ಬೆಂಗಳೂರು: ಕಾಂಗ್ರೆಸ್​ ಯುವ ಮುಖಂಡ ಮಹಮ್ಮದ್​ ನಲಪಾಡ್​ಗೆ ಇಂಡಿಯನ್ ಯೂಥ್ ಕಾಂಗ್ರೆಸ್​ ಕೊನೆಗೂ ಸಮಾಧಾನಕರ ಸುದ್ದಿ ನೀಡಿದೆ. ಫೆಬ್ರವರಿ 2022ರಿಂದ ರಾಜ್ಯ ಕಾಂಗ್ರೆಸ್​ನ ಯುವ ಘಟಕದ ಅಧ್ಯಕ್ಷ ಸ್ಥಾನದ ಜವಾಬ್ದಾರಿ ವಹಿಸಿಕೊಳ್ಳಿ ಎಂದು ಸೂಚನೆ ನೀಡಿದೆ.

ಈ ಮೂಲಕ ನಲಪಾಡ್ ಕೆಪಿವೈಸಿ ಅಧ್ಯಕ್ಷರಾಗೋದು ಕನ್ಫಮ್ ಆಗಿದೆ. 2022ರ ಫೆಬ್ರವರಿಯಿಂದ ಮಹಮ್ಮದ್ ನಲಪಾಡ್ ರಾಜ್ಯ ಕಾಂಗ್ರೆಸ್​ನ ಯುವ ಘಟಕದ ಅಧ್ಯಕ್ಷರಾಗಲಿದ್ದಾರೆ. ಇನ್ನು 2022ರ ಜನವರಿ 31ರವರೆಗೆ ರಕ್ಷಾ ರಾಮಯ್ಯ ಅವರೇ ಕೆಪಿವೈಸಿ ಅಧ್ಯಕ್ಷರಾಗಿ ಮುಂದುವರಿಯಲಿದೆ.

ಈ ಬಗ್ಗೆ ರಾಷ್ಟ್ರೀಯ ಕಾಂಗ್ರೆಸ್ ಯುವ ಅಧ್ಯಕ್ಷ ಬಿ.ವಿ. ಶ್ರೀನಿವಾಸ್​ರಿಂದ ಅಧಿಕೃತ ಆದೇಶ ಹೊರಡಿಸಿದ್ದಾರೆ. ಈ ಹಿಂದೆ ರಕ್ಷಾ ರಾಮಯ್ಯ ಹಾಗೂ ನಲಪಾಡ್ ಮಧ್ಯೆ ಪಟ್ಟಕ್ಕಾಗಿ ಫೈಟ್ ನಡೆದಿತ್ತು. ಕಾಂಗ್ರೆಸ್ ಹೈಕಮಾಂಡ್ ಸೂಚನೆ ಬಳಿಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ನೇತೃತ್ವದಲ್ಲಿ ಸಂಧಾನ ಸಭೆ ನಡೆದಿತ್ತು. ಇದರ ಬೆನ್ನಲ್ಲೇ ಕೆಪಿವೈಸಿ ಅಧ್ಯಕ್ಷರಾಗುವ ಕನಸು ಕಟ್ಟಿದ್ದ ನಲಪಾಡ್ ಐವೈಸಿ ಗುಡ್​​ನ್ಯೂಸ್​​ ನೀಡಿದೆ. ಇಂಡಿಯನ್ ಯೂತ್ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ಶ್ರೀನಿವಾಸ್ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದೆ.

The post ನಲಪಾಡ್​ ಮುಂದಿನ ಫೆಬ್ರವರಿಯಿಂದ ರಾಜ್ಯ ಕಾಂಗ್ರೆಸ್​ನ ‘ಯುವರಾಜ’ appeared first on News First Kannada.

Source: newsfirstlive.com

Source link