ನಮ್ಮ ರಾಜ್ಯದಲ್ಲಿ ಡಿಸಿ ಮತ್ತು ಎಸ್ಪಿಗಳ ವರ್ಗಾವಣೆ ದಂಧೆಯನ್ನು ಒಬ್ಬ ಮಾಜಿ ಮುಖ್ಯಮಂತ್ರಿಯ ಮಗ ಆರಂಭಿಸಿದ: ಬಸನಗೌಡ ಯತ್ನಾಳ್ | Son of former CM started transfer business of DCs and SPs says Basangouda Patil Yatnal ARB


ವಿಜಯಪುರ: ರಾಜ್ಯದಲ್ಲಿ ಪರಿಸ್ಥಿತಿ ತೀರ ಹದಗೆಟ್ಟಿದೆ, ಹೆಚ್ಚುತ್ತಿರುವ ಅರಾಜಕತೆಯನ್ನು ತಡೆಯಲು ಸರ್ಕಾರ ಪದೇಪದೆ ವಿಫಲವಾಗುತ್ತಿದೆ ಎಂದು ಬಿಜೆಪಿಯ ಪೈರ್ ಬ್ರ್ಯಾಂಡ್ ನಾಯಕ ಮತ್ತು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ (Basangouda Patil Yatnal) ಅವರು ವಿಜಯಪುರನಲ್ಲಿ ಸೋಮವಾರ ಹೇಳಿದರು. ಸುದ್ದಿಗಾರರೊಂದಿಗೆ ನಗರದಲ್ಲಿ ಮಾತಾಡಿದ ಯತ್ನಾಳ್ ರಾಜ್ಯದ ಕೆಲ ಭಾಗಗಳಲ್ಲಿ ಮುಸ್ಲಿಮರು (Muslims) ಅದೆಷ್ಟು ಪ್ರಾಬಲ್ಯ ಮೆರೆಯುತ್ತಿದ್ದಾರೆಂದರೆ ಅವರು ವಾಸ ಮಾಡುವ ಪ್ರದೇಶಗಳಲ್ಲಿ ಮುಸ್ಲಿಮೇತರು ಕಾಲಿಡುವುದು ಕೂಡ ಸಾಧ್ಯವಿಲ್ಲ ಎಂದು ಹೇಳಿ ಭಟ್ಕಳ (Bhatkal), ಕಲಬುರಗಿ ಮತ್ತು ವಿಜಯಪುರದ ಕೆಲ ಭಾಗಗಳನ್ನು ಉಲ್ಲೇಖಿಸಿದರು. ರಾಜ್ಯದ ಪೊಲೀಸ್ ಶಕ್ತಿ ಮತ್ತು ಜಿಲಾಡಳಿತಗಳು ದುರ್ಬಲಗೊಳ್ಳುತ್ತಿರುವುದಕ್ಕೆ ಕಾರಣವನ್ನೂ ಅವರು ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಜಿಲ್ಲಾಧಿಕಾರಿಗಳ ವರ್ಗಾವಣೆ ಒಂದು ದಂಧೆಯಾಗಿ ಮಾರ್ಪಟ್ಟ ಬಳಿಕ ಜಿಲ್ಲಾಡಳಿತ ಮತ್ತು ಪೊಲೀಸ್ ವ್ಯವಸ್ಥೆಯ ಕ್ಷಮತೆ ಮತ್ತು ನೈತಿಕ ಬಲ ಕುಸಿದಿದೆ ಎಂದು ಯತ್ನಾಳ್ ಹೇಳಿದರು. ಕರ್ನಾಟಕದಲ್ಲಿ ಡಿಸಿ ಮತ್ತು ಎಸ್ ಪಿ ಗಳ ವರ್ಗಾವಣೆಯಲ್ಲಿ ಮೊದಲು ಯಾವತ್ತೂ ಆಕ್ರಮ ನಡೆದಿರಲಿಲ್ಲ. ಆದರೆ, ಒಬ್ಬ ಮಾಜಿ ಮುಖ್ಯಮಂತ್ರಿಯ ಮಗ ಇದನ್ನೆಲ್ಲ ಆರಂಭಿಸಿದ ಎಂದು ಅವರು ಹೇಳಿದರು.

ಒಬ್ಬ ಜಿಲ್ಲಾಧಿಕಾರಿ ಅಥವಾ ಎಸ್ ಪಿ ವರ್ಗಾವಣೆಗೆ ರೂ.10 ಕೋಟಿ ಲಂಚದ ರೂಪದಲ್ಲಿ ನೀಡಿದರೆ ಅವನಲ್ಲಿ ದಕ್ಷತೆ ಎಲ್ಲಿ ಉಳಿಯುತ್ತದೆ. ತಾನು ಲಂಚದ ರೂಪದಲ್ಲಿ ನೀಡಿದ ಹಣವನ್ನು ಮರು ಸಂಪಾದನೆ ಮಾಡಲು ದಕ್ಷತೆಯನ್ನು ಅಡವಿಡುತ್ತಾನೆ ಎಂದು ಯತ್ನಾಳ್ ಹೇಳಿದರು. ಒಬ್ಬ ಮಾಜಿ ಮುಖ್ಯಮಂತ್ರಿಯ ಮಗ ಅಂತ ಅವರು ಯಾರನ್ನು ಕುರಿತು ಹೇಳಿದ್ದು ಅಂತ ನೀವು ಊಹಿಸಿರಬಹುದು.

TV9 Kannada


Leave a Reply

Your email address will not be published. Required fields are marked *