ನಮ್ಮ ಬೇಡಿಕೆ 2 ತಿಂಗಳಲ್ಲಿ ಈಡೇರದಿದ್ದರೆ ದೇಶದಲ್ಲಿ ಯುದ್ಧವಾಗುತ್ತೆ; ಕೇಂದ್ರಕ್ಕೆ ರಾಕೇಶ್ ಟಿಕಾಯತ್ ಎಚ್ಚರಿಕೆ

ನಮ್ಮ ಬೇಡಿಕೆ 2 ತಿಂಗಳಲ್ಲಿ ಈಡೇರದಿದ್ದರೆ ದೇಶದಲ್ಲಿ ಯುದ್ಧವಾಗುತ್ತೆ; ಕೇಂದ್ರಕ್ಕೆ ರಾಕೇಶ್ ಟಿಕಾಯತ್ ಎಚ್ಚರಿಕೆ

ನವದೆಹಲಿ: ಭಾರತೀಯ ಕಿಸಾನ್​ ಯೂನಿಯನ್​​ (ಬಿಕೆಯು) ಮುಖ್ಯಸ್ಥ ರಾಕೇಶ್​​ ಟಿಕಾಯತ್​ ಕೇಂದ್ರ ಸರ್ಕಾರಕ್ಕೆ ಎರಡು ತಿಂಗಳ ಸಮಯಾವಕಾಶವನ್ನು ನೀಡಿದ್ದು, ಪ್ರತಿಭಟನಾ ನಿರತ ರೈತರ ಬೇಡಿಕೆ ಈಡೇರಿಸದಿದ್ದರೇ ಯುದ್ಧವಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಸರ್ಕಾರ ನಮ್ಮ ಮಾತುಗಳನ್ನು ಕೇಳುತ್ತಿಲ್ಲ. ಪ್ರತಿಭಟನಾ ನಿರತ ರೈತರು ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯಲು ಬೇಡಿಕೆ ಮುಂದಿಟ್ಟು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಬಗ್ಗೆ ಸರ್ಕಾರ ಚರ್ಚೆ ನಡೆಸಬೇಕಿದೆ. ಇದಕ್ಕಾಗಿ ನಾವು ಸರ್ಕಾರಕ್ಕೆ ಎರಡು ತಿಂಗಳ ಸಮಯವನ್ನು ನೀಡುತ್ತಿದ್ದು, ಇಲ್ಲವಾದರೇ ದೇಶದಲ್ಲಿ ಯುದ್ಧ ನಡೆಯಲಿದೆ ಎಂದು ಟಿಕಾಯತ್​ ಹೇಳಿದ್ದಾರೆ.

ಸ್ವಾತಂತ್ರ್ಯ ದಿನಾಚರಣೆ ದಿನದಂದು ದೆಹಲಿಯಲ್ಲಿ ನಡೆದ ಹಿಂಸಾಚಾರದ ಬಳಿಕವೂ ಜುಲೈ 22 ರಿಂದ ದೆಹಲಿಯ ಪಾರ್ಲಿಮೆಂಟ್ ಬಳಿ ಸುಮಾರು 200ಕ್ಕೂ ಹೆಚ್ಚು ರೈತರು ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಟಿಕಾಯತ್​, ಮನ್ಸೂನ್​ ಅಧಿವೇಶನ ಆರಂಭವಾಗುತ್ತಿರುವ ಹಿನ್ನಲೆಯಲ್ಲಿ ಸುಮಾರು 200 ಮಂದಿ ಬಸ್​ ಮೂಲಕ ಪಾರ್ಲಿಮೆಂಟ್​​ ಬಳಿ ಆಗಮಿಸಿ ಕೃಷಿ ಮಸೂದೆಗಳ ಬಗ್ಗೆ ಧ್ವನಿ ಎತ್ತಲಿದ್ದಾರೆ ಎಂದು ತಿಳಿಸಿದ್ದಾರೆ.

The post ನಮ್ಮ ಬೇಡಿಕೆ 2 ತಿಂಗಳಲ್ಲಿ ಈಡೇರದಿದ್ದರೆ ದೇಶದಲ್ಲಿ ಯುದ್ಧವಾಗುತ್ತೆ; ಕೇಂದ್ರಕ್ಕೆ ರಾಕೇಶ್ ಟಿಕಾಯತ್ ಎಚ್ಚರಿಕೆ appeared first on News First Kannada.

Source: newsfirstlive.com

Source link