ನಳೀನ್ ಕುಮಾರ್ ಕಟೀಲ್​ಗೆ ಮಾತಲ್ಲೇ ಬೆಂಡೆತ್ತಿದ ಪಕ್ಷೇತರ ಅಭ್ಯರ್ಥಿ.. ನಡೆದಿದ್ದೇನು..?

ಹಾವೇರಿ: ಇಂದು ಬಿಜೆಪಿ ಅಭ್ಯರ್ಥಿ ನಾಮಪತ್ರ ಸಲ್ಲಿಕೆ ಹಿನ್ನಲೆ ಹಾನಗಲ್​ನಲ್ಲಿ ನಾಮಿನೇಷನ್ ಮಾಡುವ ಸ್ಥಳದಿಂದ ನೂರು ಮೀಟರ್ ಪ್ರದೇಶದಲ್ಲಿ ನಿಷೇಧ ಇದ್ದರೂ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹಾಗೂ ಅಭ್ಯರ್ಥಿ ಕಾರುಗಳು ಪ್ರವೇಶ ಮಾಡಿವೆ ಎನ್ನಲಾಗಿದೆ. ಈ ಮೂಲಕ ಸರ್ಕಾರಿ ನಿಯಮ ಉಲ್ಲಂಘನೆ ಮಾಡಿದ್ದಾರೆಂದು ಸ್ವತಂತ್ರ ಅಭ್ಯರ್ಥಿ ನಳೀನ್ ಕುಮಾರ್ ಕಟೀಲ್ ಹಾಗೂ ಅವರ ಬೆಂಬಲಿಗರಿಗೆ ಮಾತಿನಲ್ಲೇ ಬೆಂಡೆತ್ತಿದ ಘಟನೆ ನಡೆದಿದೆ.

ನನ್ನನ್ನು ಒಳಗೆ ಬಿಡಲಿಲ್ಲ.. ಕಾರನ್ನೂ ಬಿಡಲಿಲ್ಲ.. ನೂರು ಮೀಟರ್ ಹೊರಗೆ ನಿಲ್ಲಿಸಿದ್ದಾರೆ. ಎಂದು ನಳೀನ್ ಕುಮಾರ್ ಕಟೀಲ್ ಹಾಗೂ ಪೋಲಿಸರಿಗೆ ಪ್ರಶ್ನೆ ಹಾಕಿದ್ದಾರೆ.

ಬಸವರಾಜ್ ಹಾದಿ ಎಂಬ ಪಕ್ಷೇತರ ಅಭ್ಯರ್ಥಿ ಹೀಗೆ ತರಾಟೆಗೆ ತೆಗೆದುಕೊಂಡಿದ್ದು.. ಇವರೇನು ದೊಡ್ಡವರಾ.. ಇವರಿಗೆ ಒಂದು ಕಾನೂನು ನಮಗೆ ಒಂದು ಕಾನೂನಾ..? ಎಂದು ರಾಜ್ಯಾಧ್ಯಕ್ಷರ ಕಾರು ನಿಲ್ಲಿಸಿ ಗಲಾಟೆ ಮಾಡಿದ್ದಾರೆ. ಪಕ್ಷೇತರ ಅಭ್ಯರ್ಥಿಯ ಆಕ್ರೋಶ ಕಂಡು ಸುಮಾರು 20 ನಿಮಿಷಕ್ಕೂ ಹೆಚ್ಚು ಕಾಲ ಕಾರ್​ನಲ್ಲೇ ಸುಮ್ಮನೆ ಕುಳಿತಿದ್ದರು ಎನ್ನಲಾಗಿದೆ.

News First Live Kannada

Leave a comment

Your email address will not be published. Required fields are marked *