ರಾಯಚೂರು: ಮಸ್ಕಿ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯ ಮತ ಎಣಿಕೆ ಕಾರ್ಯ ನಡೆಯುತ್ತಿದೆ. ಈ ವೇಳೆ ಕಾಂಗ್ರೆಸ್​​ ಅಭ್ಯರ್ಥಿ ಬಸನಗೌಡ ತುರವಿಹಾಳ ಸದ್ಯ 16,808 ಮತಗಳೊಂದಿಗೆ ಮುನ್ನಡೆಯನ್ನು ಪಡೆದುಕೊಂಡಿದ್ದು, ಬಿಜೆಪಿ ಅಭ್ಯರ್ಥಿ ಪ್ರತಾಪ್​​ ಗೌಡ ಪಾಟೀಲ್ ಸೋಲುವುದು ಬಹುತೇಕ ಖಚಿತವಾಗಿದೆ. ಸೋಲಿನ ಮುನ್ಸೂಚನೆ ಪಡೆದಿರುವ ಪ್ರತಾಪ್​​ ಗೌಡ ಪಾಟೀಲ್, ನಮ್ಮವರೇ ನಮಗೆ ಮೋಸ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಸೋಲು ಖಚಿತವಾಗುತ್ತಿದಂತೆ ಮತ ಎಣಿಕೆ ಕೇಂದ್ರದಿಂದ ಹೊರ ನಡೆಯುವ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಮಸ್ಕಿ ಬಿಜೆಪಿ ಅಭ್ಯರ್ಥಿ ಪ್ರತಾಪ್​ಗೌಡ ಪಾಟೀಲ್, ಮೂರು ಶಾಸಕನಾಗಿ ಇಂದು ಮತಗಳ ಅಂತರ ನೋಡಿದರೇ ಆಡಳಿತ ವಿರೋಧಿ ಅಲೆ ಉದ್ಭವವಾಗಿದೆ ಎನಿಸುತ್ತಿದೆ. ಆದರೆ ಕಳೆದ ಹಲವು ವರ್ಷಗಳಿಂದಲೂ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದ್ದೇನೆ, ಜನರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ. ರಾಜ್ಯದಲ್ಲಿ ನಮ್ಮದೇ ಪಕ್ಷ ಅಧಿಕಾರದಲ್ಲಿದ್ದು, ಇಷ್ಟೆಲ್ಲಾ ಇದ್ದರೂ ಜನರು ಅಭಿಪ್ರಾಯ ಬದಲಿಸಿಕೊಂಡಿದ್ದಾರೆ. ಇದಕ್ಕೆ ಆಡಳಿತ ವಿರೋಧಿ ಅಲೆಯೇ ಕಾರಣ ಎನಿಸುತ್ತಿದೆ.

ಜನರ ಮನೋಭಾವನೆ ಏನಿದೆ ಎಂದು ನನಗೆ ಗೊತ್ತಿಲ್ಲ. ಅಭಿವೃದ್ಧಿ ಬಳಿಕವೂ ಅವರು ಬದಲಾವಣೆ ಬೇಕೆಂದು ಬಯಸಿರಬೇಕು. ನನ್ನ ಬಗ್ಗೆಯೇ ವಿರೋಧಿ ಅಲೆ ಬಂದರೇ, ಯಾರು ಬಂದು ಪ್ರಚಾರ ಮಾಡಿದರು ಫಲಿತಾಂಶ ಒಂದೇ ಆಗಿರುತ್ತದೆ. ನಮ್ಮವರೇ ಒಳಗಡೆ ಕೈ ಕೊಟ್ಟಿರಬಹುದು ಎನಿಸುತ್ತಿದೆ. ಸೋತರು ಗೆದ್ದರೂ ಅದಕ್ಕೆ ಪ್ರತಾಪ್​​ಗೌಡ ಪಾಟೀಲ್​​ ಕಾರಣರಾಗುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು. ಇದಕ್ಕೂ ಮುನ್ನ ಮತ‌ ಎಣಿಕೆ ಕೇಂದ್ರಕ್ಕೆ ಆಗಮಿಸಿ ಮತಗಳ ಲೆಕ್ಕಾಚಾರ ಪಡೆದರು. ಆದರೆ ಯಾವುದೇ ಬೂತ್​ನಲ್ಲಿಯೂ ಮುನ್ನಡೆ ಲಭಿಸಿದ ಕಾರಣ ಬೇಸರದಿಂದ ಕೇಂದ್ರದಿಂದ ಹೊರ ನಡೆದರು. ರಾಯಚೂರಿನ ಮಸ್ಕಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹಲವು ಬೂತ್​​ಗಳಲ್ಲಿ ಸ್ಪಷ್ಟ ಮುನ್ನಡೆ ಲಭಿಸಿತ್ತು.

The post ‘ನಮ್ಮವರೇ ನಮಗೆ ಮೋಸ ಮಾಡಿದ್ದಾರೆ’- ಫಲಿತಾಂಶಕ್ಕೂ ಮುನ್ನವೇ ಸೋಲೋಪ್ಪಿಕೊಂಡ ಪ್ರತಾಪ್​ಗೌಡ ಪಾಟೀಲ್? appeared first on News First Kannada.

Source: newsfirstlive.com

Source link