KR Ramesh Kumar: KRS, ಎತ್ತಿನಹೊಳೆ, ಯರಗೋಳ, HN ವ್ಯಾಲಿ KC ವ್ಯಾಲಿ, HMT, HAL ಎಲ್ಲವೂ ಕುಮಾರಸ್ವಾಮಿಯದ್ದೇ. ನಾವು ಕುಮಾರಸ್ವಾಮಿ ಕೃಪೆಯಿಂದ ಬದುಕುತ್ತಿದ್ದೇವೆ – ಮಾಜಿ ಸ್ಪೀಕರ್ ಕೆ ಆರ್ ರಮೇಶ್ ಕುಮಾರ್ ವ್ಯಂಗ್ಯ

ನರಗಳ ದೌರ್ಬಲ್ಯ ಇದ್ದಾಗ ಮಕ್ಕಳು ಆಗೋದು ವಿಳಂಬವಾಗುತ್ತೆ! ಕುಮಾರಸ್ವಾಮಿ ಟ್ವೀಟ್ ಬಗ್ಗೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ವ್ಯಂಗ್ಯ
ಕೋಲಾರ: ನರಗಳ ದೌರ್ಬಲ್ಯ ಇದ್ದಾಗ ಮಕ್ಕಳು ಆಗೋದು ವಿಳಂಬವಾಗುತ್ತೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ (HD Kumaraswamy) ಟ್ವೀಟ್ ಬಗ್ಗೆ ಮಾಜಿ ಸ್ಪೀಕರ್ ಕೆ ಆರ್ ರಮೇಶ್ ಕುಮಾರ್ ( KR Ramesh Kumar) ವ್ಯಂಗ್ಯವಾಡಿದ್ದಾರೆ. ಈ ಬಗ್ಗೆ ಯರಗೋಳ ಡ್ಯಾಂ (yaragola dam project) ಬಳಿ ರಮೇಶ್ ಕುಮಾರ್ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಯೋಜನೆ ವಿಳಂಬ ವಿಚಾರವಾಗಿ ಕುಮಾರಸ್ವಾಮಿ ನಿನ್ನೆ ಟ್ವೀಟ್ ಮೂಲಕ ಆಕ್ರೋಶ ಹೊರ ಹಾಕಿದ್ದರು. ರಮೇಶ್ ಕುಮಾರ್ ರನ್ನ ಸ್ವಯಂ ಘೋಷಿತ ಭಗೀರಥ ಎಂದು ಹೆಚ್.ಡಿ. ಕುಮಾರಸ್ವಾಮಿ ಟೀಕಿಸಿದ್ದರು.
ನರಗಳ ದೌರ್ಬಲ್ಯ ಇದ್ದಾಗ ಮಕ್ಕಳು ಆಗೋದು ವಿಳಂಬವಾಗುತ್ತೆ!
ಡ್ಯಾಂನಲ್ಲಿ ನೀರು ಶೇಖರಣೆಯಾದರೂ ಸಾರ್ವಜನಿಕ ಬಳಕೆಗೆ ಸಿಗದ ಯೋಜನೆ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ವ್ಯಂಗ್ಯವಾಗಿ ಉತ್ತರಿಸಿದ ರಮೇಶ್ ಕುಮಾರ್ ಮೊದಲು ಮಾತುಕತೆ, ನಿಶ್ಚಿತಾರ್ಥ, ಮದುವೆ ಎಲ್ಲವೂ ನಡೆಯುತ್ತೆ. ಅವೆಲ್ಲವೂ ಸರಿಯಾದರೆ 9 ತಿಂಗಳಲ್ಲಿ ಮಕ್ಕಳಾಗುತ್ತೆ. ಒಮ್ಮೊಮ್ಮೆ ನರಗಳ ದೌರ್ಬಲ್ಯ ಇದ್ದಾಗ, ಮಕ್ಕಳಾಗುವುದು ವಿಳಂಬವಾಗುತ್ತೆ ಎಂದು ಕಟಕಿಯಾಡಿದರು.
ಮಾಜಿ ಸಿಎಂ Kumaraswamyಗೆ ಟಾಂಗ್ ಕೊಟ್ಟ ಮಾಜಿ Speaker ರಮೇಶ್ಕುಮಾರ್
KRS, ಎತ್ತಿನಹೊಳೆ, ಯರಗೋಳ, HN ವ್ಯಾಲಿ KC ವ್ಯಾಲಿ, HMT, HAL ಎಲ್ಲವೂ ಕುಮಾರಸ್ವಾಮಿಯದ್ದೇ. ನಾವು ಕುಮಾರಸ್ವಾಮಿ ಕೃಪೆಯಿಂದ ಬದುಕುತ್ತಿದ್ದೇವೆ. ನನ್ನನ್ನು ಭಗೀರಥ ಅಂತಾರೆ, ಮಹಾನ್ ನಾಯಕ, ನರಿ, ಶಕುನಿ ಅಂತಾರೆ… ನೀವು ಏನಾದರೂ ಹೆಸರು ಕೊಡಿ ಎಂದು ರಮೇಶ್ ಕುಮಾರ್ ನಗೆಯಾಡಿದರು.