‘ನಮ್ಮ ಕೆಲಸ ಆಗಬೇಕಾದ್ರೆ ರಮೇಶ್ ಜಾರಕಿಹೊಳಿಗೆ ಮಂತ್ರಿಗಿರಿ ಸಿಗಬೇಕು; ನನಗೂ ಸಚಿವ ಸ್ಥಾನ ನೀಡಿದರೆ ಸಮರ್ಥವಾಗಿ ನಿಭಾಯಿಸುತ್ತೇನೆ’ | Mahesh Kumatalli on Karnataka Cabinet Ramesh Jarkiholi BJP Politics


‘ನಮ್ಮ ಕೆಲಸ ಆಗಬೇಕಾದ್ರೆ ರಮೇಶ್ ಜಾರಕಿಹೊಳಿಗೆ ಮಂತ್ರಿಗಿರಿ ಸಿಗಬೇಕು; ನನಗೂ ಸಚಿವ ಸ್ಥಾನ ನೀಡಿದರೆ ಸಮರ್ಥವಾಗಿ ನಿಭಾಯಿಸುತ್ತೇನೆ’

ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ

ಬೆಳಗಾವಿ: ನಮ್ಮ ಕೆಲಸ ಆಗಬೇಕಾದ್ರೆ ರಮೇಶ್ ಜಾರಕಿಹೊಳಿಗೆ ಮಂತ್ರಿಗಿರಿ ಸಿಗಬೇಕಿದೆ. ರಮೇಶ್​ಗೆ ಸಚಿವಸ್ಥಾನ ನೀಡುವುದರ ಹಿಂದೆ ನಮ್ಮ ಸ್ವಾರ್ಥವಿದೆ. ನಮ್ಮ ಭಾಗದವರು ಸಚಿವರಾದರೆ ನಮಗೂ ಅನುಕೂಲವಾಗುತ್ತೆ ಎಂದು ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ನಂದೇಶ್ವರ ಗ್ರಾಮದಲ್ಲಿ ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಬುಧವಾರ (ಫೆಬ್ರವರಿ 9) ಹೇಳಿಕೆ ನೀಡಿದ್ದಾರೆ.

ಕ್ಷೇತ್ರದ ನೀರಾವರಿ ಯೋಜನೆಗೆ 2,400 ಕೋಟಿ ಬೇಕಾಗಿದೆ. ಸವಳ- ಜವಳ ಯೋಜನೆಗೆ 600 ಕೋಟಿ ಹಣ ಬೇಕಾಗುತ್ತೆ. ನಮ್ಮ ಭಾಗದವರೇ ಸಚಿವರಾಗುವುದರಿಂದ ದೊಡ್ಡ ಕೆಲಸವಾಗುತ್ತೆ. ನಾನೊಬ್ಬ ಶಾಸಕನಾಗಿ 50-200 ಕೋಟಿ ಅನುದಾನ ತರಬಹುದು. ಸಾವಿರಾರು ಕೋಟಿ ಅನುದಾನ, ನಮ್ಮ ಕೆಲಸ ಆಗುವ ಸಲುವಾಗಿ ಬೇಕಾಗಿದೆ. ಅದಕ್ಕಾಗಿ ರಮೇಶ್ ಜಾರಕಿಹೊಳಿಗೆ ಸಚಿವಸ್ಥಾನ ಸಿಗಲಿ ಎಂದು ಪ್ರಾರ್ಥಿಸುವೆ ಎಂದು ಮಹೇಶ್ ಕುಮಟಳ್ಳಿ ಹೇಳಿದ್ದಾರೆ.

ನನಗೆ ಸಚಿವಸ್ಥಾನ ನೀಡುವ ಬಗ್ಗೆ ವರಿಷ್ಠರು ನಿರ್ಧಾರ ಮಾಡುತ್ತಾರೆ. ನನಗೆ ಸಚಿವ ಸ್ಥಾನ ನೀಡಿದರೆ ಸಮರ್ಥವಾಗಿ ನಿಭಾಯಿಸುತ್ತೇನೆ ಎಂದು ನಂದೇಶ್ವರ ಗ್ರಾಮದಲ್ಲಿ ಶಾಸಕ ಮಹೇಶ್ ಕುಮಟಳ್ಳಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

TV9 Kannada


Leave a Reply

Your email address will not be published.