ಬೆಳಗಾವಿ: ಕೋವಿಡ್ ಸೋಂಕಿತರಿಗೆ ನೀಡಲಾಗುವ ರೆಮ್​ಡಿಸಿವರ್ ಇಂಜಕ್ಷನ್ ಹಂಚಿಕೆಯಲ್ಲಿ ಬೆಳಗಾವಿ ಜಿಲ್ಲೆಗೆ ಭಾರೀ ತಾರತಮ್ಯ ಮಾಡಲಾಗುತ್ತಿದ್ದು, ಕೂಡಲೇ ಸರಿಪಡಿಸಬೇಕು ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಆಗ್ರಹಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಶುಕ್ರವಾರ ರಾಜ್ಯಕ್ಕೆ ಒಟ್ಟು 40 ಸಾವಿರ ರೆಮ್ಡಿಸಿವರ್ ಇಂಜಕ್ಷನ್ ಹಂಚಿಕೆಯಾಗಿದ್ದರೂ ಬೆಳಗಾವಿ ಜಿಲ್ಲೆಗೆ ಕಳೆದ 3 ದಿನಕ್ಕೆ ಕೇವಲ 400 ರೆಮ್​ಡಿಸಿವರ್​ನನ್ನ ನೀಡಿದ್ದಾರೆ. ಜಿಲ್ಲೆಯಲ್ಲಿ ಈಗ ಬರುತ್ತಿರುವ ಕೊರೊನಾ ಪಾಸಿಟಿವ್ ಪ್ರಕರಣದ ಪ್ರಮಾಣ ನೋಡಿದರೆ ದಿನಕ್ಕೆ ಕನಿಷ್ಠ ಅಂದ್ರೂ 2,700 ಇಂಜೆಕ್ಷನ್ ಬೇಕಾಗುತ್ತೆ. ಆದ್ರೆ, 3 ದಿನಕ್ಕೆ ಬರೀ 400 ಲಸಿಕೆಗಳನ್ನ ಹಂಚಿದ್ದಾರೆ ಅಂತ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್​ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಲ್ಲದೇ, ಬೆಳಗಾವಿ ದೊಡ್ಡ ಜಿಲ್ಲೆ.. ಇಲ್ಲಿ ಸರಾಸರಿ 900ಕ್ಕಿಂತ ಹೆಚ್ಚು ಕೊರೊನಾ ಪ್ರಕರಣ ಪತ್ತೆಯಾಗುತ್ತಿದೆ. ಇದರಲ್ಲಿ ಅರ್ಧದಷ್ಟು ಜನರಿಗೆ ಇಂಜೆಕ್ಷನ್ ಅಗತ್ಯವೆಂದು ಪರಿಗಣಿಸಿದರೂ 450 ಜನರಿಗೆ ತಲಾ 6ರಂತೆ 2700 ಇಂಜೆಕ್ಷನ್ ಬೇಕಾಗುತ್ತದೆ. ಆದ್ರೆ 3 ದಿನ ಸೇರಿ 400 ಹಂಚಿಕೆ ಮಾಡಿದರೆ ಯಾವುದಕ್ಕೆ ಸಾಕಾಗುತ್ತದೆ? ಇಂಜೆಕ್ಷನ್ ಸಿಗದೆ ಜನ ಸಾಯುತ್ತಿದ್ದಾರೆ. ಬೆಳಗಾವಿಗೆ ಬೇರೆ ಜಿಲ್ಲೆಗಳಿಗಿಂತ ಹೆಚ್ಚು ಪೂರೈಸುವ ಬದಲು ಕಡಿಮೆ ಪೂರೈಸಲಾಗುತ್ತಿದೆ. ಈ ತಾರತಮ್ಯವನ್ನು ಕೂಡಲೇ ಸರಿಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.

The post ನಮ್ಮ ಜಿಲ್ಲೆಗೆ ರೆಮ್​ಡಿಸಿವಿರ್​ ವಿಚಾರದಲ್ಲಿ ತಾರತಮ್ಯ ಮಾಡ್ತಿದ್ದಾರೆ: ಲಕ್ಷ್ಮೀ ಹೆಬ್ಬಾಳ್ಕರ್​ appeared first on News First Kannada.

Source: newsfirstlive.com

Source link