ನವ ಉದ್ಯಮಿಗಳಿಗಾಗಿ ಟಿವಿ9 ಡೇರ್​2ಡ್ರೀಮ್​ ಅವಾರ್ಡ್ಸ್​​ ಸೀಸನ್​-3 ಆರಂಭವಾಗಿದೆ: ಪಾಲ್ಗೊಳ್ಳುವುದು ಹೇಗೆ? ವಿವರ ಇಲ್ಲಿದೆ ನೋಡಿ | Time for MSME Entrepreneurs to celebrate success with TV9 Dare2Dream Awards Season 3 Know how to participate


ನವ ಉದ್ಯಮಿಗಳಿಗಾಗಿ ಟಿವಿ9 ಡೇರ್​2ಡ್ರೀಮ್​ ಅವಾರ್ಡ್ಸ್​​ ಸೀಸನ್​-3 ಆರಂಭವಾಗಿದೆ: ಪಾಲ್ಗೊಳ್ಳುವುದು ಹೇಗೆ? ವಿವರ ಇಲ್ಲಿದೆ ನೋಡಿ

ನವೋದ್ಯಮಿಗಳಿಗಾಗಿ ಟಿವಿ9 ಡೇರ್​2ಡ್ರೀಮ್​ ಅವಾರ್ಡ್ಸ್​​ ಸೀಸನ್​-3 ಆರಂಭವಾಗಿದೆ; ಪಾಲ್ಗೊಳ್ಳುವುದು ಹೇಗೆ? ವಿವರ ಇಲ್ಲಿದೆ ನೋಡಿ

ಭಾರತದ ಸಣ್ಣ, ಅತಿಸಣ್ಣ ಮತ್ತು ಮಧ್ಯಮ ಕೈಗಾರಿಕಾ ವಲಯವು (ಎಂಎಸ್ಎಂಇ- MSMEs) ದೇಶದ ಪ್ರಗತಿ ಮತ್ತು ಉದ್ಯೋಗದ ಪ್ರಮುಖ ಪ್ರೇರಣಾ ಶಕ್ತಿಗಳಲ್ಲಿ ಒಂದಾಗಿದೆ. ಕೋವಿಡ್​ 19 ಸಾಂಕ್ರಾಮಿಕ ರೋಗದಂತಹ ಅಡೆತಡೆಗಳ ಹೊರತಾಗಿಯೂ ಎಂಎಸ್ಎಂಇ ವಲಯವು (Micro Small and Medium Enterprises -MSME sector) ಬಲಾಢ್ಯವಾಗಿ ಹೊರಹೊಮ್ಮಿದೆ. ಕಳೆದ ಕೆಲವೊಂದು ವರ್ಷಗಳಿಂದ ಎಂಎಸ್ಎಂಇ ವಲಯವು ಗಮನಾರ್ಹ ಪ್ರಗತಿಯನ್ನು ತೋರಿಸಿದೆ. ಎಂಎಸ್ಎಂಇ ವಲಯವು 2025ರ ವೇಳೆಗೆ ಭಾರತವು 5 ಟ್ರಿಲಿಯನ್ ಡಾಲರ್​ ಗಾತ್ರದ ಆರ್ಥಿಕತೆ ಸಾಧಿಸಲು ವೇಗವನ್ನು ಹೆಚ್ಚಿಸಬಹುದು. ಎಂಎಸ್ಎಂಇ ಸಚಿವಾಲಯವು (MSME Ministry) ಇತ್ತೀಚೆಗೆ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ ಭಾರತದಲ್ಲಿ ಸದ್ಯಕ್ಕೆ 6.3 ಕೋಟಿ ಸಣ್ಣ, ಅತಿಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿವೆ. ಇವೆಲ್ಲವೂ ಸೇರಿ ದೇಶದ ಜಿಡಿಪಿಗೆ ಶೇ. 29ರಷ್ಟು ಪಾಲು ನೀಡುತ್ತಿವೆ. ದೇಶದ ಒಟ್ಟಾರೆ ರಫ್ತಿನಲ್ಲಿ ಶೇ. 50ರಷ್ಟು ಪ್ರಮಾಣದ ರಫ್ತು ಎಂಎಸ್ಎಂಇ ವಲಯದಿಂದ ಆಗುತ್ತಿದೆ.

ಎಂಎಸ್ಎಂಇ ವಲಯವು ತನ್ನ ಸೇವಾ ಕ್ಷೇತ್ರ ಮತ್ತು ಉತ್ಪಾದನಾ ವಲಯದಲ್ಲಿ ಗಣನೀಯ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿ ಮಾಡುತ್ತಿದ್ದು ಭಾರತದ ಆರ್ಥಿಕತೆಯನ್ನು ಮುನ್ನಡೆಸುತ್ತಿದೆ. ಭಾರತದ ಸ್ವದೇಶಿ ಕೈಗಾರಿಕೆಗಳ ಯಶಸ್ಸನ್ನು ಸಂಭ್ರಮಿಸುವ ಮತ್ತು ಈ ದಿಸೆಯಲ್ಲಿ ಆತ್ಮನಿರ್ಭರ್​ ಭಾರತ್​​ ಯೋಜನೆಯ (AatmaNirbhar Bharat) ಅಗ್ರಗಣ್ಯರಾಗಿರುವ ನವೋದ್ಯಮಿಗಳ ಸಾಧನೆಗಳನ್ನು ಗುರುತಿಸಿ, ಪ್ರಶಂಸಿಸುವ ಸಮಯ ಇದಾಗಿದೆ.

ಈ ಸಾಧನೆಗಳ ಸಮ್ಮುಖದಲ್ಲಿ ಟಿವಿ9 ನೆಟ್​ವರ್ಕ್​ ಮತ್ತು SAP India ಒಟ್ಟುಗೂಡಿ ಡೇರ್​2ಡ್ರೀಮ್​ ಅವಾರ್ಡ್ಸ್​​ 3ನೆ ಸೀಸನ್ (TV9 Network and SAP India Dare2Dream Awards Season 3) ಕಾರ್ಯಕ್ರಮಕ್ಕೆ ಕೈಜೋಡಿಸಿವೆ. ಕೊರೊನಾ ಸಾಂಕ್ರಾಮಿಕದ ಸಂಕಷ್ಟ ಕಾಲವನ್ನು ಮೆಟ್ಟಿ ನಿಂತ ಉದ್ಯಮಿಗಳ ಯಶೋಗಾತೆಯನ್ನು ಗುರುತಿಸುವುದು ಇದರ ಧ್ಯೇಯವಾಗಿದೆ. ಈ ಕೈಗಾರಿಕೋದ್ಯಮಿ ನಾಯಕರು ಕೊರೊನಾ ಪಿಡುಗಿನ ಸಂಕಷ್ಟ ಕಾಲದಲ್ಲಿ ಹೊಸ ವಿಧಾನಗಳನ್ನು ಅಳವಡಿಸಿಕೊಂಡು, ಡಿಜಿಟಲ್​ ಟ್ರಾನ್ಸ್​​ಫಾರ್ಮೇಶನ್​ಗೆ ಮಣೆ ಹಾಕಿ,ಉತ್ಪನ್ನ ಅಭಿವೃದ್ಧಿ ತಂತ್ರಗಳು ಮತ್ತು ತಂತ್ರಜ್ಞಾನ ಅಳವಡಿಸಿಕೊಳ್ಳುವ ಮೂಲಕ ತಮ್ಮ ಕೈಗಾರಿಕೆಗಳನ್ನು ಯಶಸ್ವಿಯಾಗಿ ಮುನ್ನಡೆಸಿದ್ದಾರೆ.

ಟಿವಿ9 ಡೇರ್​2ಡ್ರೀಮ್​ ಅವಾರ್ಡ್​ ವಿಭಾಗಗಳು ಹೀಗಿವೆ:

ಎರಡು ವಲಯಗಳಲ್ಲಿ (segment) ಒಟ್ಟು 15 ವಿಭಾಗಗಳಲ್ಲಿ (Categories) ಅವಾರ್ಡ್​​ಗಳನ್ನು ನೀಡಲಾಗುವುದು:
1. 75 ಕೋಟಿ ರೂಪಾಯಿಯಿಂದ 150 ಕೋಟಿ ರೂಪಾಯಿ ವಾರ್ಷಿಕ ವಹಿವಾಟು ಹೊಂದಿರುವ ಕೈಗಾರಿಕೆಗಳು
2. 150 ಕೋಟಿ ರೂಪಾಯಿ ವಾರ್ಷಿಕ ವಹಿವಾಟು ಹೊಂದಿರುವ ಮಧ್ಯಮ ಕಾರ್ಪೊರೇಟ್ ವಲಯ

15 ವಿಭಾಗಗಳು ಹೀಗಿವೆ:

1. ಕಂಪನಿ ಆಫ್​ ದಿ ಇಯರ್ – ವಲಯವಾರು ಪ್ರಶಸ್ತಿಗಳು ( ಪ್ರತಿ ವಲಯದಲ್ಲೂ 8-9 ಅವಾರ್ಡ್​​​ಗಳು)
2. ಎಮರ್ಜಿಂಗ್​ ಕಂಪನಿ ಆಫ್​ ದಿ ಇಯರ್​
3. ತಂತ್ರಜ್ಞಾನ ಅಳವಡಿಸಿಕೊಂಡು ಉದ್ಯಮವನ್ನು ಮಾರ್ಪಾಡು ಮಾಡಿರುವ ಕೈಗಾರಿಕೆ

ಪ್ರೇರಣಾದಾಯಕ ನಾಯಕ:
1. ಯುವ ಉದ್ಯಮ ನಾಯಕ
2. ವರ್ಷದ ಮಹಿಳಾ ಉದ್ಯಮಿ
3. ವರ್ಷದ ಉದ್ಯಮಿ

ಭಾರತದ ಮುಂಚೂಣಿ ನ್ಯೂಸ್​ ಚಾನೆಲ್​ ಟಿವಿ9 ಭಾರತ್​​ವರ್ಷ್​ ​ದಲ್ಲಿ ಮತ್ತು ಟಿವಿ9 ನೆಟ್​ವರ್ಕ್​​ನ ನಾನಾ​​ ಡಿಜಿಟಲ್​ ವೇದಿಕೆಗಳಲ್ಲಿ ಪ್ರಶಸ್ತಿ ಕಾರ್ಯಕ್ರಮವನ್ನು ಪ್ರಸಾರ ಮಾಡಲಾಗುವುದು.

ಡೇರ್​2ಡ್ರೀಮ್​ ಅವಾರ್ಡ್ಸ್​​ ಸೀಸನ್​-3 ನಾಮಿನೇಶನ್​ ಈಗ ಆರಂಭವಾಗಿದೆ. ಭಾರತದ ಎಲ್ಲಾ ಸ್ವದೇಶಿ ಉದ್ಯಮಗಳು ಮತ್ತು ನವೋದ್ಯಮಿಗಳು ಈ ಪ್ರತಿಷ್ಠಿತ ಪ್ರಶಸ್ತಿಗಾಗಿ ಇಲ್ಲಿ ಅರ್ಜಿ ಸಲ್ಲಿಸಬಹುದು. ಪ್ರಶಸ್ತಿಗಾಗಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 2021 ನವೆಂಬರ್ 18 (ಗುರುವಾರ).

ಪಾಲ್ಗೊಳ್ಳಲು ಇಲ್ಲಿ ಕ್ಲಿಕ್​ ಮಾಡಿ
.

 

TV9 Kannada


Leave a Reply

Your email address will not be published. Required fields are marked *