ನಾಯಿ-ಬೆಕ್ಕು, ಬೆಕ್ಕು-ನಾಯಿ, ಕೋತಿ-ನಾಯಿ, ಬೆಕ್ಕು-ಕೋತಿ ಹೀಗೆ ಸಾಕು ಪ್ರಾಣಿಗಳು ಅನೋನ್ಯದಿಂದ ಇರೋದು ನಾವು ಕಂಡಿದ್ದೇವೆ. ಆದರೆ, ಒಂದು ಪ್ರಭೇದದ ಪಕ್ಷಿ ಇನ್ನೊಂದು ಪ್ರಭೇದದ ಮರಿಗಳನ್ನು ತನ್ನ ಮರಿಗಳಂತೆಯೇ ಪೋಷಣೆ ಮಾಡುವುದು ಮಾತ್ರ ತೀರ ವಿರಳ.
ಆಗ್ಗಾಗ ಕಾಗೆ ಮಾತ್ರ ಕೋಗಿಲೆ ಮೊಟ್ಟೆಗಳಿಗೆ ಕಾವು ನೀಡಿ ಮರಿ ಮಾಡುವುದು. ಅವು ತನ್ನ ಮರಿಗಳಲ್ಲ ಎಂದು ಗೊತ್ತಾದ ಮೇಲೆ ಗೂಡಿನಿಂದ ಹೊರಹಾಕುವುದು ಕಂಡಿದ್ದೇವೆ. ಈಗ ಇಲ್ಲೊಂದು ಕೋಳಿ ನವಿಲು ಮೊಟ್ಟೆಗಳಿಗೆ ಕಾವು ನೀಡಿ ಮರಿ ಮಾಡಿದ್ದಲ್ಲದೇ ತನ್ನದೇ ಮರಿಗಳಂತೆ ಪೋಷಣೆ ಮಾಡುತ್ತಿದೆ.
ಹೌದು, ಈ ಘಟನೆ ನಡೆದಿದ್ದು ಸ್ಪೇನ್ನಲ್ಲಿ. ಈಗ ನವಿಲಿ ಮರಿಗಳಿಗೆ ಕೋಳಿ ತಾಯಿಯಂತೆ ಪೋಷಣೆ ಮಾಡಿದ ವಿಡಿಯೋ ಭಾರೀ ವೈರಲ್ ಆಗಿದೆ. ಈಗ ನವಿಲು ಮರಿಗಳು ಯಾವುದೇ ಆತಂಕವಿಲ್ಲದೇ ಕೋಳಿಯನ್ನೇ ತಮ್ಮ ತಾಯಿ ಎಂದು ಭಾವಿಸಿ ಬೆಳೆಯುತ್ತಿವೆ.
ಇದನ್ನೂ ಓದಿ: ವಾರ್ನರ್ನ ಕಿಚಾಯಿಸಬೇಡಿ.. ಅದು ಕರಡಿಗೆ ಚುಚ್ಚಿದಂತೆ.. ಎಚ್ಚರಿಕೆ ಕೊಟ್ಟ ಫಿಂಚ್
The post ನವಿಲು ಮರಿಗಳಿಗೆ ತಾಯಿಯಾದ ಕೋಳಿ; ವೈರಲ್ ಆಯ್ತು ವಿಡಿಯೋ appeared first on News First Kannada.