ಬೆಂಗಳೂರು: ನಮ್ಮ ಬೆಂಗಳೂರು, ನಮ್ಮ ರಕ್ಷಣೆ.. ಬೆಂಗಳೂರು ರಕ್ಷಣೆ ನಮ್ಮ ಹೊಣೆ.. ಇದೀಗ ಮಹಾನಗರದ ಗಲ್ಲಿ ಗಲ್ಲಿಯಲ್ಲೂ ನ್ಯೂಸ್​ಫಸ್ಟ್.. ಹೌದು.. ಕೊರೊನಾ ವಿರುದ್ಧ ಹೋರಾಟ ಹಾಗೂ ಮಹಾಮಾರಿಯ ಕುರಿತ ಜಾಗೃತಿ ಮೂಡಿಸುತ್ತಿರುವ, ನಮ್ಮ ತಂಡದಿಂದ ವಿಶೇಷ ಅಭಿಯಾನ ಶುರುವಾಗಿದೆ.

ಸಮುದ್ರದಂತಿರುವ ಮಹಾ ಊರು ಬೆಂಗಳೂರು.. ಬದುಕನ್ನ ಹುಡುಕಿಕೊಂಡು ಎಲ್ಲೆಲ್ಲಿಂದಲೂ ಬಂದ ಅಸಂಖ್ಯೆಯ ಕೋಟಿ ಕೋಟಿ ಜನರಿಗೆ ಅನ್ನ, ನೀರು, ಉದ್ಯೋಗ, ಬದುಕನ್ನ ಕಟ್ಟಿಕೊಂಡಿರೋ ಬೆಂಗಳೂರಿಗೆ ಕೊರೊನಾ ಅನ್ನೋ ಭೀಕರ ಅಲೆ ಬಂದು ಅಪ್ಪಳಿಸಿದೆ. ಸದಾ ಚಟುವಟಿಕೆಯಿಂದ ವಿಜ್ರಂಭಿಸುತ್ತಿದ್ದ ಬೆಂಗಳೂರು ಸಂಪೂರ್ಣ ಸ್ತಬ್ಧಗೊಂಡಿದೆ.

ಕೊರೊನಾದಿಂದ ಬೆಂಗಳೂರಲ್ಲಿ ಏನಾಗ್ತಿದೆ? ಕೊರೊನಾ ಪ್ರಾಮಾಣ ಕುಗ್ಗಿದರೂ ಸಾವಿನ ಪ್ರಮಾಣ ಒಂದೇ ಸ್ಥಿತಿಯಲ್ಲಿ ಏಕೆ ಇದೆ? ಇಡೀ ದೇಶದಲ್ಲೇ ಬೆಂಗಳೂರು ಸುದ್ದಿ ಆಗ್ತೀರೋದೇಕೆ? ಸರ್ಕಾರ ಏನ್ ಮಾಡ್ತಿದೆ? ಜನರಿಗೂ ಜವಾಬ್ದಾರಿ ಇಲ್ವಾ? ಹಾಗಾದ್ರೆ ನೊಂದವರಿಗೆ ಸಾಂತ್ವನ ಹೇಳೋರು ಯಾರು? ಅನ್ನೋದ್ರ ಕುರಿತು ನ್ಯೂಸ್​ಫಸ್ಟ್​ ಇಂದು ವಿಶೇಷ ಅಭಿಯಾನ ಶುಮಾಡಿದೆ. ಕೊರೊನಾಗೆ ತತ್ತರಿಸಿರುವ ಬೆಂಗಳೂರಲ್ಲಿ ಏನಾಗ್ತಿದೆ ಅನ್ನೋದ್ರ ಇಂಚಿಂಚೂ ಮಾಹಿತಿಯನ್ನ ಇಂದು ನ್ಯೂಸ್​ಫಸ್ಟ್ ತಂಡ ನಿಮ್ಮ ಮುಂದೆ ಇಡ್ತಿದೆ.

The post ನಮ್ಮ ಬೆಂಗಳೂರು.. ನಮ್ಮ ರಕ್ಷಣೆ; ಇದು ನ್ಯೂಸ್​ ಫಸ್ಟ್ ಬೃಹತ್ ಅಭಿಯಾನ appeared first on News First Kannada.

Source: newsfirstlive.com

Source link