ಕನ್ನಡ ಚಿತ್ರರಂಗದ ಖ್ಯಾತ ನಟ ಶಿವರಾಂ ಇಂದು ವಿಧಿವಶರಾಗಿದ್ದಾರೆ. ಹಿರಿಯ ನಟನ ಅಗಲಿಕೆಗೆ ಚಿತ್ರರಂಗ, ರಾಜಕೀಯ ಸೇರಿದಂತೆ ಗಣ್ಯರು ಕಂಬನಿ ಮಿಡಿಯುತ್ತಿದ್ದಾರೆ. ನಮ್ಮ ತಂದೆ ಖಂಡಿತವಾಗಿ ಆಸ್ಪತ್ರೆಯಿಂದ ಹೊರಗೆ ಬರುತ್ತಾರೆ ಎಂದು ಅಂದುಕೊಂಡಿದ್ದೇವು ಆದ್ರೆ ವಿಧಯಾಟವೇ ಬೇರೆಯಾಗಿತ್ತು. ನಮ್ಮ ತಂದೆ ಹೊರಗೆ ಬರಲಿಲ್ಲ ಎಂದು ಶಿವರಾಂ ಹಿರಿಯ ಪುತ್ರ ರವಿಶಂಕರ್ ಕಣ್ಣೀರಿಟ್ಟಿದ್ದಾರೆ.
ನ್ಯೂಸ್ಫಸ್ಟ್ನ ಜೊತೆ ಮಾತನಾಡಿದ ಅವರು, ನಮ್ಮ ತಂದೆಯನ್ನ ಇಷ್ಟು ವರ್ಷಗಳ ಅವಧಿಯಲ್ಲಿ ಆಸ್ಪತ್ರೆಯಲ್ಲಿ ಇರೋದನ್ನ ನಾವು ನೋಡಿದ್ದಿಲ್ಲ. ಅವರು ಇತ್ತೀಚಿಗೆ ನನಗೆ 100 ವರುಷ ಆಯಸ್ಸು ಬೇಕು ಎಂದಿದ್ದರು. ಆಗ ನಾನು ಯಾಕೆ 100 ವರುಷ ಆಯಸ್ಸು ಬೇಕು ಎಂದಾಗ ನಾನು ಇನ್ನು ಸಮಾಜ ಸೇವೆ ಮಾಡ್ಬೇಕು ಹೀಗಾಗಿ ನನಗೆ ಇನ್ನು ಆಯಸ್ಸು ಬೇಕು ಎಂದಿದ್ದರು.