ಬೆಂಗಳೂರು: ಕಾಂಗ್ರೆಸ್ ಕಾರ್ಯಕರ್ತ ಮೊಹಮ್ಮದ್ ಹ್ಯಾರಿಸ್ ನಲಪಾಡ್ ಯುವ ಕಾಂಗ್ರೆಸ್ ನ ಬೆಂಬಲಿಗರಿಗೆ ಕೊರೊನಾ ವ್ಯಾಕ್ಸಿನ್ ಕೊಡಿಸಿದ್ದಾರೆ. ವ್ಯಾಕ್ಸಿನ್ ಹಾಕಿಸಿಕೊಂಡ ಕಾರ್ಯಕರ್ತರೊಬ್ಬರು ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಹಂಚಿಕೊಂಡಿದ್ದಾರೆ.

ಅದ್ರಲ್ಲೂ ಖಾಸಗಿ ಹೊಟೇಲ್್‌ನಲ್ಲಿ ಬೆಂಬಲಿಗರಿಗೆ ವ್ಯಾಕ್ಸಿನ್ ಹಾಕಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಒಂದೆಡೆ ಪ್ರಧಾನಿಯಾದಿಯಾಗಿ ಎಲ್ಲರೂ ಸರ್ಕಾರಿ ಆಸ್ಪತ್ರೆಗಳಲ್ಲಿ ವ್ಯಾಕ್ಸಿನ್ ಹಾಕಿಸಿಕೊಳ್ಳುತ್ತಿದ್ದಾರೆ. ಈ ಮಧ್ಯೆ ಖಾಸಗಿ ಹೋಟೆಲ್ ನಲ್ಲಿ ವ್ಯಾಕ್ಸಿನ್ ನೀಡಿರುವುದು ಭಾರೀ ಚರ್ಚಗೆ ಗುರಿಯಾಗಿದೆ.

ಇನ್ನು ಈ ಕುರಿತು ಪ್ರತಿಕ್ರಿಯೆ ನೀಡಿರೋ ಬಿಬಿಎಂಪಿ ಮುಖ್ಯ‌ಕಾರ್ಯದರ್ಶಿ ಗೌರವ್ ಗುಪ್ತಾ.. ನನಗೆ ಈ ವಿಷಯ ಖಂಡಿತ ಗೊತ್ತಿಲ್ಲ. ಅವರಿಗೆ ಎಲ್ಲಿಂದ ವ್ಯಾಕ್ಸಿನ್ ಸಿಕ್ಕಿದೆ.. ಯಾರು ಅವ್ರಿಗೆ ವ್ಯಾಕ್ಸಿನ್ ಕೊಟ್ರು ಅನ್ನೋದರ ಬಗ್ಗೆ ವಿಚಾರಣೆ ಮಾಡ್ತೇವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: 5 Star ಹೋಟೆಲ್​ನಲ್ಲಿ ನಲಪಾಡ್ ಬೆಂಬಲಿಗರಿಗೆ ವಾಕ್ಸಿನ್; ದೇಶಕ್ಕೊಂದು, ಇವರಿಗೊಂದು ಕಾನೂನಾ?

ಇನ್ನು ಆಕ್ಸಿಜನ್ ಸಮಸ್ಯೆ ವಿಚಾರವಾಗಿ ಪ್ರತಿಕ್ರಿಯಿಸಿದ ಗೌರವ್ ಗುಪ್ತಾ..ರಾಜ್ಯದಲ್ಲಿ ಆಕ್ಸಿಜನ್ ಲಭ್ಯತೆ ಇದೆ. ಆದ್ರೆ ಕೆಲವು ಆಸ್ಪತ್ರೆಗಳಲ್ಲಿ ಆಕ್ಸಿಜನ್ ಸ್ಟೋರೇಜ್ ಸೌಲಭ್ಯವನ್ನ ಮಾಡಿಕೊಂಡಿಲ್ಲ. ದೊಡ್ಡ ದೊಡ್ಡ ಆಸ್ಪತ್ರೆಗಳಲ್ಲಿ ಲಿಕ್ವಿಡ್ ಆಕ್ಸಿಜನ್ ಟ್ಯಾಂಕ್ ಅನ್ನು ಅವರೇ ಸಿದ್ಧ ಮಾಡಿಟ್ಟಿದ್ದಾರೆ. ಸಣ್ಣ ಆಸ್ಪತ್ರೆಗಳು, ನರ್ಸಿಂಗ್ ಹೋಮ್ ಗಳಲ್ಲಿ ಒಂದು ಅಥವಾ ಎರಡು ಸಿಲಿಂಡರ್ ಮೇಲೆ ಡಿಪೆ‌ಂಡ್ ಆಗಿದ್ದಾರೆ. ಇಂತಹ ಸಂದರ್ಭದಲ್ಲಿ ಸಿಲಿಂಡರ್ ಖಾಲಿ ಆದ್ರೆ ಕೂಡಲೆ ಫಿಲ್ಲಿಂಗ್ ಗೆ ತೊಂದರೆಯಾಗ್ತಿದೆ. ಆಕ್ಸಿಜನ್ ಕೊರತೆ ಎದುರಿಸ್ತಿರೊ ಆಸ್ಪತ್ರೆಗಳ ಸರ್ವೆಗೆ ಗೌರವ್ ಆದೇಶ ನೀಡಿದ್ದೇವೆ ಎಂದಿದ್ದಾರೆ.

The post ನಲಪಾಡ್​ಗೆ ವ್ಯಾಕ್ಸಿನ್ ಎಲ್ಲಿಂದ ಸಿಕ್ಕಿದೆ ಅಂತ ಗೊತ್ತಿಲ್ಲ- ಗೌರವ್ ಗುಪ್ತಾ appeared first on News First Kannada.

Source: newsfirstlive.com

Source link