ಬೆಂಗಳೂರು: ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ರೋಗಿಗಳ ಸಾವಿನ ಹಿನ್ನೆಲೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಕೆಎಸ್​, ಆಸ್ಪತ್ರೆಯಲ್ಲಿ ಆಕ್ಸಿಜನ್​ ಕೊರತೆ ಆಗಿದೆ. ಈಗ ಜಿಲ್ಲಾಧಿಕಾರಿ ಆಕ್ಸಿಜನ್ ತರಿಸುತ್ತಿದ್ದೇವೆ ಎಂದು ಹೇಳುತ್ತಾರೆ. ಆದರೆ 24 ಜನರನ್ನು ಕಳೆದುಕೊಂಡ ಕುಟುಂಬಗಳಿಗೆ ಏನು ಹೇಳಬೇಕೋ ಗೊತ್ತಾಗುತ್ತಿಲ್ಲ. ಸರ್ಕಾರದಲ್ಲಿ ಯಾರಿಗೂ ಹೊಣೆಗಾರಿಕೆಯೇ ಇಲ್ಲ ಎಂದು ಗುಡುಗಿದ್ರು. ಯಾವುದೇ ಆಗಲಿ ಮೊದಲು ಮುಂಜಾಗ್ರತೆಯಿರಬೇಕು. ನಾನು ನಮ್ಮ ಜಿಲ್ಲಾ ಕಾಂಗ್ರೆಸ್ ಸಮಿತಿಗೆ ತಿಳಿಸಿ, ದುರಂತದಲ್ಲಿ ಸಾವನ್ನಪ್ಪಿದವರಿಗೆ ಧೈರ್ಯ ತುಂಬಲು ಹೇಳುತ್ತೇನೆ ಎಂದರು.

ಇದನ್ನೂ ಓದಿ: ಆಕ್ಸಿಜನ್ ಸಿಗದೇ ನರಳಾಡಿ ಪ್ರಾಣ ಬಿಟ್ಟ 24 ಜನರು; ಸಾವೋ? ಕೊಲೆಯೋ? ರಾಹುಲ್​ ಪ್ರಶ್ನೆ

ಜನರು ಮುಖ್ಯಮಂತ್ರಿ ಹಾಗೂ ಸರ್ಕಾರದ ಮೇಲಿರುವ ನಂಬಿಕೆ ಕಳೆದುಕೊಂಡಿದ್ದಾರೆ. ಆದ್ದರಿಂದ ನಮ್ಮ ಮರ್ಯಾದೆ ಹೋದ್ರು ಚಿಂತೆ ಇಲ್ಲ. ನಾನೇ ಖುದ್ದು ಸರ್ಕಾರದ ಮುಖ್ಯ ಕಾರ್ಯದರ್ಶಿಯನ್ನ ಭೇಟಿ ಮಾಡುತ್ತೇನೆ. ಈ ಬಗ್ಗೆ ವಿಸ್ತೃತವಾದ ಚರ್ಚೆ ಮಾಡುತ್ತೇನೆ. ಘಟನೆಯ ಹೊಣೆಯನ್ನು ಸರ್ಕಾರವೇ ಹೊತ್ತಿಕೊಳ್ಳಬೇಕು. ಇಡೀ ರಾಜ್ಯದಲ್ಲಿ ಇಂತಹ ಘಟನೆಗಳು ಸಾಕಷ್ಟು ನಡೆಯುತ್ತಿದ್ದು, ಚಾಮರಾಜನಗರದಲ್ಲಿ ಬೆಳಕಿಗೆ ಬಂದಿದೆ ಅಷ್ಟೇ. ಸರ್ಕಾರ ಯಾವುದೇ ಪ್ಲಾನಿಂಗ್ ಇಲ್ಲದೇ ನಡೆದುಕೊಳ್ಳುತ್ತಿರುವುದು ವಿಫಲತೆಗೆ ಕಾರಣ. ಆದ್ದರಿಂದ ನಾವು ಅಧಿಕಾರಿಗಳನ್ನು ಅವಲಂಬಿಸಬೇಕಾಗುತ್ತದೆ ಎಂದು ಹೇಳಿದ್ರು.

ಇದನ್ನೂ ಓದಿ: ಎಲ್ಲರೂ ಆಕ್ಸಿಜನ್​​ ಕೊರತೆಯಿಂದಲೇ ಸಾವನ್ನಪ್ಪಿದ್ದಾರೆಂಬ ಮಾತು ಸತ್ಯವಲ್ಲ- ಸುರೇಶ್​ ಕುಮಾರ್

The post ನಮ್ಮ ಮರ್ಯಾದೆ ಹೋದ್ರು ಚಿಂತೆ ಇಲ್ಲ, ಸಿ.ಎಸ್​​ ಭೇಟಿ ಮಾಡ್ತೇನೆ- ಡಿಕೆಎಸ್​ appeared first on News First Kannada.

Source: newsfirstlive.com

Source link