ಸ್ಟಾರ್​ ನಿರ್ದೇಶಕ, ನರಾಚಿ ಸೃಷ್ಟಿಕರ್ತ ಪ್ರಶಾಂತ್​ ನೀಲ್​​ಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಕನ್ನಡದ ಕಂಪನ್ನ ದೇಶ-ವಿದೇಶಗಳಲ್ಲಿ ಪಸರಿಸಿದ ಅದ್ಭುತ ಫಿಲಂ ಮೇಕರ್​ಗೆ ಕಳೆದ ರಾತ್ರಿ 12 ಗಂಟೆಯಿಂದಲೂ ಶುಭಾಶಯಗಳ ಮಹಾಪೂರವೇ ಹರಿದು ಬರ್ತಿದೆ. ಅದೆಷ್ಟೋ ಅಭಿಮಾನಿಗಳು ಪ್ರಶಾಂತ್​ ನೀಲ್​ ಹುಟ್ಟುಹಬ್ಬವನ್ನ ರಾತ್ರಿಯಿಂದಲೇ ಸೆಲಬ್ರೇಟ್​ ಮಾಡ್ತಿದ್ದಾರೆ. ಇದೀಗ ಪ್ರಶಾಂತ್​ ನೀಲ್​ ನಿರ್ದೇಶನದ ಕೆಜಿಎಫ್​, ಸಲಾರ್​ ಸಿನಿಮಾಗಳ ನಿರ್ಮಾಣ ಸಂಸ್ಥೆಯಾದ ಹೊಂಬಾಳೆ ಫಿಲಂಸ್​ ಒಂದು ಬ್ಯೂಟಿಫುಲ್​ ವಿಡಿಯೋ ಪೋಸ್ಟ್​ ಮಾಡುವ ಮೂಲಕ ಸ್ಪೆಷಲ್​ ಸರ್​ಪ್ರೈಸ್​​​ ನೀಡಿದೆ.

 

ಹೌದು.. ನರಾಚಿ ಸೃಷ್ಟಿಕರ್ತನ ಹುಟ್ಟುಹಬ್ಬಕ್ಕೆ ಅದ್ಭುತ ವಿಡಿಯೋವೊಂದು ರೆಡಿಯಾಗಿದೆ. ಪ್ರಶಾಂತ್​ ನೀಲ್​ ಆಲೋಚನೆ, ಕೆಲಸ, ಸಿನಿಮಾ ಮೇಕಿಂಗ್​, ಇವೆಲ್ಲದರ ಬಗ್ಗೆ ನಟ ರಾಕಿಂಗ್​ ಸ್ಟಾರ್​ ಯಶ್​​ ಕೆಜಿಎಫ್​ ಸಿನಿಮಾದ ಪ್ರೊಮೋಷನ್ಸ್​​ ಸಂದರ್ಭದಲ್ಲಿ ಮಾತನಾಡಿದ ಆಡಿಯೋದೊಂದಿಗೆ ಈ ಸ್ಪೆಷಲ್​ ಬರ್ತ್​ಡೇ ವಿಡಿಯೋ ತಯಾರಿಸಲಾಗಿದೆ. ಪ್ರಶಾಂತ್​ ನೀಲ್​​ ಹಾಲಿವುಡ್​ನಲ್ಲಿ ಸಿನಿಮಾ ನಿರ್ದೇಶನ ಮಾಡಬೇಕು ಅನ್ನೋದೇ ನನ್ನ ಆಸೆ ಅಂದಿರುವ ಯಶ್​​ ಧ್ವನಿ, ಅದ್ಯಾಕೋ ರೋಮಾಂಚನ ಮೂಡಿಸುವಂತಿದೆ.

ಇನ್ನು ಸದ್ಯ ಸಲಾರ್​ ಸಿನಿಮಾದ ಮೊದಲ ಹಂತದ ಶೂಟಿಂಗ್​ ಮುಗಿಸಿ, ಮುಂದೆ ನಟ ಜ್ಯೂನಿಯರ್​ NTRಗೆ ಸಿನಿಮಾ ಮಾಡೋದಾಗಿ ಅಧಿಕೃತವಾಗಿ ಅನೌನ್ಸ್​​ ಮಾಡಿರುವ ಪ್ರಶಾಂತ್​ ನೀಲ್​, ಬಹಳ ದಿನಗಳಿಂದ ಅದ್ಯಾರ ಕೈಗೂ ಸಿಗ್ತಿಲ್ಲ ಅನ್ನೋ ಮಾತು ಕೇಳಿ ಬರ್ತಿದೆ. ಮುಂದಿನ ಸಿನಿಮಾಕ್ಕೆ ತಯಾರಿ ಮಾಡ್ತಿದ್ದಾರಾ? ಅಥವಾ ಕೆಜಿಎಫ್​​ ಚಾಪ್ಟರ್​ 2 ಪೋಸ್ಟ್​ ಪ್ರೊಡಕ್ಷನ್​​​ನಲ್ಲಿ ಬ್ಯುಸಿಯಾಗಿದ್ದಾರಾ ಅನ್ನೋದು ಸ್ಪಷ್ಟವಾಗಿ ತಿಳಿಯುತ್ತಿಲ್ಲ. ಅದೇನೇ ಇರಲಿ.. ಕನ್ನಡದ ಮಣ್ಣಲ್ಲಿ ಹುಟ್ಟಿ, ಕನ್ನಡದ ಸೊಬಗನ್ನ ಬಾನೆತ್ತರಕ್ಕೆ ಏರಿಸಿ, ಕನ್ನಡಿಗರ ಮನಸ್ಸು ಗೆದ್ದ ಕೆಜಿಎಫ್​ ಸೂತ್ರಧಾರನಿಗೆ ಹ್ಯಾಪಿ ಬರ್ತ್​ಡೇ.

 

The post ನರಾಚಿ ಸೃಷ್ಟಿಕರ್ತನ ಹುಟ್ಟುಹಬ್ಬ; ಸ್ಟಾರ್​ ನಿರ್ದೇಶಕನಿಗೆ ಹೊಂಬಾಳೆ ಫಿಲಂಸ್​​​​​ ಸರ್​ಪ್ರೈಸ್ ಗಿಫ್ಟ್​ appeared first on News First Kannada.

Source: newsfirstlive.com

Source link