ನವೆಂಬರ್ 5 ರಂದು ದೆಹಲಿಯಲ್ಲಿ ಗಾಳಿಯ ಗುಣಮಟ್ಟ ಮತ್ತಷ್ಟು ಹದಗೆಡುವ ಸಾಧ್ಯತೆ | Air quality in Delhi is set to deteriorate to severe on Nov 5 Air Quality Early Warning System


ನವೆಂಬರ್ 5 ರಂದು ದೆಹಲಿಯಲ್ಲಿ ಗಾಳಿಯ ಗುಣಮಟ್ಟ ಮತ್ತಷ್ಟು ಹದಗೆಡುವ ಸಾಧ್ಯತೆ

ದೆಹಲಿಯಲ್ಲಿ ಹದಗೆಟ್ಟ ಗಾಳಿ

ದೆಹಲಿ: ದೆಹಲಿಯಲ್ಲಿನ ಗಾಳಿಯ ಗುಣಮಟ್ಟವು ಹದಗೆಟ್ಟಿದ್ದು ಮತ್ತು ಗುರುವಾರದಂದು ‘ಅತ್ಯಂತ ಕಳಪೆ’ ಯಾಗಲಿದೆ ಎಂದು ದೆಹಲಿ ಏರ್ ಕ್ವಾಲಿಟಿ ಅರ್ಲಿ ವಾರ್ನಿಂಗ್ ಸಿಸ್ಟಮ್ (Air Quality Early Warning System) ಹೊರಡಿಸಿದ ಪ್ರಕಟಣೆ ಹೇಳಿದೆ. ನವೆಂಬರ್ 5 ರಂದು, ಗಾಳಿಯ ಗುಣಮಟ್ಟವು ‘ಅತ್ಯಂತ ಕಳಪೆ’ ವಿಭಾಗದಲ್ಲೇ ಇರಲಿದ್ದು ದೀಪಾವಳಿ ದಿನದಂದು ಪಟಾಕಿ ಹೊಡೆದರೆ ಅದು ಮತ್ತಷ್ಟು ಹದಗೆಡಬಹುದು ಎಂದು ಮುನ್ಸೂಚನೆ ತಿಳಿಸಿದೆ. ಎಕ್ಯುಐ(AQI) ಕಳೆದ ಎರಡು ದಿನಗಳಿಂದ ‘ಅತ್ಯಂತ ಕಳಪೆ’ ವರ್ಗದ ಕೆಳಮಟ್ಟದಲ್ಲಿಯೇ ಉಳಿದಿದೆ. 301 ರಿಂದ 400 ರವರೆಗಿನ AQI ಅನ್ನು ‘ಅತ್ಯಂತ ಕಳಪೆ’ ಎಂದು ಪರಿಗಣಿಸಲಾಗುತ್ತದೆ.

ಗುರುವಾರದ ಗಾಳಿಯ ದಿಕ್ಕು ಬೇರೆ ಬೇರೆ ದಿಕ್ಕುಗಳಿಂದ ಆಗಿರಬಹುದು, ಆದರೆ ಶುಕ್ರವಾರದ ದಿಕ್ಕು ದೆಹಲಿಯ ವಾಯುವ್ಯದಿಂದ ಆಗಿರಬಹುದು ಮತ್ತು ಸುಡುವ ಬೆಳೆ ತ್ಯಾಜ್ಯಗಳ ಮಾಲಿನ್ಯದಿಂದಾಗಿ ಇದು ನಗರದಲ್ಲಿ ಪಿಎಂ 2.5 ಮಟ್ಟಕ್ಕೆ ಹೆಚ್ಚಿಸಬಹುದು. ಕಡಿಮೆ ಗಾಳಿಯ ವೇಗವು ಮಾಲಿನ್ಯಕಾರಕಗಳ ಪ್ರಸರಣವನ್ನು ಇಲ್ಲಿಯವರೆಗೆ ಕಷ್ಟಕರವಾಗಿಸಿದೆ, ಆದರೆ ನವೆಂಬರ್ 6 ರಂದು ಬಲವಾದ ಗಾಳಿಯನ್ನು ನಿರೀಕ್ಷಿಸಲಾಗಿದೆ.

ಏತನ್ಮಧ್ಯೆ, ಗುರುವಾರ ಕನಿಷ್ಠ ತಾಪಮಾನವು 15 ಡಿಗ್ರಿ ಸೆಲ್ಸಿಯಸ್‌ನಲ್ಲಿ ನಿಲ್ಲುವ ಸಾಧ್ಯತೆಯಿದೆ, ಗರಿಷ್ಠ 29 ಡಿಗ್ರಿ ಸೆಲ್ಸಿಯಸ್ ಇರುತ್ತದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ತಿಳಿಸಿದೆ. ಸ್ಪಷ್ಟವಾದ ಆಕಾಶವು ದಿನದ ಮುನ್ಸೂಚನೆಯಲ್ಲಿದೆ. ಕಳೆದ 24 ಗಂಟೆಗಳಲ್ಲಿ ದಾಖಲಾದ ಕನಿಷ್ಠ ತಾಪಮಾನವು 15 ಡಿಗ್ರಿ ಸೆಲ್ಸಿಯಸ್ ಆಗಿದ್ದರೆ, ಗರಿಷ್ಠ ತಾಪಮಾನವು 29.9 ಡಿಗ್ರಿ ಸೆಲ್ಸಿಯಸ್ ಆಗಿದೆ, ಇದು ಸಾಮಾನ್ಯಕ್ಕಿಂತ ಕಡಿಮೆಯಾಗಿದೆ.

ಇದನ್ನೂ ಓದಿ: ಸಾರ್ವಜನಿಕ ಹಣವನ್ನು ಮೊದಲು ಕಬರಿಸ್ತಾನ್​​ಗಳಿಗೆ ಖರ್ಚು ಮಾಡಲಾಗುತ್ತಿತ್ತು, ಈಗ ದೇವಸ್ಥಾನಗಳಿಗೆ ಖರ್ಚು ಮಾಡಲಾಗಿದೆ: ಯೋಗಿ ಆದಿತ್ಯನಾಥ

TV9 Kannada


Leave a Reply

Your email address will not be published. Required fields are marked *