಬೇಕು. ಆಗ ನಾವು ಅವರ ರಕ್ಷಣೆಗೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ. ಸಿದ್ದಿಕಿ ಅವರ ಸಾವಿಗೆ ನಾವು ಕ್ಷಮೆ ಕೇಳುತ್ತೇವೆ. ನಮಗೆ ತಿಳಿಸದೇ ಪತ್ರಕರ್ತರು ವಾರ್​ ಝೋನ್​​ಗೆ ಪ್ರವೇಶಿಸುತ್ತಿದ್ದು, ಇದಕ್ಕೆ ವಿಷಾದ ವ್ಯಕ್ತಪಡಿಸುತ್ತೇವೆ ಎಂದು ತಿಳಿಸಿದ್ದಾರೆ.

ರಾಯ್​ಟರ್ಸ್​ ಸುದ್ದಿ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಫೋಟೋ ಜರ್ನಲಿಸ್ಟ್ ದಾನಿಶ್ ಸಿದ್ದಿಕಿ, ಕಂದಹಾರ್​​ನ ಸ್ಪಿನ್​ ಬೊಲ್ಡಕ್ ಪ್ರದೇಶದಲ್ಲಿ ಅಫ್ಘಾನ್​​ ಸೇನೆ ಹಾಗೂ ತಾಲಿಬಾನ್​ ನಡುವೆ ನಡೆಯುತ್ತಿದ್ದ ಯುದ್ಧದ ಬಗ್ಗೆ ವರದಿ ಮಾಡಲು ತೆರಳಿದ್ದರು. ಕವರೇಜ್​​ ಮಾಡುತ್ತಿದ್ದ ವೇಳೆ ಸಾವನ್ನಪ್ಪಿದ್ದರು ಎನ್ನಲಾಗಿದೆ. ಈ ಕುರಿತು ವರದಿ ಮಾಡಿದ್ದ ರಾಯ್​ಟರ್ಸ್, ಅಫ್ಘಾನ್​ ಕಾಮಾಂಡ್​ ನೀಡಿರೋ ಮಾಹಿತಿ ಅನ್ವಯ ಸಿದ್ಧಿಕಿ ಹಾಗೂ ಕಮಾಂಡರ್​ ಒಬ್ಬರನ್ನು ಹತ್ಯೆ ಮಾಡಲಾಗಿದೆ ಎಂದು ತಿಳಿಸಿತ್ತು.

ರಾಯ್​ಟರ್ಸ್​ ಸುದ್ದಿ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಫೋಟೋ ಜರ್ನಲಿಸ್ಟ್ ದಾನಿಶ್ ಸಿದ್ದಿಕಿ, ಕಂದಹಾರ್​​ನ ಸ್ಪಿನ್​ ಬೊಲ್ಡಕ್ ಪ್ರದೇಶದಲ್ಲಿ ನಿನ್ನೆ ಭುಗಿಲೆದ್ದ ಹಿಂಸಾಚಾರದಲ್ಲಿ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಅಫ್ಘಾನಿಸ್ತಾನದ ಮಾಧ್ಯಮ ಟೊಲೊ ನ್ಯೂಸ್​ ಸುದ್ದಿ ಪ್ರಕಟಿಸಿದೆ.

The post ‘ನಮ್ಮನ್ನು ಕ್ಷಮಿಸಿ’; ನಾವು ಭಾರತದ ಫೋಟೋ ಜರ್ನಲಿಸ್ಟ್ ಸಿದ್ದಿಕಿ ಹತ್ಯೆ ಮಾಡಿಲ್ಲ ಎಂದ ತಾಲಿಬಾನ್​ appeared first on News First Kannada.

Source: newsfirstlive.com

Source link