ನವೆಂಬರ್​ನಲ್ಲಿ 3.46 ಲಕ್ಷ ಹೆಕ್ಟೇರ್​ನಲ್ಲಿದ್ದ ಬೆಳೆ ಹಾನಿ; ಕೃಷಿ ಸಚಿವ ಬಿಸಿ ಪಾಟೀಲ್ | Crop damage in November last year was 3.46 lakh hectares Agriculture Minister BC Patil said


ನವೆಂಬರ್​ನಲ್ಲಿ 3.46 ಲಕ್ಷ ಹೆಕ್ಟೇರ್​ನಲ್ಲಿದ್ದ ಬೆಳೆ ಹಾನಿ; ಕೃಷಿ ಸಚಿವ ಬಿಸಿ ಪಾಟೀಲ್

ಬಿಸಿ ಪಾಟೀಲ್

ಬೆಂಗಳೂರು: ರಾಜ್ಯದಲ್ಲಿ ಸುರಿದ ಅಕಾಲಿಕ ಮಳೆಯಿಂದಾದ ನಷ್ಟ ಅಷ್ಟಿಷ್ಟಲ್ಲ. ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ ಅನ್ನದಾತನ ಪರಿಸ್ಥಿತಿ. ಕಂಗಾಲಾಗಿರುವ ರೈತರು ಪರಹಾರ ನೀಡಬೇಕೆಂದು ಆಗ್ರಹಿಸುತ್ತಿದ್ದಾರೆ. ಸದ್ಯ ಬೆಂಗಳೂರಿನಲ್ಲಿ ಈ ಬಗ್ಗೆ ಮಾತನಾಡಿದ ಕೃಷಿ ಸಚಿವ ಬಿಸಿ ಪಾಟೀಲ್ (BC Patil), ಅಕಾಲಿಕ ಮಳೆಯಿಂದ ರೈತರ ಬೆಳೆ ಹಾಳಾಗಿದೆ. ನವೆಂಬರ್ನಲ್ಲಿ 3.46 ಲಕ್ಷ ಲಕ್ಷ ಹೆಕ್ಟೇರ್​ನಲ್ಲಿದ್ದ ಬೆಳೆ ಹಾನಿಯಾಗಿದೆ. ಜುಲೈನಿಂದ ಈವರೆಗೆ ಸುಮಾರು 10.76 ಲಕ್ಷ ಹೆಕ್ಟೇರ್ ಬೆಳೆ ಹಾನಿಯಾಗಿದೆ. ಶೀಘ್ರವೇ ಬೆಳೆ ಹಾನಿ ಬಗ್ಗೆ ವರದಿ ತಯಾರಿಸಲಾಗುವುದು. ವರದಿಯನ್ನು ಕೇಂದ್ರಕ್ಕೆ ಕಳಿಸಿ ಪರಿಹಾರಕ್ಕೆ ಮನವಿ ಮಾಡಲಾಗುತ್ತದೆ ಅಂತ ತಿಳಿಸಿದ್ದಾರೆ.

ನಾಳೆ (ನ.25) ಶಿಗ್ಗಾಂವ್, ಸವಣೂರಿಗೆ ಭೇಟಿ ನೀಡುತ್ತೇವೆ. ಈಗಾಗಲೇ ಹಾವೇರಿ ಜಿಲ್ಲೆಗೆ ಭೇಟಿ ಮಾಡಿದ್ದೇನೆ. ಉಳಿದ ಜಿಲ್ಲೆಗಳಿಗೆ ಭೇಟಿ ಮಾಡುತ್ತೇನೆ. ವರದಿ ಬಂದ ನಂತರ ಒಟ್ಟು ಎಷ್ಟು ಹಾನಿಯಾಗಿದೆ ಅಂತ ಹೇಳಬಹುದು ಎಂದು ತಿಳಿಸಿದ ಕೃಷಿ ಸಚಿವ ಬಿ.ಸಿ.ಪಾಟೀಲ್, ಸಚಿವರು ಭೇಟಿ ನೀಡುತ್ತಿಲ್ಲವೆಂಬ ಪ್ರತಿಪಕ್ಷಗಳ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಪ್ರತಿಪಕ್ಷ ಆರೋಪ ಮಾಡುವುದಕ್ಕೆ ಇರುವುದು. ಅದನ್ನು ಬಿಟ್ಟು ಬೇರೇನಿದೆ. ನಾವು ಅದಕ್ಕೆಲ್ಲ ತಲೆಕೆಡಿಸಿಕೊಳ್ಳಲ್ಲ ಎಂದು ತಿಳಿಸಿದರು.

ಸಿಎಂ ಈಗಾಗಲೇ ಕೆಲವು ಕಡೆ ಭೇಟಿ ಮಾಡಿದ್ದಾರೆ. ನಾವು ಭೇಟಿ ಮಾಡುತ್ತೇವೆ. ಪ್ರತಿಪಕ್ಷಗಳ ಹೇಳಿಕೆಗೆ ತಲೆಕೆಡಿಸಿಕೊಳ್ಳಲ್ಲ. ಜನಸ್ವರಾಜ್ ಯಾತ್ರೆ ಹಳೆಯದಾಯ್ತು. ಅದಕ್ಕಾಗಿ ನಾವು ಕೆಲಸ ಬಿಟ್ಟು ಪ್ರಚಾರ ಮಾಡುತ್ತಿಲ್ಲ ಅಂತ ತಿರುಗೇಟು ನೀಡಿದ್ದಾರೆ.

ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಬಾಕಿ ವಿಚಾರದ ಬಗ್ಗೆ ಮಾತನಾಡಿದ ಸಚಿವರು, ಪ್ರಧಾನಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಮಳೆಯಿಂದ ಬೆಳೆಹಾನಿಯಾಗಿದೆ. ಇದಕ್ಕೆ ನಾವು ಸಹಕರಿಸುತ್ತೇವೆ ಎಂದಿದ್ದಾರೆ. ಶೀಘ್ರದಲ್ಲೇ ನಾವು ವರದಿ ಕಳಿಸುತ್ತೇವೆ. ಕೇಂದ್ರದಿಂದ ಏನು ಪರಿಹಾರ ಬರಬೇಕು ಬರುತ್ತದೆ ಅಂತ ವಿಶ್ವಾಸ ವ್ಯಕ್ತಪಡಿಸಿದರು.

ಬೆಳಗಾವಿಯಲ್ಲಿ ಲಖನ್ ಜಾರಕಿಹೊಳಿ ಸ್ಪರ್ಧೆ ವಿಚಾರದ ಕುರಿತು ಹೇಳಿಕೆ ನೀಡಿರುವ ಬಿಸಿ ಪಾಟೀಲ್, ಬಿಜೆಪಿ ಎಲ್ಲ ಅಳೆದು ತೂಗಿ ಅಭ್ಯರ್ಥಿ ಹಾಕಿರುತ್ತೇವೆ. ಪಕ್ಷ ಬಹಳ ಬಲಿಷ್ಠವಾಗಿದೆ. ಗ್ರಾಮ ಪಂಚಾಯತಿ ಬಹುತೇಕ ನಮ್ಮವೇ ಇವೆ. ಹೀಗಾಗಿ ಅಲ್ಲಿ ನಮಗೇನು ಸಮಸ್ಯೆಯಾಗಲ್ಲ ಅಂತ ತಿಳಿಸಿದರು.

ಇದನ್ನೂ ಓದಿ

ಹುಡುಗಿಯ ಬ್ರಾ ಸೈಜ್​, ಸೊಂಟದ ಅಳತೆ, ವಯಸ್ಸು ಇಷ್ಟೇ ಇರಬೇಕು! ವಧುವಿಗಾಗಿ ಹುಡುಕುತ್ತಿರುವ ಹುಡುಗನ ಬೇಡಿಕೆಯ ಮೆಟ್ರಿಮೊನಿಯಲ್ ಜಾಹಿರಾತು

Aadhaar Authentication: ಆಧಾರ್​ ಸಾರ್ವತ್ರಿಕ ದೃಢೀಕರಣಕ್ಕೆ ಸ್ಮಾರ್ಟ್​ಫೋನ್ ಬಳಕೆ ಬಗ್ಗೆ ಸುಳಿವು

TV9 Kannada


Leave a Reply

Your email address will not be published. Required fields are marked *