ನಮ್ಮ ಹುಡುಗ ಸಿಕ್ಕಾಪಟ್ಟೆ.. ಅಂತಾ ನಾಚಿ ನೀರಾದ ಕಿರುತೆರೆಯ ಲಕ್ಷ್ಮಿ..!


ಲಕ್ಷ್ಮೀ ಬಾರಮ್ಮ ಸೀರಿಯಲ್​ ಮೂಲಕ ಜನಪ್ರೀಯತೆ ಪಡೆದ ನಟಿ ರಶ್ಮಿ ಪ್ರಭಾಕರ್​.. ಪ್ರೀತಿಸಿದ ಹುಡುಗನ ಜೊತೆ ರಿಂಗ್​ ಚೇಂಜ್​ ಮಾಡಿಕೊಂರಿರುವ ಚಿನ್ನು ಶೀಘ್ರದಲ್ಲೇ ಮದುವೆಯಾಗಲಿದ್ದಾರೆ. ಇನ್ನು ಇವರ ಕ್ಯೂಟಾದ ಲವ್​ ಸ್ಟೋರಿಯನ್ನು ನಿಖಿಲ್ ಭಾರ್ಗವ್ ಹಾಗೂ ರಶ್ಮಿ ನ್ಯೂಸ್ಟ್​ಫಸ್ಟ್​ನೊಂದಿಗೆ ಹಂಚಿಕೊಂಡಿದ್ದಾರೆ.

ನಿಖಿಲ್ ಭಾರ್ಗವ್ ಹಾಗೂ ರಶ್ಮಿ ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ‘ರಶ್ಮಿ ಮೇಡಮ್​ನ ಮೀಟ್ ಮಾಡೋಕೆ ಒದ್ದಾಡಿದ್ದಿನಿ. ಮೇಡಮ್ ಅವಾಗ ಶೂಟಿಂಗ್​ನಲ್ಲಿ ಫುಲ್ ಬ್ಯುಸಿ ಇದ್ರು’ ಅಂತ ಕಾಲೆಳ್ದಿದ್ದಾರೆ ನಿಖಿಲ್. ನಾನು ಸಿಕ್ಕಾಪಟ್ಟೆ ಮಾತನಾಡ್ತಿನಿ ಅಂತಾ ಎಲ್ಲರು ತಿಳಿದಿಕೊಂಡಿದ್ದಾರೆ, ಆದರೆ ನಾನು ಕ್ಯಾಮರಾ ಮುಂದೆ ಅಷ್ಟೇ ಅಷ್ಟೊಂದು ಮಾತಾಡ್ತಿನಿ. ನಿಖಿಲ್​ ಫೋಟೋ ನೋಡಿದವರು ಮಾತ್ರ ಇವರು ತುಂಬಾ ಸೈಲೆಂಟ್​ ಅಂತಾ ಹೇಳ್ತಾರೆ. ಬಟ್​ ರಿಯಾಲಿಟಿ ಬೇರೆಯೆ ಇದ್ದು ನಿಖಿಲ್​ ಸಿಕ್ಕಾಪಟ್ಟೆ ಮಾತನಾಡ್ತಾರೆ ಅಂತಾ ತಮ್ಮ ಹುಡುಗನ ಕಿಚಾಯಿಸಿದ್ದಾರೆ ರಶ್ಮಿ..

ಎಲ್ಲರು ನನ್ನ ಕಣ್ಣು ನೋಡಿ ನಿಮ್ಮ ಕಣ್ಣು ತುಂಬಾ ಚಿಕ್ಕದಾಗಿದೆ ಅಂತಾನೆ ಹೇಳೋರು. ನಿಖಿಲ್​ ಮೊದಲ ಬಾರಿಗೆ ನನ್ನ ಮೀಟ್​ ಮಾಡಿದಾಗ ನಿಮ್ಮ ಕಣ್ಣು ಚೆನ್ನಾಗಿದೆ ಅಂದ್ರು. ಅವರ  ಆ ಮಾತು ನನಗೆ ಫಿಲ್ಮಿ ಸ್ಟೈಲ್​ನ ಫೀಲ್​ ಕೊಡ್ತು. ಇನ್ನು ಮೇಡಂ ಆಗ ತುಂಬಾ ಬ್ಯೂಸಿ ಇರ್ತಿದ್ದರು ಶೂಟಿಂಗ್​ ಅದು, ಇದು ಅಂತಾ. ನಾನು ಗುಡ್​ಮಾರ್ನಿಂಗ್​ ಅಂತಾ ಮೆಸೇಜ್​ ಕಳಿಸಿದ್ರೆ, ಅತ್ತ ಕಡೆಯಿಂದ ಗುಡ್​ನೈಟ್​ ಅಂತಾ ರಿಪ್ಲೆ ಬರ್ತಿತ್ತು ಅಂತಾ ರಶ್ಮಿಯನ್ನ ಗುರಾಯಿಸ್ತಾರೆ ನಮ್ಮ ಹೀರೋ ನಿಖಿಲ್​..

ಹೊಸಪೇಟೆಯಲ್ಲಿ ನಾನು ಮದುವೆಗೆ ಹೋಗಬೇಕಿತ್ತು ಆಗ ನನಗೆ ಒಬ್ಬಳೆ ಕಾರ್​ ಓಡಿಸಿಕೊಂಡು ಹೋಗೋದು ಬೇಜಾರಾಗಿತ್ತು. ಆಗ ನನ್ನ ಜೊತೆ ಬಂದಿದ್ದು ನಿಖಿಲ್​.. ಇನ್ನು ದೀಪಾವಳಿಗೆ ನನ್ನ ಅವರ ಮನೆಗೆ ಕರೆದುಕೊಂಡು ಹೋಗಿದ್ದರು ಅಲ್ಲಿಂದ ಈ ಪ್ರೀತಿ ಹುಟ್ಟಿತ್ತು ಅಂತಾ ನಾಚಿ ನೀರಾಗ್ತಾರೆ ನಮ್ಮ ಕಿರುತೆರೆಯ ಲಕ್ಷ್ಮಿ.. ಸದ್ಯ ಎಂಗೇಜ್ಮೆಂಟ್​ ಮಾಡಿಕೊಂಡು ಪ್ರೇಮಿಗಳ ಲೋಕದಲ್ಲಿ ಸ್ವಚ್ಚಂದವಾಗಿ ಹಾರಾಡುತ್ತಿರೋ ಈ ಜೋಡಿಗೆ ನಮ್ಮ ಕಡೆಯಿಂದ ಹ್ಯಾಪಿ ವ್ಯಾಲೆಂಟೈನ್ಸ್​ ಡೇ..

News First Live Kannada


Leave a Reply

Your email address will not be published. Required fields are marked *