ಕೋಲ್ಕತ್ತಾ: ಕೌನ್ಸಿಲರ್ ಒಬ್ಬರು ತಾವೇ ಒಂದು ಮಹಿಳೆಗೆ ಕೊರೊನಾ ಲಸಿಕೆ ನೀಡಿರುವ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.

ರಾಜ್ಯದ ಕುಲತಿ ಪ್ರದೇಶದಲ್ಲಿ ಟಿಎಂಸಿ ಕೌನ್ಸಿಲರ್ ಆಗಿರುವ ತಬಸ್ಸುಮ್ ಅರಾ ಕೊರೊನಾ ಲಸಿಕಾ ಕೇಂದ್ರಕ್ಕೆ ಬರುತ್ಥಾರೆ. ಅಲ್ಲಿ ನರ್ಸ್ ಬಳಿ ಬಂದು ಅವರ ಕೈಲಿದ್ದ ಸಿರಿಂಜ್ ಪಡೆದು, ಲಸಿಕೆ ಸ್ವೀಕರಿಸಿಲು ಕುಳಿತಿದ್ದ ಮಹಿಳೆಗೆ ತಾವೇ ಲಸಿಕೆ ಕೊಡುತ್ತಾರೆ. ಇದು ವೀಡಿಯೋದಲ್ಲಿ ಸ್ಪಷ್ಟವಾಗಿ ಚಿತ್ರೀಕರಣವಾಗಿದೆ. ಇದನ್ನೂ ಓದಿ:  ಮಹಿಳೆಯರಿಗೆ ಸೂಟ್ ಆಗುವಂತಹ 5 ಬೆಸ್ಟ್ ಬ್ರೆಸ್ಲೆಟ್‍ಗಳು

ಬಿಜೆಪಿಯ ಅನೇಕ ನಾಯಕರು ಈ ವೀಡಿಯೋವನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಟಿಎಂಸಿ ಪಕ್ಷಕ್ಕೆ ಅದರ ನಾಯಕರ ಮೇಲೆ ಹಿಡಿತವಿಲ್ಲ ಎಂದು ಪ್ರಶ್ನಿಸುತ್ತಿದೆ. ಈ ರೀತಿ ಅನುಭವವಿಲ್ಲದವರು ಲಸಿಕೆ ಕೊಟ್ಟರೆ ಅದನ್ನಿ ಸ್ವೀಕರಿಸಿದವರ ಕಥೆ ಏನಾಗಬೇಕು ಎಂದು ಕೇಳಲಾರಂಭಿಸಿದ್ದಾರೆ.

ಆದರೆ ಈ ಆರೋಪವನ್ನು ಕೌನ್ಸಿಲರ್ ತಬಸ್ಸುಮ್ ಅರಾ ತಳ್ಳಿ ಹಾಕಿದ್ದಾರೆ. ಜನರು ಲಸಿಕೆ ಪಡೆಯುವುದಕ್ಕೆ ಹಿಂಜರಿಯುತ್ತಿದ್ದಾರೆ. ಹೀಗಾಗಿ ನಾನು ಸಿರಿಂಜ್ ಹಿಡಿದುಕೋಮಡಿದ್ದೇ ಅಷ್ಟೇ. ನಾನು ಲಸಿಕೆ ಕೊಟ್ಟಿಲ್ಲ. ಕೊರೊನಾ ಲಸಿಕೆ ಕುರಿತು ಜಾಗೃತಿ ಮೂಡಿಸಲು ಸಿರಿಂಜ್ ಹಿಡಿದುಕೋಮಡಿದ್ದೆ. ನನ್ನದು ನರ್ಸಿಂಗ್ ಕೋರ್ಸ್ ಮುಗಿಸಿದೆ. ಇದು ಸುಳ್ಳು ಆರೋಪ ಎಂದು ಹೇಳಿದ್ದಾರೆ.

ನಾವು ಈ ಬಗ್ಗೆ ತನಿಖೆ ನಡೆಸುತ್ತೇವೆ. ತಬಸ್ಸುಮ್ ಅರಾ ಯಾರಿಗಾದರೂ ಲಸಿಕೆ ನೀಡಿದ್ದರೆ ಕ್ರಮ ಕೈಗೊಳ್ಳುತ್ತೇವೆ ಎಂದು ಸಿವಿಕ್ ಆಡಳಿತಾಧಿಕಾರಿ, ಅಸನ್ಸೋಲ್ ಮುನ್ಸಿಪಲ್ ಕಾರ್ಪೊರೇಶನ್ ಅಮರನಾಥ ಚಟರ್ಜಿ ಅವರು ಹೇಳಿದ್ದಾರೆ.

The post ನರ್ಸ್ ಬದಲು ತಾನೇ ಲಸಿಕೆ ಕೊಟ್ಟ ಕೌನ್ಸಿಲರ್ appeared first on Public TV.

Source: publictv.in

Source link