ರಿಯಾಲಿಟಿ ಶೋಗಳ ಸ್ಪರ್ಧಿ, ನಟಿ ನಯನಾ ಪುಟ್ಟಸ್ವಾಮಿ ಅವರು ತಾಯ್ತನದ ಪ್ರತಿ ಕ್ಷಣವನ್ನ ಆನಂದಿಸುತ್ತಿದ್ದಾರೆ. ಮಗು, ಕುಟುಂಬ ಅಂತಾ ಬ್ಯುಸಿಯಾಗಿರುವ ನಯಾನಾ ನಟನೆಯಿಂದ ಕೊಂಚ ಗ್ಯಾಪ್ ತೆಗೆದುಕೊಂಡಿದ್ದಾರೆ. ಸೋಶಿಯಲ್ ಮಿಡಿಯಾಗಳ ಮೂಲಕ ಫ್ಯಾನ್ಸ್ ಜೊತೆ ಸಂಪರ್ಕದಲ್ಲಿರುವ ನಟಿ, ತಮ್ಮ ಮುದ್ದು ಮಗ ತಾರುಶ್ ಕೃಷ್ಣನ ಫೋಟೋಗಳನ್ನ ಶೇರ್ ಮಾಡುತ್ತಿರುತ್ತಾರೆ.
ಜೀವನದ ಸಣ್ಣ ಪುಟ್ಟ ಸಂತೋಷಗಳನ್ನು ಅನುಭವಿಸುತ್ತಿರುವ ನಯನಾ ಪುಟ್ಟಸ್ವಾಮಿ ಯುಎಸ್ನಲ್ಲಿದ್ದಾರೆ. ನಟನೆಯಿಂದ ಸ್ವಲ್ಪ ಬ್ರೇಕ್ ತೆಗೆದುಕೊಂಡು ಲೈಫ್ನ ಸವಿಯನ್ನ ಸವಿಯುತ್ತಿದ್ದಾರೆ. ಮೊನ್ನೆ ಮೊನ್ನೆಯಷ್ಟೆ ಮಗನ ಆಫ್ ಇಯರ್ ಬರ್ತ್ ಡೇ ಮಾಡಿ ಖುಷಿ ಪಟ್ಟಿದ್ದರು ನಯನಾ ದಂಪತಿ.
ಮುದ್ದು ಪುಟಾಣಿ ತಾರುಶ್ ಸ್ನೋ ಫಾಲ್ನ್ನ ಎಂಜಾಯ್ ಮಾಡುತ್ತಿರುವ ಕ್ಷಣಗಳನ್ನ ಹಂಚಿಕೊಂಡಿರುವ ನಯನಾ, here is our baby Taarush ‘s first snowfall ಎಂದು ಬರೆದು ಮಗನ ಬ್ಯೂಟಿಫುಲ್ ಫೋಟೋಸ್ಗಳನ್ನ ಹಂಚಿಕೊಂಡಿದ್ದಾರೆ.
ಪ್ರತಿಯೊಬ್ಬ ತಾಯಿಗೂ ಇಂತಹ ಕ್ಷಣಗಳು ಅವಿಸ್ಮರಣೀಯ. ಇದನ್ನ ನೋಡುವಾಗಲೆಲ್ಲಾ ಒಂದು ಸಾರ್ಥಕತೆ, ತೃಪ್ತಿ ಅವ್ರಿಗೆ ಸಿಗುತ್ತದೆ. ಮದುವೆಯ ನಂತರ ಪತಿ ಚರಣ್ ಜೊತೆಗೆ USA ನ ಫಿಲಡೆಲ್ಫಿಯಾದಲ್ಲಿ ಸೆಟ್ಲ್ ಆಗಿರುವ ನಯನಾ ಪುಟ್ಟಸ್ವಾಮಿ ತಾಯ್ತನವನ್ನ ಸಖತ್ ಎಂಜಾಯ್ ಮಾಡ್ತಿದ್ದಾರೆ.
View this post on Instagram
The post ನಯನಾ ಪುಟ್ಟಸ್ವಾಮಿಯ ಮುದ್ದಾದ ಮಗುವಿನ ಮಂಜಿನ ಆಟ appeared first on News First Kannada.