ನವೆಂಬರ್ 17ರಿಂದ 19ರ ವರೆಗೆ ಬೆಂಗಳೂರು ತಾಂತ್ರಿಕ ಸಭೆ: ಕಾರ್ಯಕ್ರಮದ ವಿವರ ಇಲ್ಲಿದೆ | Dr CN Ashwath Narayan on IT BT Technology Meet in Bengaluru


ನವೆಂಬರ್ 17ರಿಂದ 19ರ ವರೆಗೆ ಬೆಂಗಳೂರು ತಾಂತ್ರಿಕ ಸಭೆ: ಕಾರ್ಯಕ್ರಮದ ವಿವರ ಇಲ್ಲಿದೆ

ಐಟಿ, ಬಿಟಿ ಸಚಿವ ಆಶ್ವಥ್ ನಾರಾಯಣ (ಸಂಗ್ರಹ ಚಿತ್ರ)

ಬೆಂಗಳೂರು: ರಾಜ್ಯ ಸರ್ಕಾರದ ಎಲೆಕ್ಟ್ರಾನಿಕ್ಸ್, ಐಟಿ, ಬಿಟಿ ಮತ್ತು ಎಸ್ ಅಂಡ್ ಟಿ ಇಲಾಖೆ ಹಾಗೂ ಸಾಫ್ಟ್‌ವೇರ್ ಟೆಕ್ನಾಲಜಿ ಪಾರ್ಕ್ಸ್ ಆಫ್ ಇಂಡಿಯಾ ಸಂಯುಕ್ತ ಆಶ್ರಯದಲ್ಲಿ‌ ನಗರದಲ್ಲಿ ನವೆಂವರ್ 17 ರಿಂದ 19 ರ ವರೆಗೆ ಬೆಂಗಳೂರು ತಾಂತ್ರಿಕ‌ ಸಭೆಯನ್ನ ಆಯೋಜಿಸಲಾಗಿದೆ. ಈ ಕಾರ್ಯಕ್ರಮದ ಕುರಿತು ಖಾಸಗಿ ಹೋಟೆಲ್​ನಲ್ಲಿ ಇಂದು (ನವೆಂಬರ್ 9) ನಡೆದ ಪತ್ರಿಕಾಗೋಷ್ಠಿಯಲ್ಲಿ ಐಟಿ, ಬಿಟಿ ಸಚಿವ ಆಶ್ವಥ್ ನಾರಾಯಣ, ಇನ್ಪೋಸಿಸ್ ಸಹ ಸಂಸ್ಥಾಪಕ ಕ್ರಿಸ್ ಗೋಪಾಲ ಕೃಷ್ಣ, ಬಯೋಪಾಲ್ ಸಂಸ್ಥಾಪಕಿ ಕಿರಣ್ ಮಝುಂದಾರ್ ಷಾ, ಬಿಗ್ ಬಾಸ್ಕೆಟ್ ಹೂಡಿಕೆದಾರ ಗಣೇಶ್ ಕೃಷ್ನನ್, ಐಟಿ ಬಿಟಿ ಇಲಾಖೆ ಕಾರ್ಯದರ್ಶಿ ಇವಿ ರಾಮಣ್ ರೆಡ್ಡಿ ಭಾಗಿ ಆಗಿದ್ದಾರೆ.

ಬೆಂಗಳೂರು ಟೆಕ್ ಸಮಾವೇಶ ಹೈಬ್ರಿಡ್ ಮಾದರಿಯಲ್ಲಿ ನಡೆಯಲಿದ್ದು, ನಗರದ ಖಾಸಗಿ ಹೋಟೆಲ್ ನಲ್ಲಿ ಆಯೋಜಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಅವರನ್ನು ಆಹ್ವಾನಿಸಲಾಗಿದೆ. ಅವರೇ ಕಾರ್ಯಕ್ರಮವನ್ನು ಉದ್ಗಾಟಿಸಲಿದ್ದಾರೆ ಎಂದು ತಿಳಿಸಲಾಗಿದೆ. ರಾಜ್ಯಪಾಲ ಥಾವರ್ ಚಂದ್ ಗೆಹಲೋತ್, ಮುಖ್ಯಮಂತ್ರಿ ಬಸವರಾಜ್ ಬೊಮ್ಮಯಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಈ ಕಾರ್ಯಕ್ರಮದಲ್ಲಿ 30 ಕ್ಕೂ ಹೆಚ್ಚು ದೇಶಗಳು ಭಾಗವಹಿಸುವ ಸಾಧ್ಯತೆ ಇದ್ದು, ಕೇವಲ ಟೆಕ್ ಸಂಸ್ಥೆಗಳಲ್ಲದೇ, ಸ್ಟಾರ್ಟಪ್ ಹಾಗೂ ಬಯೋ ಟೆಕ್ನಾಲಜಿ ಕಂಪನಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿವೆ. ಬಿಟಿಎಸ್ 2021 ರಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಮಖ್ಯಸ್ಥೆ ಸೌಮ್ಯ ಸ್ವಾಮಿನಾಥಾನ್ ಮಾತನಾಡಲಿದ್ದಾರೆ ಎಂದು ಮಾಹಿತಿ ನೀಡಲಾಗಿದೆ.

ಭಾರತ ಅಮೆರಿಕಾ ರಾಷ್ಟ್ರಗಳ ಪ್ರತ್ಯೇಕ ಸಮಾವೇಶ ನಡೆಯಲಿದ್ದು, ಐಟಿ, ಬಿಟಿ ಹಾಗೂ ಸ್ಟಾರ್ಟಪ್​ಗಳ ಕುರಿತು ಪಶ್ಚಿಮ, ಉತ್ತರ, ಮಧ್ಯ ಅಮೆರಿಕ ಪ್ರಾಂತ್ಯ- ಭಾರತದ ಸಮನ್ವಯತೆ ಹಾಗೂ ನೂತನ ಅವಕಾಶಗಳ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ಹೇಳಲಾಗಿದೆ. ನೊಬೆಲ್ ಪ್ರಶಸ್ತಿ ವಿಜೇತ ಡಾ. ವೆಂಕಟ್ ರಾಮನ್, ರಾಮಾಕೃಷ್ಣನ್, ಮೈಕ್ರೋ ಸಾಫ್ಟ್ ಅಧ್ಯಕ್ಷ ಅನಂತ್ ಮಹೇಶ್ವರಿ, ಆ್ಯಪಲ್ ಸಂಸ್ಥೆಯ ಉಪಾಧ್ಯಕ್ಷೆ ಪ್ರಿಯ ಬಾಲಾಸುಬ್ರಮಣ್ಯಂ, ಭಾರತದ ಲೇಖಕ ಚೇತನ್ ಭಗತ್ ಸೇರಿದಂತೆ ಹಲವು ಗಣ್ಯರು ಸಮಾವೇಶದಲ್ಲಿ ಭಾಗಿ‌ ಆಗಲಿದ್ದಾರೆ.

ಇದನ್ನೂ ಓದಿ: ವರ್ಕ್ ಫ್ರಮ್ ಹೋಮ್ ಪದ್ಧತಿಗೆ ಮಾನ್ಯತೆ ನೀಡುವಂತೆ ಮನವಿ ಮಾಡಲಾಗಿದೆ: ಸಚಿವ ಅಶ್ವತ್ಥ್ ನಾರಾಯಣ ಮಾಹಿತಿ

ಇದನ್ನೂ ಓದಿ: ಪ್ರಸಕ್ತ ವರ್ಷ ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳ ಶುಲ್ಕ ಹೆಚ್ಚಳವಿಲ್ಲ; ಸಚಿವ ಡಾ.ಅಶ್ವತ್ಥ್ ನಾರಾಯಣ ಸ್ಪಷ್ಟನೆ

TV9 Kannada


Leave a Reply

Your email address will not be published. Required fields are marked *