ನಮ್ಮಿಂದ ಮನವಿಪತ್ರ ಸ್ವೀಕರಿಸದ ಕುಮಾರಸ್ವಾಮಿ ಜನಪ್ರತಿನಿಧಿಯೇ ಅಲ್ಲ: ಪಿಎಸ್ ಐ ಪರೀಕ್ಷೆ ಬರೆದ ಅಭ್ಯರ್ಥಿ | If Kumaraswamy refuses to take memorandum, how can he be a people’s representative? Asks a Dharwad youth ARBಆದರೆ ಈಗ ಅವರು ತಮ್ಮ ಇನ್ನೊಂದು ವರಸೆ ತೋರುತ್ತಿದ್ದಾರೆ. ನಮ್ಮಿಂದ ಮನವಿಪತ್ರ ಸ್ವೀಕರಿಸದೆ ಅವರು ಭ್ರಷ್ಟಾಚಾರವನ್ನು ಬೆಬಬಲಿಸುತ್ತಿದ್ದಾರೆ ಎಂದು ಯುವಕ ಹೇಳುತ್ತಾರೆ.

TV9kannada Web Team


| Edited By: Arun Belly

Jun 04, 2022 | 4:24 PM
ಧಾರವಾಡ ಪ್ರವಾಸದಲ್ಲಿರುವ ಮಾಜಿ ಮುಖ್ಯಮಂತ್ರಿ ಮತ್ತು ಜೆಡಿ(ಎಸ್) ನಾಯಕ ಹೆಚ್ ಡಿ ಕುಮಾರಸ್ವಾಮಿಯವರನ್ನು (HD Kumaraswamy) ವಿವಾದಿತ ಪಿಎಸ್ ಐ ಪರೀಕ್ಷೆ (PSI written test) ಬರೆದ ಧಾರವಾಡ ಭಾಗದ ಅಭ್ಯರ್ಥಿಗಳು ಶಪಿಸುತ್ತಿದ್ದಾರೆ. ಶುಕ್ರವಾರ ಧಾರವಾಡದಲ್ಲಿ ಪರೀಕ್ಷೆ ಬರೆದ ಹಲವಾರು ಜನ; ತಮಗೆ ಅನ್ಯಾಯವಾಗಿದೆ, ನಮ್ಮ ಪರ ಧ್ವನಿ ಎತ್ತಿ ದಯವಿಟ್ಟು ನ್ಯಾಯ ಒದಗಿಸಿಕೊಡಿ ಅಂತ ಮನವಿ ಪತ್ರ (memorandum) ಕೊಡಲು ಹೋಗಿದ್ದಾರೆ. ಅಭ್ಯರ್ಥಿಗಳು ಹೇಳುವುದೇನೆಂದರೆ, ಕುಮಾರಸ್ವಾಮಿಯವರು ಈಗಾಗಲೇ 545 ಜನ ಅಯ್ಕೆಯಾಗಿದ್ದಾರೆ, ಮತ್ತೆಷ್ಟು ಜನರನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ ಅಂತ ಹೀಯಾಳಿಸಿ ಮನವಿ ಪತ್ರ ತೆಗೆದುಕೊಳ್ಳದೆ ಹೋಗಿದ್ದಾರಂತೆ.

ಮಾಜಿ ಮುಖ್ಯಮಂತ್ರಿಗಳ ಡಬಲ್ ಸ್ಟ್ಯಾಂಡರ್ಸ್ ನಮಗೆ ಅರ್ಥವಾಗುತ್ತಿಲ್ಲ. ಯಾಕೆಂದರೆ, ಪಿಎಸ್ ಐ ಆಯ್ಕೆ ಪ್ರಕ್ರಿಯೆಯಲ್ಲಿ ಭಾರೀ ಪ್ರಮಾಣದ ಭ್ರಷ್ಟಾಚಾರ ನಡೆದಿರುವುದು ಬಯಲಿಗೆ ಬಿದ್ದ ಬಳಿಕ ಇದೇ ಕುಮಾರಸ್ವಾಮಿಯರು ನಮ್ಮ ಪರ ಮಾತಾಡಿದ್ದರು ಎಂದು ಅಭ್ಯರ್ಥಿಗಳ ಪರ ಮಾತಾಡಿದ ಒಬ್ಬ ಯುವಕ ಹೇಳುತ್ತಾರೆ.

ಆದರೆ ಈಗ ಅವರು ತಮ್ಮ ಇನ್ನೊಂದು ವರಸೆ ತೋರುತ್ತಿದ್ದಾರೆ. ನಮ್ಮಿಂದ ಮನವಿಪತ್ರ ಸ್ವೀಕರಿಸದೆ ಅವರು ಭ್ರಷ್ಟಾಚಾರವನ್ನು ಬೆಬಬಲಿಸುತ್ತಿದ್ದಾರೆ ಎಂದು ಯುವಕ ಹೇಳುತ್ತಾರೆ. ಅನ್ಯಾಯಕ್ಕೊಳಗಾದ ಅಭ್ಯರ್ಥಿಗಳು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಸಿದಾಗ ಅದರ ನೇತೃತ್ವವಹಿಸಿದ್ದ ರಚನಾ ವಿರುದ್ಧ ಎಫ್ ಐ ಅರ್ ದಾಖಲಾದ ಕೂಡಲೇ ಅವಳು ನಾಪತ್ತೆಯಾಗಿದ್ದಾಳೆ. ಜಾಗೃತ್ ಹೆಸರಿನ ಮತ್ತೊಬ್ಬ ಅಭ್ಯರ್ಥಿ ತಾನು 75 ಲಕ್ಷ ರೂ. ಲಂಚ ಕೊಟ್ಟಿರುವುದಾಗಿ ಡಿಜಿಪಿ ಅವರಿಗೆ ಪತ್ರ ಬರೆದಿದ್ದಾನೆ. ಇದನ್ನು ಸರ್ಕಾರ ಯಾಕೆ ನಡೆಸುತ್ತಿಲ್ಲ ಎಂದು ಯುವಕ ಹೇಳುತ್ತಾರೆ.

ಈ ಪ್ರಶ್ನೆಗಳಿಗೆ ನಮಗೆ ಉತ್ತರ ಬೇಕಾಗಿದೆ, ಹಾಗಾಗೇ ಕುಮಾರಸ್ವಾಮಿ ಅವರಿಗೆ ನಾವು ಮನವಿ ಪತ್ರ ಸಲ್ಲಿಸಬೇಕೆಂದಿದ್ದೆವು. ಆದರೆ ಅವರು ನಮ್ಮನ್ನು ದೂಡಿ ಅಲ್ಲಿಂದ ಹೋಗಿಬಿಟ್ಟರು. ಪ್ರಜಾಪ್ರಭುತ್ವದ ಪ್ರತಿನಿಧಿಯಾಗಿ ಅವರು ಮನವಿ ಪತ್ರ ಸ್ವೀಕರಿಸುವುದಿಲ್ಲವೆಂದರೆ ಅವರೆಂಥ ಪ್ರತಿನಿಧಿ ಅಂತ ಯುವಕ ಕೇಳುತ್ತಾರೆ.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

TV9 Kannada


Leave a Reply

Your email address will not be published. Required fields are marked *