‘ನರೇಂದ್ರ ಮೋದಿ ಇಡೀ ವಿಶ್ವಕ್ಕೆ ಸ್ಫೂರ್ತಿ’ ಎಂದ ಡೆನ್ಮಾರ್ಕ್​​ ಪ್ರಧಾನಿ

ನವದೆಹಲಿ: ಮೂರು ದಿನಗಳ ಕಾಲ ಭಾರತದ ಪ್ರವಾಸ ಕೈಗೊಂಡಿರುವ ಡೆನ್ಮಾರ್ಕ್​​ ಪ್ರಧಾನಿ ಮೆಟ್ಟಿ ಫ್ರೆಡೆರಿಕ್ಸನ್‌ ಇಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದರು. ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ ಮೆಟ್ಟಿ ಫ್ರೆಡೆರಿಕ್ಸನ್​​​ ಎರಡು ರಾಷ್ಟ್ರಗಳ ಸಂಬಂಧ ಮಹತ್ವದ ಮಾತುಕತೆ ನಡೆಸಿದರು.

ಇಂಧನದ ನವೀಕರಣ, ವ್ಯಾಪಾರ ಮತ್ತು ಹೂಡಿಕೆ ಸೇರಿದಂತೆ ವಿವಿಧ ಕ್ಷೇತ್ರಗಳ ಬಗೆಗಿನ ದ್ವಿಪಕ್ಷೀಯ ಸಹಕಾರ ವೃದ್ಧಿಸುವ ಸಂಬಂಧ ಇಬ್ಬರೂ ನಾಯಕರು ಮಹತ್ವದ ವಿಚಾರಗಳನ್ನು ಚರ್ಚಿಸಿದರು. ಈ ವೇಳೆ ಮಾತಾಡಿದ ಡೆನ್ಮಾರ್ಕ್ ಪ್ರಧಾನಿ, ನಾವು ಭಾರತವನ್ನು ನಿಕಟ ಪಾಲುದಾರಿಕೆ ರಾಷ್ಟ್ರ ಎಂದು ಪರಿಗಣಿಸಿದ್ದೇವೆ. ಎರಡೂ ದೇಶಗಳ ನಡುವೆ ದ್ವಿಪಕ್ಷೀಯ ವ್ಯಾಪಾರ ಬಲವರ್ಧನೆಗೆ ತಮ್ಮ ಭೇಟಿ ಮಹತ್ವದ ಮೈಲಿಗಲ್ಲಾಗಲಿದೆ ಎಂದರು.

ಪ್ರಧಾನಿ ನರೇಂದ್ರ ಮೋದಿ ಇಡೀ ವಿಶ್ವಕ್ಕೇ ಸ್ಫೂರ್ತಿ ಎಂದ ಫ್ರೆಡೆರಿಕ್ಸನ್‌, ಭಾರತ-ಡೆನ್ಮಾರ್ಕ್ ಹಸಿರು ಕಾರ್ಯತಂತ್ರದ ಪಾಲುದಾರಿಕೆ ಅವಲೋಕನ ಮತ್ತು ಸಹಭಾಗಿತ್ವವನ್ನು ಕೊಂಡೊಯ್ಯಲು ನನ್ನ ಭೇಟಿ ಅವಕಾಶ ಕಲ್ಪಿಸಲಿದೆ ಎಂದು ಹೇಳಿದರು.

ಇದನ್ನೂ ಓದಿ: ತನ್ನನ್ನು ದೆಹಲಿಗೆ ಸಾಗ ಹಾಕಲು ಪ್ಲಾನ್​​ ಮಾಡಿದ್ದ ಡಿಕೆಎಸ್​ಗೆ​​ ಸಿದ್ದರಾಮಯ್ಯ ಶಾಕ್​​.. ನಡೆದಿದ್ದೇನು?

News First Live Kannada

Leave a comment

Your email address will not be published. Required fields are marked *