ಟಿ-20 ವಿಶ್ವಕಪ್ ಟೂರ್ನಿಯ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಭಾರತ ತಂಡ ಸೋಲುಕಂಡಿದೆ. ಈ ಮೂಲಕ ಸೆಮಿಫೈನಲ್ ತಲುಪುವ ಅವಕಾಶ ಬಹುತೇಕ ಕೊನೆಗೊಂಡಿದೆ.
ಭಾರತದ ಕಳಪೆ ಪ್ರದರ್ಶನಕ್ಕೆ ಟೀಕೆಗಳು ಕೇಳಿಬರುತ್ತಿದೆ. ಟೀಮ್ ಇಂಡಿಯಾದ ಬ್ಯಾಟ್ಸ್ಮನ್ಗಳ ಪ್ರದರ್ಶನದ ವಿರುದ್ಧ ಮಾಜಿ ಕ್ರಿಕೆಟಿಗರು ಅಸಮಾಧಾನ ಹೊರಹಾಕಿದ್ದಾರೆ. ಆದರೆ ಇನ್ನೊಂದೆಡೆ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಟೀಮ್ ಇಂಡಿಯಾದ ಆಟಗಾರರನ್ನ ಅಷ್ಟೊಂದು ಕಟುವಾಗಿ ಟೀಕಿಸಬೇಡಿ ಎಂದು ಕ್ರಿಕೆಟ್ ಪ್ರೇಮಿಗಳಲ್ಲಿ ಮನವಿ ಮಾಡಿದ್ದಾರೆ.
ಉತ್ತಮ ಕ್ರಿಕೆಟ್ ತಂಡ ಎಂದು ನಾನು ತಿಳಿದಿದ್ದೆವು, ಇದು ಹಲವು ಬಾರಿ ಅದು ಸಾಬೀತಾಗಿದೆ. ಈ ರೀತಿಯ ಫಲಿತಾಂಶದಿಂದಾಗಿ ಆಟಗಾರರಿಗೆ ಅತೀವ ನೋವಾಗಿರುತ್ತದೆ. ಆದರೆ ನ್ಯೂಜಿಲೆಂಡ್ ತಂಡ ಉತ್ತಮ ಆಟ ಪ್ರದರ್ಶಿಸಿದೆ. ಅವರು ಎಲ್ಲಾ ವಿಭಾಗದಲ್ಲೂ ಅತ್ಯುತ್ತಮ ಪ್ರದರ್ಶನ ತೋರಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.