ನವದೆಹಲಿ: ಪಂಜಾಬ್‌ನ ಮಾಜಿ ಸಚಿವ ಮತ್ತು ಕಾಂಗ್ರೆಸ್​ ಮುಖಂಡ ನವಜೋತ್‌ ಸಿಂಗ್‌ ಸಿಧುರನ್ನು ಭಾರತೀಯ ಕಾಂಗ್ರೆಸ್​​ ವರಿಷ್ಠ ರಾಹುಲ್​​ ಗಾಂಧಿ ಭೇಟಿ ಮಾಡಲು ಕಾರಣ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಎನ್ನುತ್ತಿವೆ ಉನ್ನತ ಮೂಲಗಳು.

ಪಂಜಾಬ್‌ ಸಿಎಂ ಅಮರಿಂಧರ್‌ ಸಿಂಗ್‌ ಮತ್ತು ನವಜೋತ್‌ ಸಿಂಗ್‌ ನಡುವೆ ಭಿನ್ನಾಭಿಪ್ರಾಯ ಉಂಟಾಗಿತ್ತು. ಹೀಗಾಗಿಯೇ ನವಜೋತ್​​ ಸಿಂಗ್​​ ಸಿಧು ಬಹಿರಂಗವಾಗಿಯೇ ಪಂಜಾಬ್​​ ಕಾಂಗ್ರೆಸ್​ ಸರ್ಕಾರವನ್ನು ಟೀಕಿಸಿದ್ದರು.

ನವಜೋತ್​​ ಸಿಂಗ್​​ ಸಿಧುರ ಈ ನಡೆಯೂ ಕಾಂಗ್ರೆಸ್​ ಹೈಕಮಾಂಡ್​​ಗೆ ತಲೆನೋವಾಗಿ ಪರಿಣಮಿಸಿತ್ತು. ಈ ಸುದ್ದಿ ತೀವ್ರ ಚರ್ಚೆಗೆ ಗ್ರಾಸವಾಗುತ್ತಿದ್ದಂತೆಯೇ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಸಿಧು ಜೊತೆಗೆ ಸುಧೀರ್ಘ ಚರ್ಚೆ ನಡೆಸಿದರು.

ಬಳಿಕ ಕಾಂಗ್ರೆಸ್​​ ರಾಹುಲ್​​ ಗಾಂಧಿಯವರೊಂದಿಗೆ ಮಾತಾಡಿದ ಪ್ರಿಯಾಂಕಾ ಗಾಂಧಿ ಸಿಧುರ ಭೇಟಿಗೆ ಮನವೊಲಿಸಿದರು. ಆದ್ದರಿಂದಲೇ ಬುಧವಾರ ರಾಹುಲ್‌ ಗಾಂಧಿ ತನ್ನ ನಿವಾಸದಲ್ಲಿ ಪಂಜಾಬ್‌ನ ಕಾಂಗ್ರೆಸ್‌ ಮುಖಂಡ ನವಜೋತ್‌ ಸಿಂಗ್‌ ಸಿಧು ಜೊತೆಗೆ 45 ನಿಮಿಷಗಳ ಚರ್ಚಿಸಿದರು ಎನ್ನಲಾಗುತ್ತಿದೆ.

The post ನವಜೋತ್‌ ಸಿಂಗ್‌ ಸಿಧು ಭೇಟಿಗೆ ರಾಹುಲ್​​ ಗಾಂಧಿಯನ್ನು ಒಪ್ಪಿಸಿದ್ದು ಪ್ರಿಯಾಂಕ ಗಾಂಧಿ appeared first on News First Kannada.

Source: newsfirstlive.com

Source link