ಸಂಸದ ಡಿ.ಕೆ. ಸುರೇಶ್, ಪ್ರಧಾನಿ ನರೇಂದ್ರ ಮೋದಿ, ಸಿಎಂ ಯಡಿಯೂರಪ್ಪ, ಕೇಂದ್ರ ಸಚಿವ ನರೇಂದ್ರ ಸಿಂಗ್ ತೋಮರ್ ಹಾಗೂ ರಾಜ್ಯ ಸಚಿವ ಈಶ್ವರಪ್ಪ ಅವರಿಗೆ ಪತ್ರವೊಂದನ್ನ ಬರೆದಿದ್ದಾರೆ. ನರೇಗಾ ಯೋಜನೆಯಡಿ ಕೆಲಸ ಮಾಡುತ್ತಿರುವ ಕಾರ್ಮಿಕರು ಕೊರೊನಾ ಸೋಂಕಿಗೆ ತುತ್ತಾಗ್ತಿದ್ದು ಅವರಿಗೆ ನೆರವು ನೀಡುವಂತೆ ಸುರೇಶ್​ ಒತ್ತಾಯಿಸಿದ್ದಾರೆ.

ಪತ್ರದಲ್ಲೇನಿದೆ?

  •  ನರೇಗಾ ಯೋಜನೆಯಡಿ ಕಾರ್ಯ ನಿರ್ವಹಿಸುತ್ತಿರುವ ಕಾರ್ಮಿಕರಿಗೆ ಸೋಂಕು ತಗುಲಿದ್ದು, ಅವರಿಗೆ 50 ದಿನಗಳ ವೇತನವನ್ನು ಭತ್ಯೆಯಾಗಿ ನೀಡಬೇಕು. ಜೊತೆಗೆ,  ಕಾರ್ಮಿಕರು ಸೋಂಕಿನಿಂದ ಮೃತಪಟ್ಟರೆ 2 ಲಕ್ಷ ರೂಪಾಯಿ ಪರಿಹಾರ ನೀಡಬೇಕು. ರಾಜ್ಯ ಹಾಗೂ ದೇಶದಲ್ಲಿ ಸಾವಿರಾರು ನರೇಗಾ ಕಾರ್ಡ್ ಹೊಂದಿರುವ ಕಾರ್ಮಿಕರು ಕೊರೊನಾ ಸೋಂಕಿತರಾಗಿದ್ದಾರೆ. ಇವರು ದಿನಗೂಲಿ ನೆಚ್ಚಿಕೊಂಡು ಬದುಕುತ್ತಿದ್ದು, ಸರ್ಕಾರ ಇವರ ನೆರವಿಗೆ ಧಾವಿಸಬೇಕು ಅಂತ ಡಿ.ಕೆ ಸುರೇಶ್​ ಹೇಳಿದ್ದಾರೆ.
  • ಇನ್ನೂ ಈ ಸೋಂಕಿತರು ಗುಣಮುಖರಾದರೂ ಮುಂದಿನ 3 ತಿಂಗಳು ಕೆಲಸ ಮಾಡಲು ಆಗುವುದಿಲ್ಲ. ಹೀಗಾಗಿ 50 ದಿನಗಳ ವೇತನ ಭತ್ಯೆಯನ್ನು ನೇರವಾಗಿ ಅವರ ಖಾತೆಗೆ ಹಾಕಬೇಕು.ಈ ಮಹಾಮಾರಿ ಸೋಂಕಿಗೆ ರಾಜ್ಯ ಹಾಗೂ ದೇಶದಲ್ಲಿ ಸಾವಿರಾರು ಕಾರ್ಮಿಕರು ಸತ್ತಿದ್ದಾರೆ. ಹೀಗಾಗಿ ನರೇಗಾ ಯೋಜನೆಯ, 2ನೇ ಶೆಡ್ಯೂಲ್​​ನ 27 ನೇ ಪ್ಯಾರಾದಲ್ಲಿ ತಿಳಿಸಿರುವಂತೆ ಅವರಿಗೆ ಪರಿಹಾರ ನೀಡಬೇಕು.
  • ಆಮ್ ಆದ್ಮಿ ವಿಮಾ ಯೋಜನೆ ಪ್ರಕಾರ ಕಾರ್ಮಿಕ ಸಹಜವಾಗಿ ಸಾವನ್ನಪ್ಪಿದರೆ ₹30 ಸಾವಿರ, ಅಸಹಜ ಸಾವಿಗೆ ಈಡಾದರೆ ₹75 ಸಾವಿರ ಪರಿಹಾರ ನೀಡಲಾಗುವುದು. ಪ್ರಧಾನಮಂತ್ರಿ ಸುರಕ್ಷಾ ವಿಮಾ ಯೋಜನೆ ಪ್ರಕಾರ ಕಾರ್ಮಿಕ ಅಸಹಜವಾಗಿ ಮೃತಪಟ್ಟರೆ ₹2 ಲಕ್ಷ ಪರಿಹಾರ ನೀಡಲಾಗುವುದು. ಆದ್ರೆ ಈ ಯೋಜನೆ ಕೇವಲ 2019-20 ನೇ ಸಾಲಿಗೆ ಸೀಮಿತವಾಗಿದ್ದು, ಇದನ್ನು 2020-21ನೇ ಸಾಲಿಗೂ ಆದಷ್ಟು ಬೇಗ ವಿಸ್ತರಿಸಬೇಕು ಅಂತಲೂ ಮನವಿ ಮಾಡಿದ್ದಾರೆ.
  • ಜೊತೆಗೆ, ಮಾನವೀಯತೆ ದೃಷ್ಟಿಯಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೂಡಲೇ ಈ ವಿಚಾರಗಳ ಬಗ್ಗೆ ಗಮನ ಹರಿಸಿ, ಜಾರಿಗೆ ತರಬೇಕು ಅಂತ ಪತ್ರದ ಮೂಲಕ ಸುರೇಶ್​ ಮಾಡಿಕೊಂಡಿದ್ದಾರೆ.

The post ನರೇಗಾ ಕಾರ್ಮಿಕರು ಸೋಂಕಿನಿಂದ ಮೃತಪಟ್ರೆ ₹2 ಲಕ್ಷ ಪರಿಹಾರ ನೀಡ್ಬೇಕು -ಪ್ರಧಾನಿ, ಸಿಎಂಗೆ ಡಿ.ಕೆ.ಸುರೇಶ್ ಪತ್ರ appeared first on News First Kannada.

Source: newsfirstlive.com

Source link