ನರೇಂದ್ರ ಮೋದಿ ನೇತೃತ್ವದಲ್ಲಿ ಸಂಪುಟ ಸಭೆ; ಹಿಂದುಸ್ತಾನ್ ಜಿಂಕ್​ನ ತನ್ನ ಸಂಪೂರ್ಣ ಪಾಲನ್ನು ಮಾರಾಟ ಮಾಡಲು ಅನುಮೋದನೆ | Sale of government entire stake in Hindustan Zinc Ltd cleared in PM Narendra Modi Cabinet Meeting


ನರೇಂದ್ರ ಮೋದಿ ನೇತೃತ್ವದಲ್ಲಿ ಸಂಪುಟ ಸಭೆ; ಹಿಂದುಸ್ತಾನ್ ಜಿಂಕ್​ನ ತನ್ನ ಸಂಪೂರ್ಣ ಪಾಲನ್ನು ಮಾರಾಟ ಮಾಡಲು ಅನುಮೋದನೆ

ನರೇಂದ್ರ ಮೋದಿ ನೇತೃತ್ವದ ಸಚಿವ ಸಂಪುಟ ಸಭೆ

Image Credit source: NDTV

ಹಿಂದೂಸ್ತಾನ್ ಜಿಂಕ್ ಲಿಮಿಟೆಡ್ (HZL)ನಲ್ಲಿರುವ ಸರ್ಕಾರದ ಸಂಪೂರ್ಣ ಪಾಲನ್ನು ಮಾರಾಟ ಮಾಡುವ ಪ್ರಸ್ತಾಪವನ್ನು ಇಂದಿನ ಸಚಿವ ಸಂಪುಟ ಸಭೆಯಲ್ಲಿ ಅನುಮೋದಿಸಲಾಯಿತು.

ನವದೆಹಲಿ: ಎರಡು ದಿನಗಳ ಜಪಾನ್ ಪ್ರವಾಸದ ವೇಳೆ ಕ್ವಾಡ್ ಲೀಡರ್ಸ್ ಶೃಂಗಸಭೆಯಲ್ಲಿ (Quad Summit) ಭಾಗವಹಿಸಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಇಂದು ಮುಂಜಾನೆ ದೆಹಲಿಗೆ ಬಂದಿಳಿದಿದ್ದಾರೆ. ಜಪಾನ್​ನಿಂದ ದೆಹಲಿಗೆ ವಾಪಾಸ್ ಆಗುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಸಂಪುಟ ಸಭೆ ನಡೆಸಿದ್ದಾರೆ. ಹಿಂದೂಸ್ತಾನ್ ಜಿಂಕ್ ಲಿಮಿಟೆಡ್ (HZL)ನಲ್ಲಿರುವ ಸರ್ಕಾರದ ಸಂಪೂರ್ಣ ಪಾಲನ್ನು ಮಾರಾಟ ಮಾಡುವ ಪ್ರಸ್ತಾಪವನ್ನು ಇಂದಿನ ಸಚಿವ ಸಂಪುಟ ಸಭೆಯಲ್ಲಿ ಅನುಮೋದಿಸಲಾಯಿತು. ಭಾರತ್ ಗೋಲ್ಡ್ ಮೈನ್ಸ್ ಲಿಮಿಟೆಡ್ ಅನ್ನು ಮುಚ್ಚುವ ಪ್ರಸ್ತಾವನೆಗೂ ಸಂಪುಟ ಅನುಮೋದನೆ ನೀಡಿದೆ ಎಂದು ಮೂಲಗಳು ತಿಳಿಸಿವೆ.

ಹಿಂದೂಸ್ತಾನ್ ಜಿಂಕ್‌ನಲ್ಲಿ ಸರ್ಕಾರದ ಉಳಿದ ಪಾಲನ್ನು ಮಾರಾಟ ಮಾಡಲು ಕೇಂದ್ರ ಸಚಿವ ಸಂಪುಟ ಇಂದು ಅನುಮೋದನೆ ನೀಡಿದೆ. ಕೇಂದ್ರ ಸರ್ಕಾರವು ಪ್ರಸ್ತುತ ಹಿಂದೂಸ್ತಾನ್ ಜಿಂಕ್‌ನಲ್ಲಿ ಶೇ.29.54ರಷ್ಟು ಪಾಲನ್ನು ಹೊಂದಿದೆ. ಇದು ಸುಮಾರು 37,000 ಕೋಟಿ ರೂ. ಮೌಲ್ಯದ್ದಾಗಿದೆ ಎಂದು ಮೂಲಗಳು ತಿಳಿಸಿರುವುದಾಗಿ ಇಂಡಿಯನ್ ಎಕ್ಸ್‌ಪ್ರೆಸ್‌ ವರದಿ ಮಾಡಿದೆ.

ಹಿಂದೂಸ್ತಾನ್ ಜಿಂಕ್ ಬಹುಪಾಲು ಸರ್ಕಾರಿ ಸ್ವಾಮ್ಯದ ಕಂಪನಿಯಾಗಿತ್ತು. 2002ರಲ್ಲಿ ಅನಿಲ್ ಅಗರ್​ವಾಲ್ ನೇತೃತ್ವದ ವೇದಾಂತ ಗ್ರೂಪ್ ಖರೀದಿಸಿದ ಸಂಸ್ಥೆಯಲ್ಲಿ ಸರ್ಕಾರವು ಈ ಹಿಂದೆ ಶೇ. 26ರಷ್ಟು ಪಾಲನ್ನು ಆಫ್‌ಲೋಡ್ ಮಾಡಿತ್ತು. 29.5ರಷ್ಟು ಪಾಲನ್ನು ಹೊಂದಿರುವ ಕೇಂದ್ರ ಸರ್ಕಾರವು ಹಿಂದೂಸ್ತಾನ್ ಜಿಂಕ್‌ನಲ್ಲಿ ಸಾಮಾನ್ಯ ಷೇರುದಾರರಾಗಿದ್ದು, ಇದನ್ನು ವೇದಾಂತ ಲಿಮಿಟೆಡ್‌ನಿಂದ ಪ್ರಚಾರ ಮಾಡಲಾಗಿದೆ. ಅನಿಲ್ ಅಗರ್ವಾಲ್ ನೇತೃತ್ವದ ವೇದಾಂತ ಜಿಂಕ್ ಲೀಡ್ ಮೈನರ್‌ನಲ್ಲಿ ಶೇ. 64.92ರಷ್ಟು ಪಾಲನ್ನು ಹೊಂದಿದೆ. ಪ್ರಸ್ತುತ ಮಾರುಕಟ್ಟೆ ಬೆಲೆಯಲ್ಲಿ ಹಿಂದೂಸ್ತಾನ್ ಜಿಂಕ್‌ನಲ್ಲಿ ಸರ್ಕಾರದ ಉಳಿಕೆ ಪಾಲು ಸುಮಾರು 38,000 ಕೋಟಿ ರೂ. ಆಗಿದೆ.

TV9 Kannada


Leave a Reply

Your email address will not be published. Required fields are marked *