ನಲಪಾಡ್ ಸುತ್ತ ಮತ್ತೊಂದು ಅನುಮಾನದ ಹುತ್ತ; ‘ಬಿಟ್​ಕಾಯಿನ್’ ಚಾರ್ಜ್​ಶೀಟ್​​​ನಲ್ಲಿ ಹ್ಯಾರಿಸ್ ಪುತ್ರರ ಹೆಸರು


ಬೆಂಗಳೂರು: ರಾಜ್ಯದಲ್ಲಿ ಸಂಚಲನ ಸೃಷ್ಟಿಸಿರುವ ಬಿಟ್ ಕಾಯಿನ್ ಹಗರಣ ಎಕ್ಸ್​ಕ್ಲೂಸಿವ್​ ಸುದ್ದಿಯನ್ನು ಮೊದಲು ನ್ಯೂಸ್​​ಫಸ್ಟ್ ಬ್ರೇಕ್​ ಮಾಡಿತ್ತು. ಸದ್ಯ ಪ್ರಕರಣದಲ್ಲಿ ಆರೋಪಿಯ ಹಿನ್ನೆಲೆಯ ಬಗ್ಗೆ ಪೊಲೀಸ್​​ ವಿತರಣೆಯಲ್ಲಿ ಸಾಕಷ್ಟು ಮಾಹಿತಿ ಲಭ್ಯವಾಗಿದೆ. ಈ ನಡುವೆ ಬಿಟ್​ ಕಾಯಿನ್​​ ಹಗರಣ ಹೇಗೆ ನಡೆಯುತ್ತಿತ್ತು. ಕದ್ದ ಬಿಟ್ ಕಾಯಿನ್ ಗಳನ್ನು ಹ್ಯಾಕರ್ ಶ್ರೀಕಿ ಅಲಿಯಾಸ್​ ಶ್ರೀಕೃಷ್ಣ ಹೇಗೆ ಹಣವಾಗಿ ಮಾರ್ಪಾಡು ಮಾಡುತ್ತಿದ್ದ. ಯಾವುದೇ ಬ್ಯಾಂಕ್​​, ಫೋನ್​ ಇಲ್ಲದೇ ಹೇಗೆ ಹಣ ಪಡೆದುಕೊಳ್ಳುತ್ತಿದ್ದ ಎಂಬ ಮಾಹಿತಿ ಚಾರ್ಜ್​ಶೀಟ್​​ನಲ್ಲಿದ್ದು ಅದರ ಪ್ರತಿ ನ್ಯೂಸ್​ಫಸ್ಟ್​​ಗೆ ಲಭ್ಯವಾಗಿದೆ.

ಶ್ರೀಕಿ ತನ್ನ ಸ್ನೇಹಿತನಿಗೆ ಬಿಟ್​ಕಾಯಿನ್ ಟ್ರಾನ್ಸಫರ್
ಪ್ರಕರಣದ ಪ್ರಮುಖ ಆರೋಪಿಯಾಗಿರೋ ಶ್ರೀಕಿ, ಕದ್ದ ಬಿಟ್ ಕಾಯಿನ್ ಗಳನ್ನು ತನ್ನ ಸ್ನೇಹಿತನಿಗೆ ಟ್ರಾನ್ಸಫರ್ ಮಾಡಿ ಅಲ್ಲಿಂದ ಆ ಕಾಯಿನ್ ಗಳು ಕ್ಯಾಷ್ ಆಗಿ ಮಾರ್ಪಾಡು ಮಾಡುತ್ತಿದ್ದನಂತೆ. ಇದಕ್ಕೆ ಪ್ರಕರಣದ ಎರಡನೇ ಆರೋಪಿ ಆಗಿರೋ ಶ್ರೀಕಿ ಸ್ನೇಹಿತ ರಾಬಿನ್ ಮೂಲಕ ಬಿಟ್ ಕಾಯಿನ್ ಮಾರಾಟ ಮಾಡುತ್ತಿದ್ದನಂತೆ. ಸದ್ಯ ರಾಬಿನ್ ಬಿಟ್​ ಕಾಯಿನ್​ ಹೇಗೆ ಮಾರಾಟ ಮಾಡುತ್ತಿದ್ದ, ಆ ಹಣವನ್ನು ಶ್ರೀಕಿಗೆ ತಲುಪಿಸುತ್ತಿದ್ದ ಅನ್ನೋದು ಇಂಟ್ರೇಸ್ಟಿಂಗ್ ವಿಚಾರವಾಗಿದ್ದು, ಈ ಬಗ್ಗೆ ಪೊಲೀಸರ ವಿಚಾರಣೆಯ ಸಂದರ್ಭದಲ್ಲಿ.. ರಾಬಿನ್ ಸಂಪೂರ್ಣ ಮಾಹಿತಿಯನ್ನು ಸಿಸಿಬಿ ಎದುರು ಬಿಚ್ಚಿಟ್ಟಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.

ರಾಬಿನ್ ಯಾರು..?
ಮೂಲತಃ ಪಶ್ಚಿಮ ಬಂಗಾಳ ರಾಜ್ಯದ ಬೋಡ್ವಾನ್ ನಿವಾಸಿಯಾಗಿದ್ದ ರಾಬಿನ್ ಖಂಡೆಲಾವಾಲ, ಸಿಎ ಮಾಡಿಕೊಂಡು ರೈಸ್ ಮಿಲ್ ಬ್ಯೂಸಿನೆಸ್ ಮಾಡ್ತಿದ್ದ. ರಾಬಿನ್ ಆನ್ಲೈನ್ ಸರ್ವೀಸಸ್ ಹೆಸರಿನ ಬಿಟ್ಕಾಯಿನ್ ಟ್ರೇಡಿಂಗ್ ಮಾಡಿ, 1 ರಿಂದ 2 ಪರ್ಸೆಂಟ್ ಕಮಿಷನ್ ಪಡೆದು 50 ಕೋಟಿ ವ್ಯವಹಾರ ಮಾಡಿದ್ದನಂತೆ.

2017 ರಲ್ಲಿ ಅನ್ ಲೈನ್ ಮೂಲಕ ಪರಿಚಯ ರಾಬಿನ್​​ಗೆ ಶ್ರೀಕಿ ಪರಿಚಯವಾಗಿದೆ. ಮೊದಲು 900 ಬಿಟ್ ಕಾಯಿನ್ ಬದಲಾವಣೆಗಾಗಿ ಮಾತುಕತೆ ಆದ ಬಳಿಕ ಶ್ರೀಕಿ ಬಳಿ ಕಾಯಿನ್ ಪಡೆದು ಮಾರಿ ಹಣ ಮಾಡಿದ್ದನಂತೆ. ಶ್ರೀಕಿ ಕೊಟ್ಟ ಟೋಕನ್ ಮಾರಿ ಬಿಟ್ ಕಾಯಿನ್ ಸಂಗ್ರಹ ಮಾಡಿ, ಶ್ರೀಕಿ ಸೂಚಿಸಿದಂತೆ ಅನೇಕ ಅಕೌಂಟ್ ಗಳಿಗೆ ಹಣ ಟ್ರಾನ್ಸಫರ್ ಮಾಡಿದ್ದ ಎನ್ನಲಾಗಿದ್ದು, ಇದಕ್ಕಾಗಿ ಡೆರ್ಲೆ ಹೆರ್ಮಾನ್ ಫೇಸ್ ಬುಕ್ ಅಕೌಂಟ್ ಮೂಲಕ ಚಾಟಿಂಗ್ ಮಾಡುತ್ತಿದ್ದ ಎಂಬ ಮಾಹಿತಿ ಲಭ್ಯವಾಗಿದೆ.

ಆರೋಪಿ-2; ರಾಬಿನ್​​ ಖಂಡೇಲಾ

ಸಿಸಿಬಿ ವಿಚಾರಣೆಯಲ್ಲಿ ಮಹಮ್ಮದ್ ನಲಪಾಡ್ ಹೆಸರು..?
ಶ್ರೀಕಿ ಪರಿಚಯವಾಗಿ ಬಿಟ್​ ಕಾಯಿನ್​ ಟೋಕನ್​ ಮಾರಾಟ ಮಾಡಿ ಹಣ ನೀಡುತ್ತಿದ್ದರು ಕೂಡ ರಾಬಿನ್​​ಗೆ ಶ್ರೀಕಿ ಹ್ಯಾಕರ್ ಅಂತ ಗೊತ್ತಾಗಿದ್ದು ಬೆಂಗಳೂರಿಗೆ ಆಗಮಿಸಿದ ವೇಳೆಯಂತೆ. ರಾಬಿನ್​ 2018ರ ಜನವರಿಯಲ್ಲಿ ಬೆಂಗಳೂರಿಗೆ ಆಗಮಿಸಿ ಶ್ರೀಕಿ ಸೂಚನೆಯಂತೆ ಐಟಿಸಿ ಗಾರ್ಡೆನಿಯಾದಲ್ಲಿದ್ದನಂತೆ. ಆ ವೇಳೆ ಮೂರು ದಿನ ಶ್ರೀಕಿಯೊಂದಿಗೆ ಸಂದರ್ಭದಲ್ಲಿ ಆತ ಹ್ಯಾಕರ್​ ಎಂಬ ವಿಚಾರ ರಾಬಿನ್​​ಗೆ ಗೊತ್ತಾಗಿತ್ತು. ಅಲ್ಲದೇ ಶ್ರೀಕಿ ತನ್ನ ಸ್ನೇಹಿತರಾದ ಅಕೀಬ್, ಸೋನು, ಸೌಮ್ಯ ಮತ್ತು ಮಹಮ್ಮದ್ ನಲಪಾಡ್, ನಫಿ ಯನ್ನ ನನಗೆ ಪರಿಚಯ ಮಾಡಿಕೊಟ್ಟಿದ್ದ. ಈ ವೇಳೆ ತಾವು ಹ್ಯಾಕ್ ಮಾಡಿದ್ದ ಬಿಟ್ ಕಾಯಿನ್ ಮಾರಾಟಕ್ಕೆ ಹೇಳಿದ್ರು, ಶ್ರಿಕೃಷ್ಣ ವಿಕ್ಕರ್ ಮತ್ತು ಮೆಸೆಂಜರ್ ಮೂಲಕ ನನ್ನ ಜೊತೆ ಚಾಟಿಂಗ್ ಮಾಡುತ್ತಿದ್ದ ಎಂದು ರಾಬಿನ್​ ತಿಳಿಸಿದ್ದನಂತೆ.

ಪ್ರೈವೇಟ್​ ಜೆಟ್​​ನಲ್ಲಿ ನಫಿ ಮತ್ತು ನಲ್​ಪಾಡ್​​

ನಲಪಾಡ್​​ ಗ್ಯಾಂಗ್​​ನಿಂದ ಶ್ರೀಕಿ ದೂರ ಆಗಿದ್ದೇಕೆ..?
ನಲಪ್ಪಾಡ್ ಜೊತೆ ಇದ್ದಿದ್ದಕ್ಕೆ ನನ್ನ ಮೇಲೆ ಕೇಸ್ ಮಾಡಿದ್ದಾರೆ ಅಂತ ರಾಬಿನ್ ಜೊತೆ ಶ್ರೀಕಿ @ ಶ್ರೀ ಕೃಷ್ಣ ಹೇಳಿಕೊಂಡಿದ್ದನಂತೆ. ಜೊತೆಗೆ ತನ್ನ ಖರ್ಚು ನೋಡಿಕೊಳ್ಳಲು ಹೇಳಿ ಅದಕ್ಕಾಗಿ ಬಿಟ್ ಕಾಯಿನ್ ನೀಡುವುದಾಗಿ ಹೇಳಿದ್ದನಂತೆ. ಆ ಬಳಿಕ ಬಾಡಿಗೆ ಕಾರ್ ಮಾಡಿ ಬೆಂಗಳೂರಿನಿಂದ ತನ್ನನ್ನು ಮುಂಬೈಗೆ ಕಳುಹಿಸಿದ್ದ. ಇತ್ತ ಶ್ರೀಕಿ ಹಾಗೂ ಆತನ ಸ್ನೇಹಿತರು ಮುಂಬೈನಿಂದ ಮನಾಲಿಗೆ ಹೋಗಿದ್ದರಂತೆ. ಅಲ್ಲಿ ಕೆಲ ಸಮಯ ಇದ್ದ ಬಳಿಕ ದೆಹಲಿಯ ಶಾಂಗ್ರಿಲಾ ಹೊಟೇಲ್ ಗೆ ಹೋಗಿ ಸೇರಿದ್ದರಂತೆ. ಇಲ್ಲಿಯೇ ಉಮರ್ ನಲಪಾಡ್ ಶ್ರೀಕಿ ಇದ್ದ ಜಾಗಕ್ಕೆ ಹೋಗಿ ಭೇಟಿ ಮಾಡಿದ್ದನಂತೆ. ಆದರೆ ನಲಪಾಡ್ ಗಲಾಟೆ ಕೇಸ್ ಆದ ಬಳಿಕ ನಲಪಾಡ್ ಗ್ಯಾಂಗ್ ನಿಂದ ದೂರವಾಗಿದ್ದನಂತೆ. 2018ರಲ್ಲಿ ಫರ್ಜಿ ಕೆಫೆಯಲ್ಲಿ ನಲಪಾಡ್​​ ಗಲಾಟೆ ಮಾಡಿಕೊಂಡು ಬಹುದೊಡ್ಡ ಕೇಸ್​ ಆಗಿತ್ತು.

ಎಕ್ಸ್​​ಕ್ಲೂಸಿವ್ ವರದಿ: ವಿಷ್ಣುಪ್ರಸಾದ್, ಕ್ರೈಂ ಬ್ಯೂರೋ

News First Live Kannada


Leave a Reply

Your email address will not be published.