ನವರಾತ್ರಿ: 135 ವರ್ಷ ಹಳೆಯ ದೇವಾಲಯದಲ್ಲಿ ವಿಗ್ರಹ, ಗೋಡೆ, ನೆಲದ ಮೇಲೆ 8 ಕೋಟಿ ಕರೆನ್ಸಿ ನೋಟು, ಚಿನ್ನದಿಂದ ಅಲಂಕಾರ! | 135 year old Vasavi Kanyaka temple in Visakhapatnam Decorated with 8 crore rupees Currency Notes and Gold ornaments for Navratri


ಕುತೂಹಲದ ಪ್ರಶ್ನೆಯೆಂದರೆ ಒಂಬತ್ತು ದಿನಗಳ ಹಬ್ಬ ಆಚರಣೆ ಮುಗಿದ ನಂತರ ಈ ನಗ ನಾಣ್ಯ ಆಭರಣ ಏನಾಗುತ್ತದೆ? “ಇದು ಸಾರ್ವಜನಿಕ ಕೊಡುಗೆಯಾಗಿದೆ ಮತ್ತು ಪೂಜೆ ಮುಗಿದ ನಂತರ ಹಿಂದಿರುಗಿಸಲಾಗುತ್ತದೆ. ಆದರೆ ಇದು ದೇವಾಲಯದ ಟ್ರಸ್ಟ್‌ಗೆ ಹೋಗುವುದಿಲ್ಲ ಎಂದು ದೇವಾಲಯದ ಸಮಿತಿ ತಿಳಿಸಿರುವುದಾಗಿ ANI ಸುದ್ದಿಸಂಸ್ಥೆ ವರದಿ ಮಾಡಿದೆ.

ನವರಾತ್ರಿ: 135 ವರ್ಷ ಹಳೆಯ ದೇವಾಲಯದಲ್ಲಿ ವಿಗ್ರಹ, ಗೋಡೆ, ನೆಲದ ಮೇಲೆ  8 ಕೋಟಿ ಕರೆನ್ಸಿ ನೋಟು, ಚಿನ್ನದಿಂದ ಅಲಂಕಾರ!

135 ವರ್ಷ ಹಳೆಯ ದೇವಾಲಯದಲ್ಲಿ ವಿಗ್ರಹ, ಗೋಡೆ, ನೆಲದ ಮೇಲೆ 8 ಕೋಟಿ ಕರೆನ್ಸಿ ನೋಟು, ಚಿನ್ನದಿಂದ ಅಲಂಕಾರ!

ಆಂಧ್ರ ಪ್ರದೇಶದ ವಿಶಾಖಪಟ್ಟಣದಲ್ಲಿರುವ 135 ವರ್ಷಗಳಷ್ಟು ಹಳೆಯದಾದ ದೇವಾಲಯದಲ್ಲಿ, ಆಡಳಿತ ಸಮಿತಿಯು ನವರಾತ್ರಿ ಹಬ್ಬದ ಋತುವಿನ ಭಕ್ತರು/ ಸಾರ್ವಜನಿಕರು ನೀಡಿರುವ ಹಣ- ಆಭರಣ ಬಳಸಿ (ಗಮನಿಸಿ- ಇದು ಹುಂಡಿಗೆ ಹಾಕಿರುವ ಕಾಣಿಕೆಯಲ್ಲ) ಅದ್ದೂರಿಯಾಗಿ ದೇವಿಯ ಅಲಂಕಾರ ಮಾಡಿದ್ದಾರೆ.

ವಿಶಾಖಪಟ್ಟಣಂ: ಹಿಂದೂ ದೇವಾಲಯಗಳಲ್ಲಿ ವಿಗ್ರಹಗಳ ಮೇಲೆ ಚಿನ್ನದ ಆಭರಣಗಳನ್ನು ಅಲಂಕರಿಸುವುದು ಹೊಸದೇನೂ ಅಲ್ಲ. ಆದರೆ ಮೌಲ್ಯಯುತ ಕರೆನ್ಸಿ ನೋಟುಗಳನ್ನೂ ದೇಗುಲದ ಗೋಡೆಗಳ ಮೇಲೆ ಮತ್ತು ನೆಲದ ಮೇಲೆ ಅಂಟಿಸುವುದು ವಾಡಿಕೆಯಲ್ಲ. ಆದಾಗ್ಯೂ ಆಂಧ್ರ ಪ್ರದೇಶದ ವಿಶಾಖಪಟ್ಟಣದಲ್ಲಿರುವ 135 ವರ್ಷಗಳಷ್ಟು ಹಳೆಯದಾದ ದೇವಾಲಯದಲ್ಲಿ, ಆಡಳಿತ ಸಮಿತಿಯು ನವರಾತ್ರಿ ಹಬ್ಬದ ಋತುವಿನ ಭಕ್ತರು ನೀಡಿರುವ ಕೊಡುಗೆಗಳನ್ನು ಬಳಸಿ ವಾಸವಿ ಕನ್ನಿಕಾ ಪರಮೇಶ್ವರಿ ದೇವಿಯನ್ನು ಅದ್ದೂರಿಯಾಗಿ ಅಲಂಕಾರ ಮಾಡಿದ್ದಾರೆ. ನೋಟುಗಳಿಂದ ಮಾಡಿದ ಬಂಟಿಂಗ್ಸ್‌ಗಳನ್ನೂ ಸಹ ಮರಗಳ ಮೇಲೆ ಮತ್ತು ಚಾವಣಿಯ ಮೇಲೆ ನೇತುಹಾಕಲಾಗಿದೆ.

ನವರಾತ್ರಿ ಮತ್ತು ದಸರಾ ಹಬ್ಬದ ಋತುವಿನಲ್ಲಿ ಕಂಡುಬಂದಿರುವ ಈ ಅಲಂಕಾರವು 8 ಕೋಟಿ ರೂಪಾಯಿ ಮೌಲ್ಯದ್ದಾಗಿದೆ! ಇತ್ತೀಚಿನ ವರ್ಷಗಳಲ್ಲಿ ದೇವಾಲಯಗಳಲ್ಲಿ ಈ ರೀತಿಯ ಅಲಂಕಾರಗಳು ಹೆಚ್ಚಾಗಿ ಕಂಡುಬರುತ್ತಿವೆ. ಭಕ್ತರು ತಮ್ಮ ಶಕ್ತ್ಯಾನುಸಾರ ಕರೆನ್ಸಿ ನೋಟುಗಳ ಅಲಂಕಾರ ಮಾಡುತ್ತಿದ್ದಾರೆ.

ಕುತೂಹಲದ ಪ್ರಶ್ನೆಯೆಂದರೆ ಒಂಬತ್ತು ದಿನಗಳ ಹಬ್ಬ ಆಚರಣೆ ಮುಗಿದ ನಂತರ ಈ ನಗ ನಾಣ್ಯ ಆಭರಣ ಏನಾಗುತ್ತದೆ? “ಇದು ಸಾರ್ವಜನಿಕ ಕೊಡುಗೆಯಾಗಿದೆ ಮತ್ತು ಪೂಜೆ ಮುಗಿದ ನಂತರ ಹಿಂದಿರುಗಿಸಲಾಗುತ್ತದೆ. ಆದರೆ ಇದು ದೇವಾಲಯದ ಟ್ರಸ್ಟ್‌ಗೆ ಹೋಗುವುದಿಲ್ಲ ಎಂದು ದೇವಾಲಯದ ಸಮಿತಿ ತಿಳಿಸಿರುವುದಾಗಿ ANI ಸುದ್ದಿಸಂಸ್ಥೆ ವರದಿ ಮಾಡಿದೆ. ಈ ದೇವಾಲಯವು ಪಶ್ಚಿಮ ಗೋದಾವರಿ ಜಿಲ್ಲೆಯ ಪೆನುಗೊಂಡ ಪಟ್ಟಣದಲ್ಲಿದೆ. ಇದರ ಅಧಿ ದೇವತೆ ವಾಸವಿ ಕನ್ನಿಕಾ ಪರಮೇಶ್ವರಿ. ಅಂದಹಾಗೆ ದೇವಾಲಯವು ಈ ಹಿಂದೆ ಸುಮಾರು 5 ಕೋಟಿ ಮೌಲ್ಯದ ಕರೆನ್ಸಿ ಅಲಂಕಾರವನ್ನು ಕಂಡಿದೆ.

ತಾಜಾ ಸುದ್ದಿ

TV9 Kannada


Leave a Reply

Your email address will not be published.