ಬೆಂಗಳೂರು: ಕಾಂಗ್ರೆಸ್ ಯುವ ನಾಯಕ ಮೊಹಮ್ಮದ್ ನಲಪಾಡ್ ಹಾಗೂ ಅವರ ಬೆಂಬಲಿಗರಿಂದ ಬಳ್ಳಾರಿ ಗ್ರಾಮೀಣ ಯುವ ಕಾಂಗ್ರೆಸ್ ಅಧ್ಯಕ್ಷ ಸಿದ್ದು ಹಳ್ಳೇಗೌಡ ಮೇಲೆ ಹಲ್ಲೆ ಮಾಡಲಾಗಿದೆ ಅನ್ನೋ ಆರೋಪ ಕೇಳಿಬಂದಿತ್ತು. ಆದರೆ ಈ ಆರೋಪವನ್ನ ಇದೀಗ ಸಿದ್ದು ಹಳ್ಳೇಗೌಡ ನಿರಾಕರಿಸಿದ್ದಾರೆ.
ಬಿಜೆಪಿ ಷಡ್ಯಂತ್ರ
ಗಲಾಟೆ ನಡೆದ ಸ್ಥಳದಲ್ಲಿ ನಾನು ಇರಲಿಲ್ಲ. ನನ್ನ ಮೇಲೆ ಹಲ್ಲೆಯೇ ಆಗಿಲ್ಲ ಎಂದು ಸಿದ್ದು ಹಳ್ಳೇಗೌಡ ಹೇಳಿದ್ದಾರೆ. ಈ ಬಗ್ಗೆ ವಿಡಿಯೋ ಒಂದನ್ನ ಬಿಡುಗಡೆ ಮಾಡಿರುವ ಸಿದ್ದುಹಳ್ಳೇಗೌಡ.. ಮಾಧ್ಯಮಗಳಲ್ಲಿ ನಲಪಾಡ್ ನನಗೆ ಹೊಡೆದಿದ್ದಾರೆ ಎಂದು ಸುದ್ದಿಯಾಗುತ್ತಿದೆ. ಇದು ನೂರಕ್ಕೆ ನೂರರಷ್ಟು ಸುಳ್ಳು, ಸುಳ್ಳು. ತಲೆಗೆ ಹೊಡೆದಿದ್ದಾರೆ, ಮೂಗಿಗೆ ಹೊಡೆದಿದ್ದಾರೆ. ತುಟಿ ಹರಿದು ಹೋಗಿದೆ ಅನ್ನೋ ಸುದ್ದಿ ಹರಿದಾಡುತ್ತಿದೆಯಲ್ಲ. ಇದೆಲ್ಲ ಸುಳ್ಳು.