ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ಇಂದು ರಾಜ್ಯದಲ್ಲಿ ಕೊರೊನಾ ಚಿಕಿತ್ಸೆಯಲ್ಲಿ ನಿರತರಾಗಿರೋ ನರ್ಸ್​​ಗಳ ಜೊತೆ ವಿಡಿಯೋ ಕಾನ್ಫರೆನ್ಸ್​ ಮೂಲಕ ಮಾತುಕತೆ ನಡೆಸಿದರು. ಬೀದರ್ ಸೇರಿದಂತೆ ಹಲವು ಜಿಲ್ಲೆಯ ದಾದಿಯರ ಜೊತೆ ಸಿಎಂ ಮಾತುಕತೆ ನಡೆಸಿ, ಅವರ ಸಮಸ್ಯೆಗಳನ್ನ ಆಲಿಸಿದರು.

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಬಿಎಸ್​ವೈ, ಈಗ ತಾನೆ ಕೋವಿಡ್ ಸಂಬಂಧ ಕೆಲಸ ಮಾಡ್ತಿರೋ ನರ್ಸ್‌ಗಳ ಜೊತೆ ಮಾತುಕತೆ ನಡೆಸಿದ್ವಿ. ಅವ್ರ ಸಮಸ್ಯೆಗಳೇನು ಅಂತ ಕೇಳಿದ್ವಿ.  ಕೋವಿಡ್ ಇದ್ರೂ ಬಹಳ ಒಳ್ಳೇ ರೀತಿಯಲ್ಲಿ ಕೆಲಸ ಮಾಡ್ತಿದ್ದಾರೆ. ಕೆಲವರಿಗೆ ಕೊರೊನಾ ಬಂದ್ರೂ, ಲೆಕ್ಕಿಸದೇ, ಸುಧಾರಿಸಿಕೊಂಡು ಮತ್ತೆ ಕೆಲಸ ಮಾಡ್ತಿದ್ದಾರೆ. ಮನೆಯವರಿಗೆ ಕೋವಿಡ್​ ಬಂದ್ರೂ ಕಾರ್ಯನಿರ್ವಹಿಸುತ್ತಿದ್ದಾರೆ. ಈ ರೀತಿ ಪ್ರಾಣದ ಹಂಗು ತೊರೆದು ಕೆಲಸ ಮಾಡುತ್ತಿರೋ  ನರ್ಸ್​​ಗಳಿಗೆ ಯಾವ ರೀತಿ ಅಭಿನಂದನೆ ಸಲ್ಲಿಸಬೇಕು ಅಂತ ಶಬ್ದಗಳೇ ಸಿಗೋದಿಲ್ಲ ಎಂದು ಶ್ಲಾಘಿಸಿದ್ರು.

ನರ್ಸ್​​ಗಳ ಕಷ್ಟಸುಖಗಳಲ್ಲ ಆಲಿಸೋ ಪ್ರಯತ್ನ ಮಾಡಿದ್ದೇನೆ. ಅವರು ಕೆಲವು ಸಲಹೆಗಳು ಕೊಟ್ಟಿದ್ದಾರೆ, ಸಮಸ್ಯೆಗಳನ್ನ ತಿಳಿಸಿದ್ದಾರೆ. ಅದಕ್ಕೆ ಪರಿಹಾರ ಕೊಡುವ ಪ್ರಯತ್ನ ಮಾಡ್ತಿದ್ದೇವೆ ಎಂದು ತಿಳಿಸಿದರು.

ಇನ್ನು ಲಾಕ್‌ಡೌನ್ ವಿಚಾರವಾಗಿ ಮಾತನಾಡಿದ ಸಿಎಂ, ಈ ಬಗ್ಗೆ ಜೂನ್ 4-5ರ ಬಳಿಕ ಚರ್ಚೆ ಮಾಡುತ್ತೇನೆ ಎಂದರು. ಬ್ಲ್ಯಾಕ್ ಫಂಗಸ್ ಹೆಚ್ಚಾಗುತ್ತಿದೆ. ಈ ಬಗ್ಗೆ ಅಧಿಕಾರಿಗಳ ಜೊತೆ ಚರ್ಚೆ ಮಾಡಿ ಮುಂದಿನ ಕ್ರಮ ಕೈಗೊಳ್ಳುತ್ತೇನೆ ಎಂದು ಹೇಳಿದರು.

The post ನರ್ಸ್​​ಗಳ ಸಮಸ್ಯೆ ಆಲಿಸಿದ ಸಿಎಂ ಬಿಎಸ್​ವೈ ಏನಂದ್ರು? appeared first on News First Kannada.

Source: newsfirstlive.com

Source link